ಗ್ರಾಮ ಪಂಚಾಯ್ತಿ ಸದಸ್ಯನ ಬರ್ಬರ ಕೊಲೆ; ಓರ್ವ ವ್ಯಕ್ತಿಯ ಬಂಧನ!
ಕೋಲಾರ: ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ಬಳಿ ಗ್ರಾಮ ಪಂಚಾಯ್ತಿ ಸದಸ್ಯನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆ ನಡೆದಿದೆ.
ಅನಿಲ್ ಕುಮಾರ್ (38) ಮೃತ ರ್ದುದೈವಿ. ಮಾಲೂರು ತಾಲೂಕಿನ ಮೀಣಸಂದ್ರ ಗ್ರಾಮದವನಾಗಿರುವ ಅನಿಲ್, ಜಯಮಂಗಲ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ. ವಯಸ್ಸಿನ್ನು ಚಿಕ್ಕದಾದರೂ ಗ್ರಾಮದಲ್ಲಿ ಒಳ್ಳೆಯ ಹೆಸರು ಗಳಿಸಿ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ. ಮಾಲೂರು ಶಾಸಕ ಕೆ.ವೈ ನಂಜೇಗೌಡ ಆಪ್ತನಾಗಿದ್ದ ಅನಿಲ್, ಗ್ರಾಮದ ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಮಾಡುವ ಮೂಲಕ ಗ್ರಾಮದಲ್ಲಿದ ಕೆಲ ರಾಜಕೀಯ ವಿರೋಧಿಗಳ ಕೋಪಕ್ಕೆ ಕಾರಣವಾಗಿದ್ದ.
ಮಾಲೂರು ಶಾಸಕ ಕೆ.ವೈ ನಂಜೇಗೌಡ ಆಪ್ತನಾಗಿದ್ದ ಅನಿಲ್ ಗ್ರಾಮದ ಯಾವುದೇ ಸಮಸ್ಯೆ ಇದ್ರು ಪರಿಹಾರ ಮಾಡುವ ಮೂಲಕ ಗ್ರಾಮದಲ್ಲಿದ ಕೆಲ ರಾಜಕೀಯ ವಿರೋಧಿಗಳ ಕೋಪಕ್ಕೆ ಕಾರಣವಾಗಿದ್ದ. ಆದ್ರೆ ಅದೇನಾಯ್ತೋ ಗೊತ್ತಿಲ್ಲ ಇಂದು ಎಂದಿನಂತೆ ತನ್ನ ದ್ವಿಚಕ್ರ ವಾಹನದಲ್ಲಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಾಲೂರು ಪಟ್ಟಣದ ಕಡೆಗೆ ಅನಿಲ್ ಬರುವಾಗ ಹಿಂಬಾಲಿಸಿಕೊಂಡು ಬಂದ ಅಪರಿಚಿತ ದುಷ್ಕರ್ಮಿಗಳು ಮಚ್ಚಿನಿಂದ ಅನಿಲ್ ನ ತಲೆಗೆ ಕೊಚ್ಚಿ ಕೊಲೆ ಮಾಡಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಕೋಲಾರ-ಹೊಸೂರು ಹೈವೇ ಆಗಿರೋದ್ರಿಂದ ಎಲ್ಲಿ ಜನ ಸೆರ್ತಾರೋ ಅಂತ ಗಾಬರಿಗೊಂಡ ದುಷ್ಕರ್ಮಿಗಳು ಕೊಲೆಗೆ ಬಳಸಿದ್ದ ಮಚ್ಚು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ವಿಷಯ ತಿಳಿದ ಕೂಡಲೇ ಕೊಲೆ ನಡೆದ ಸ್ಥಳಕ್ಕೆ ಬಂದ ಕೋಲಾರ ಎಸ್ಪಿ ನಾರಾಯಣ್ ಹಾಗೂ ಮಾಲೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅನುಮಾನಾಸ್ಪದ ಓರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯನಾಗಿದ್ದ ಅನಿಲ್, ತನ್ನದೇ ಆದ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ, ರಾಜಕೀಯದ ಜೊತೆ ಆರ್ಥಿಕವಾಗಿಯೂ ಬೆಳೆಯುತ್ತಿದ್ದ.ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿ 12 ವರ್ಷಗಳ ಹಿಂದೆ ಮದುವೆಯಾಗಿದ್ದ ಅನಿಲ್ ಗೆ ಒಬ್ಬಳು ಹೆಣ್ಣು ಮಗಳು ಸಹ ಇದ್ದಾಳೆ. ತನ್ನ ಕುಟುಂಬಕ್ಕೆ ಆಧಾರವಾಗಿದ್ದವನ್ನು ಈ ರೀತಿ ರಸ್ತೆಯ ಮಧ್ಯದಲ್ಲಿ ಕೊಲೆಯಾಗಿ ಬಿದ್ದಿದನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಟ್ಟಾರೆ ಗ್ರಾಮ ಪಂಚಾಯತಿ ಸದಸ್ಯನ ಕೊಲೆಯ ಹಿಂದೆ ಸಾಕಷ್ಟು ಅನುಮಾನಗಳಿವೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸರಿಯಾದ ಆರೋಪಿಗಳನ್ನು ಬಂಧಿಸಿದ ಬಳಿಕವಷ್ಟೇ ಕೊಲೆಯ ಹಿಂದಿನ ವಿಚಾರ ಹೊರ ಬೀಳಲಿದೆ.
ಬಿಎಂಡಬ್ಲ್ಯೂ ಕಾರಿನ ಗಾಜು ಒಡೆದು 13 ಲಕ್ಷ ರೂ. ದೋಚಿದ ಕಳ್ಳರು
ಬೆಂಗಳೂರು: ಬೆಂಗಳೂರಿನ ಹೊರವಲಯ ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ನಿಲ್ಲಿಸಲಾಗಿದ್ದ ಬಿಎಂಡಬ್ಲ್ಯೂ ಕಾರಿನ (BMW Car) ಗಾಜನ್ನು ಒಡೆದು 13 ಲಕ್ಷ ರೂ. ಹಣವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ಸೋಂಪುರದ ಸಬ್ ರಿಜಿಸ್ಟ್ರಾರ್ (Sarjapur Sub registrar Office) ಕಚೇರಿಗೆ ಭೂ ವ್ಯವಹಾರಕ್ಕೆಂದು ಬಿಎಂಡಬ್ಲ್ಯೂ ಕಾರಿನಲ್ಲಿ 13 ಲಕ್ಷ ರೂ. ಹಣವನ್ನು ತೆಗೆದುಕೊಂಡು ಬಂದು ನಿಲ್ಲಿಸಿದ್ದನ್ನು ಗಮನಿಸಿದ ಕಳ್ಳರು, ಕಾರಿನ ಮಾಲೀಕ ಹಣವನ್ನು ಕಾರಿನಲ್ಲಿ ಬಿಟ್ಟು ಹೋಗುವುದನ್ನೇ ಕಾದು ಗಾಜು ಒಡೆದು ಹಣವನ್ನು ಲಪಟಾಯಿಸಿದ್ದಾರೆ. ಕಳ್ಳರು ಕಾರಿನ ಗಾಜು ಒಡೆದು ಹಣ ಕದಿಯುವ ದೃಶ್ಯಗಳು ಪಕ್ಕದ ಮಳಿಗೆಯ ಸಿಸಿಟಿವಿ ಕ್ಯಾಮರಾದಲ್ಲಿ (CCTV) ಸೆರೆಯಾಗಿದೆ.
ಕಾರನ್ನು ನಿಲ್ಲಿಸಿದ ಸ್ಥಳದಲ್ಲಿ ರಸ್ತೆಯ ಬದಿಯಲ್ಲಿ ಏಳೆಂಟು ಜನರು ನಿಂತಿದ್ದಾರೆ. ಆದರೆ, ಕಾರಿನಲ್ಲಿ ಚಾಲಕ ಕೂರುವ ಬಲ ಬದಿಯಲ್ಲಿ ಮಳಿಗೆಗಳು ಮಾತ್ರ ಇದ್ದು ನೆಲ ಮಹಡಿಯಲ್ಲಿ ಯಾರೂ ಇರುವುದಿಲ್ಲ. ಆಗ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ಖದೀಮರು ಕೈಯಲ್ಲಿ ವಿಭಿನ್ನವಾದ ವಸ್ತುವನ್ನು ಹಿಡಿದುಕೊಂಡು ಕಾರಿನ ಗಾಜಿಗೆ ಮುಟ್ಟಿಸಿದಾಕ್ಷಣ ಕಾರು ಸಂಪೂರ್ಣವಾಗಿ ಪುಡಿ, ಪುಡಿಯಾಗಿ ಒಡೆದು ಬಿದ್ದಿದೆ. ನಂತರ, ಅಕ್ಕ ಪಕ್ಕದಲ್ಲಿ ಜನರಿದ್ದರೂ ಅದನ್ನು ಲೆಕ್ಕಿಸದೇ ಕಾರಿನೊಳಗೆ ನುಗ್ಗಿ ಹಣ ಬ್ಯಾಗ್ ಎತ್ತಿಕೊಳ್ಳುತ್ತಾನೆ. ಅಲ್ಲಿ ಪಕ್ಕದಲ್ಲಿಯೇ ನಂಬರ್ ಪ್ಲೇಟ್ ಇಲ್ಲ ಬೈಕ್ನಲ್ಲಿ ನಿಂತಿದ್ದ ತನ್ನ ಸಹಚರನ ಬೈಕ್ ಹತ್ತಿಕೊಂಡು ಅಲ್ಲಿಂದ ಪರಾರಿ ಆಗಿದ್ದಾರೆ.
ಇನ್ನು ಕಾರಿನ ಮಾಲೀಕರು ಬಂದು ನೋಡಿದಾಗ ಕಾರಿನ ಗಾಜು ಒಡೆದಿದ್ದು, ಹಣ ಬ್ಯಾಗ್ ಇಲ್ಲದಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ಕ್ಷಣಮಾತ್ರದಲ್ಲಿ ಹಣ ಎಗರಿಸಿದ ಸಿಸಿಟಿವಿ ಕ್ಯಾಮರಾ ವಿಡಿಯೋ ಆಧರಿಸಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.