ಯುವ ಚುನಾವಣಾ ತಜ್ಞರೊಬ್ಬರು ನೀಡಿದ ಸಲಹೆಯನ್ನು ಪರಿಗಣಿಸದೆ, ಹೈಕಮಾಂಡ್ ನಿಂದ ನೀಡಲ್ಪಟ್ಟ ಬಂಟ್ವಾಳ ಟಿಕೆಟ್ ಕೈ ಚೆಲ್ಲಿದ್ದ ಪದ್ಮರಾಜ್ ಗೆ ಈ ಬಾರಿ ಕೈಗೂಡಬಹುದೇ ಲೋಕಸಭಾ ಟಿಕೆಟ್?
ಮಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ಯವ ಅಭ್ಯರ್ಥಿ ರೊಬ್ಬರಿಗೆ ಚುನಾವಣಾ ತಂತ್ರಗಾರಿಕೆ ನಡೆಸಿ, ಆ ಮೂಲಕ ಕೊಡಗಿನ ಅಭೇದ್ಯ ವಿಧಾನಸಭಾ ಕ್ಷೇತ್ರವನ್ನು ಭೇದಿಸುವಲ್ಲಿ ಯಶಸ್ವಿಯಾಗಿಸಿ, ಅಭ್ಯರ್ಥಿ ಗೆಲ್ಲುವಲ್ಲಿ ಸಹಾಯ ಮಾಡಿದ್ದ ಮಂಗಳೂರು ಮೂಲದ ಯುವ ಚುನಾವಣಾ ತಜ್ಞರೊಬ್ಬರು ಅಲ್ಲಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅದೇ ಸಂದರ್ಭದಲ್ಲಿ ಆ ಚುನಾವಣಾ ತಜ್ಞರು ಬಂಟ್ವಾಳದಲ್ಲಿ ಸಹ ಯುವ ನಾಯಕ ಪದ್ಮರಾಜ್ ಪರವಾಗಿ ನಾಲ್ಕು ತಿಂಗಳುಗಳ ಕಾಲ ತಂತ್ರಗಾರಿಕೆ ನಡೆಸಿದ್ದರು ಎಂಬ ವಿಷಯ ಈಗ ಬಹಿರಂಗವಾಗಿದೆ.
ಆ ತಂತ್ರಗಾರಿಕೆಯ ಫಲದಿಂದ ಇಡೀ ಕಾಂಗ್ರೆಸ್ಸಿನ ಜಿಲ್ಲೆಯ ನಾಯಕರಿಗೆ ಶಾಕ್ ನೀಡುವಂತೆ ಪದ್ಮರಾಜ್ ಮುಂಚೂಣಿ ಪ್ರಬಲ ಅಭ್ಯರ್ಥಿಯಾಗಿ ಒಮ್ಮಿಂದೊಮ್ಮೆಲೇ ಹೊರಹೊಮ್ಮಿದ್ದರು ಎಂದು ತಿಳಿದು ಬಂದಿದೆ.
ಇದರ ಫಲವಾಗಿ ಪದ್ಮ ರಾಜ್ ರವರಿಗೆ ಕಾಂಗ್ರೆಸ್ ಹೈಕಮಾಂಡ್ ಬಂಟ್ವಾಳ ಕ್ಷೇತ್ರದ ಟಿಕೆಟ್ ಆಫರ್ ಮಾಡಿತ್ತು. ಆದರೆ ನಾನು ಮಂಗಳೂರು ದಕ್ಷಿಣದ ಬಗ್ಗೆ ಆಸಕ್ತಿ ಹೊಂದಿದ್ದೇನೆ ಎಂದು ಹೈಕಮಾಂಡಿಗೆ ತಿಳಿಸಿದ ಪದ್ಮರಾಜ್ ಬಂಟ್ವಾಳದ ಟಿಕೆಟ್ ಯನ್ನು ತಿರಸ್ಕರಿಸಿದ್ದರು.
ಇತ್ತೀಚಿಗೆ ಖಾಸಗಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ನನಗೆ ಹೈಕಮಾಂಡ್ ನೀಡಲ್ಪಟ್ಟ ಬೇರೆ ಕ್ಷೇತ್ರದ ಟಿಕೆಟ್ ಯನ್ನು
ತ್ಯಾಗ ಮಾಡಿದ್ದೇನೆ ಎಂದು ಸ್ವತಃ ಮಾಧ್ಯಮದ ಮುಂದೆ ಪದ್ಮರಾಜ್ ಹೇಳಿಕೊಂಡಿದ್ದರು.
ಈ ಸಂದರ್ಶನದ ನಂತರ ಬಂಟ್ವಾಳದ ಟಿಕೆಟ್ ತಿರಸ್ಕರಿಸಿದ ಬಗ್ಗೆ ಚರ್ಚೆಗಳು ಭುಗಿಲೆದ್ದಿವೆ.
ಯುವ ಚುನಾವಣಾ ತಜ್ಞರೊಬ್ಬರ ನಾಲ್ಕು ತಿಂಗಳಗಳ ಕಾಲದ ಅದ್ಭುತ ತಂತ್ರಗಾರಿಕೆ ಅದ್ಭುತ ಫಲವನ್ನು ನೀಡಿತು. ಆದರೆ ಕೊನೆ ಹಂತದಲ್ಲಿ ಅವರ ಗಂಭೀರ ಸಲಹೆಯನ್ನು ಪರಿಗಣಿಸದೆ ಪದ್ಮರಾಜ್ ಬಂಟ್ವಾಳದ ಟಿಕೆಟ್ ಯನ್ನು ತಪ್ಪಿಸಿಕೊಂಡು ವಿಧಾನಸಭೆಗೆ ಪ್ರವೇಶಿಸುವ ಅವಕಾಶವನ್ನು ಕಳೆದ ಬಾರಿ ಕಳೆದುಕೊಂಡಿದ್ದರು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಬಂಟ್ವಾಳ ಟಿಕೆಟ್ ಯನ್ನು ಸ್ವತಹ ತಿರಸ್ಕರಿಸಿದ ಪದ್ಮರಾಜ್ ರವರಿಗೆ ನಂತರ ವಿಶ್ವಾಸದಲ್ಲಿದ್ದ ಮಂಗಳೂರು ದಕ್ಷಿಣದ ಟಿಕೆಟ್ ಸಹ ತಪ್ಪಿ ಹೋಗಿತ್ತು.
ಯಾರು ಊಹಿಸಿದ ರೀತಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಗ್ಗೆ ತಂತ್ರಗಾರಿಕೆ ನಡೆಸಿದ್ದ ಯುವ ಚುನಾವಣಾ ತಜ್ಞರೊಬ್ಬರು ಪದ್ಮರಾಜ್ ಹೆಸರು ಬಂಟ್ವಾಳದ ಟಿಕೇಟ್ ನೀಡುವವರೆಗೆ ತಂದು ನಿಲ್ಲಿಸಿ
ಇಡೀ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರನ್ನು ಅಚ್ಚರಿಗೆ ಒಳಪಡಿಸಿದ್ದರು.
ಈ ಮೂಲಕ ಬಂಟ್ವಾಳ ಟಿಕೆಟ್ ಕೈ ಚೆಲ್ಲಿದ್ದ ಪದ್ಮರಾಜ್ ಗೆ ಈ ಬಾರಿ ಲೋಕಸಭೆಯ ಚುನಾವಣೆಯ ಟಿಕೆಟ್ ಸಿಗಬಹುದು ಎಂಬುದು ಒಂದು ಮೂಲಗಳಿಂದ ತಿಳಿದು ಬಂದಿದೆ.
ಮಾಜಿ ಸಚಿವ ವಿನಯಕುಮಾರ್ ಸೂರಕೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ನಡುವೆ
ಟಿಕೆಟಿಗಾಗಿ ಬಹಳಷ್ಟು ಪೈಪೋಟಿ ನಡೆಯುತ್ತಿದೆ ಎಂದು ಇನ್ನೊಂದು ಮೂಲಗಳು ಸ್ಪಷ್ಟಪಡಿಸಿವೆ.
ಅಂದು ಕೈ ಚೆಲ್ಲಿದ್ದ ಟಿಕೆಟ್ ಈ ಬಾರಿ ಕೈಗೂಡಬಹುದೇ ಎಂಬುದು ಈಗ ಕುತೂಹಲದ ಪ್ರಶ್ನೆಯಾಗಿದೆ.