ಬಂಟ್ವಾಳ :ಎನ್ ಸಿರೋಡ್ ನಲ್ಲಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಟಯರ್ ಸ್ಫೋಟ; ಹಲವು ಪ್ರಯಾಣಿಕರಿಗೆ ಗಾಯ...!
Twitter
Facebook
LinkedIn
WhatsApp
ಟಯರ್ ಒಡೆದು ಹೋದ ಪರಿಣಾಮ, ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ನಿಲ್ಲಿಸಿದ್ದ ರಿಕ್ಷಾ ಕ್ಕೆ ಡಿಕ್ಕಿಯಾಗಿ ಬಳಿಕ ಚರಂಡಿಗೆ ಬಿದ್ದು ನಾಲ್ವರು ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ಎನ್.ಸಿ.ರೋಡ್ ಎಂಬಲ್ಲಿ ಸಂಜೆವೇಳೆ ನಡೆದಿದೆ.
ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ಧ ಕೆಎಸ್.ಆರ್.ಟಿಸಿ ಬಸ್ ನ ಟಯರ್ ಕಾವಳಮೂಡೂರು ಎನ್.ಸಿ.ರೋಡ್ ತಲುಪುತ್ತಿದ್ಧಂತೆ ಬ್ಲಾಸ್ಟ್ ಗೊಂಡಿದೆ ಎಂದು ಬಸ್ ನ ಚಾಲಕ ತಿಳಿಸಿದ್ದಾರೆ.
ಟಯರ್ ಒಡೆದು ಹೋದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿ ನಿಲ್ಲಿಸಲಾಗಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾ ಪಲ್ಟಿಯಾಗಿದೆ.
ಅದೃಷ್ಟವಶಾತ್ ರಿಕ್ಷಾದಲ್ಲಿದ್ದ ಪ್ರಯಾಣಿಕರು ಅಂಗಡಿಗೆ ಹೋಗಿದ್ದರು , ಹಾಗಾಗಿ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡು ಬಂದಿದ್ದ ಪ್ರಯಾಣಿಕರು ಸೇಫ್ ಆಗಿದ್ದಾರೆ.