ಬಂಟ್ವಾಳ : ಬೆಳ್ಳಂಬೆಳಗ್ಗೆ ನಾಲ್ವರು ದರೋಡೆಕೋರರಿಂದ ಮನೆಗೆ ನುಗ್ಗಿ ತಾಯಿ ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂಪಾಯಿ ದರೋಡೆ...!
ಬಂಟ್ವಾಳ: ನಾಲ್ವರು ಮುಸುಕುದಾರಿ ದರೋಡೆ ಕೋರರ ತಂಡ ಮನೆಯೊಂದರಲ್ಲಿದ್ದ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ ನಗನಗದನ್ನು ದರೋಡೆ ಮಾಡಿದ ಘಟನೆ ಇಂದು ಗುರುವಾರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಗ್ಗದಲ್ಲಿ ನಡೆದಿದೆ.
ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿ ರುವ ಪ್ಲೋರಿನ್ ಪಿಂಟೋ ಅವರ ಹೊಸ ಮನೆಯಲ್ಲಿ ಈ ದರೋಡೆ ನಡೆದಿದೆ. ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೊ ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದು ಗಂಡಸರಿಲ್ಲದ ಮನೆಯನ್ನು ಹೊಂಚುಹಾಕಿ ಈ ದರೋಡೆ ನಡೆಸಲಾಗಿದೆ.ಗೊದ್ರೇಜ್ ನಲ್ಲಿರಿಸಲಾಗಿದ್ದ ಸುಮಾರು 2.90 ಲಕ್ಷ ರೂಮೌಲ್ಯದ ವಿವಿಧ ಬಂಗಾರಗಳು, 30 ಸಾವಿರನಗದು ಹಾಗೂ ಒಂದು ಮೊಬೈಲ್ ಪೋನ್ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಗನಗದು ದೋಚಿದ್ದಾರೆ. ಇಂದು ಬೆಳಿಗ್ಗೆ ಸುಮಾರು 6.30 ರ ಸಮಯದಲ್ಲಿ ಬೆಲ್ ಹಾಕಿದಾಗ ಬಾಗಿಲು ತೆಗದು ನೋಡಿದಾಗ ನಾಲ್ವರು ಮುಸುಕುದಾರಿಗಳು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿರುವ ನಗನಗದು ಕೊಡುವಂತೆ ಬೆದರಿಸಿದ್ದಾರೆ.
ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆಒಡ್ಡಿದಾಗ ಗೊದ್ರೇಜ್ ನ ಬೀಗದ ಕೀ ನೀಡಿದ್ದಾರೆ. ಬಂಗಾರವನ್ನು ದೋಚುವ ವೇಳೆ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ ಎಂದು ಇವರ ಅಣ್ಣ ವರದಿಗಾರ ಆಸ್ಟಿನ್ ಪಿಂಟೋ ಮಾಧ್ಯಮ ದವರಿಗೆ ಮಾಹಿತಿ ನೀಡಿದ್ದಾರೆ.ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಅಂಗಡಿಯಿಂದ ಜ್ಯೂಸ್ ಮೆಷಿನ್ ಒಂದನ್ನು ಕಳವು ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಬೇಟಿ ನೀಡಿದ್ದಾರೆ. ಹಾಗೂ ಶ್ವಾನ ದಳ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ನವಮಂಗಳೂರು ಬಂದರಿಗೆ ಬಂದ ವರ್ಷದ ಮೊದಲ ಪ್ರವಾಸಿ ಹಡಗು
ಮಂಗಳೂರು ಜನವರಿ 11: ನವ ಮಂಗಳೂರು ಬಂದರಿಗೆ 2024 ಪ್ರಥಮ ಪ್ರವಾಸಿ ಹಡಗು ಆಗಮಿಸಿದೆ. ಸಿಮಾರು 980 ಪ್ರವಾಸಿಗರನ್ನು ಹೊತ್ತುಕೊಂಡು ಬಂದಿದ್ದ ಈ ಪ್ರವಾಸಿ ಹಡಗನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಮಾರ್ಷಲ್ ಐಲ್ಯಾಂಡ್ಸ್ ಫ್ಲ್ಯಾಗ್ಡ್ ಹಡಗು ಬರ್ತ್ ನಂ. 04 ರಲ್ಲಿ ಲಂಗರು ಹಾಕಿತ್ತು. ಈ ಹಡಗಿನಲ್ಲಿ 980 ಪ್ರಯಾಣಿಕರು ಮತ್ತು 752 ಸಿಬ್ಬಂದಿ ಆಗಮಿಸಿದ್ದರು. ಈ ನೌಕೆಯು ದುಬೈ, ಮುಂಬೈ ಮತ್ತು ಮೊರ್ಮುಗೋವಾ ಬಂದರುಗಳಿಂದ ಇಂದು ಮಂಗಳೂರಿಗೆ ಆಗಮಿಸಿತು. ಹಡಗಿನ ಒಟ್ಟಾರೆ ಉದ್ದವು 239 ಮೀಟರ್‌ಗಳಾಗಿದ್ದು, 66,172 ಒಟ್ಟು ಟನ್‌ಗಳ ಸಾಗಿಸುವ ಸಾಮರ್ಥ್ಯ ಹೊಂದಿದೆ.
ಮಂಗಳೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವರ್ಣರಂಜಿತ ಸ್ಮರಣಿಕೆಮಂಗಳೂರಿನ ಯಕ್ಷಗಾನ ಕಲಾವಿದರಿಂದ ಕ್ರೂಸ್ ಪ್ರಯಾಣಿಕರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಪ್ರವಾಸಿಗರು ಕ್ರೂಸ್ ಲಾಂಜ್‌ನಲ್ಲಿ ವಿವಿಧ ಸಾಂಸ್ಕೃತಿಕ ಆಕರ್ಷಣೀಯ ಸ್ಥಳಗಳನ್ನು ನೋಡಿ ಆನಂದಿಸಿದರು.
ಪ್ರವಾಸಿಗರಿಗೆ ವೈದ್ಯಕೀಯ ತಪಾಸಣೆ, ಬಹು ವಲಸೆ ಮತ್ತು ಕಸ್ಟಮ್ಸ್ ಕೌಂಟರ್‌ಗಳು, ಮಂಗಳೂರು ನಗರದ ಸುತ್ತಮುತ್ತ ಸಾರಿಗೆ ಬಸ್‌ಗಳು ಮತ್ತು ವಿಶೇಷ ಟ್ಯಾಕ್ಸಿಗಳು, ಆಯುಷ್ ಸಚಿವಾಲಯದ ಧ್ಯಾನ ಕೇಂದ್ರ, ವರ್ಚುಯಲ್ ರಿಯಾಲಿಟಿ ಅನುಭವ ವಲಯ, ಉಚಿತ ವೈಫೈ ಸೇರಿದಂತೆ ಹಲವು ಸಿದ್ಧತೆಗಳನ್ನು ಮಾಡಲಾಗಿತ್ತು. ನಂತರ ಸ್ಥಳೀಯ ತಂಡ ಯಕ್ಷಗಾನ ಪ್ರದರ್ಶನ ನೀಡಿ ಪ್ರವಾಸಿಗರನ್ನು ರಂಜಿಸಿತು. ಕಾರ್ಕಳ ಗೋಮಟೇಶ್ವರ ದೇವಸ್ಥಾನ, ಮೂಡಬಿದ್ರಿಯ 1000 ಕಂಬಗಳ ದೇವಸ್ಥಾನ, ಸೋನ್ಸ್ ಫಾರ್ಮ್, ಅಚಲ್ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ನಗರದ ಸಾಂಪ್ರದಾಯಿಕ ಮನೆಗಳಂತಹ ವಿವಿಧ ಪ್ರವಾಸಿ ತಾಣಗಳಿಗೆ ಪ್ರಯಾಣಿಕರು ಭೇಟಿ ನೀಡಿದರು.