ಬಂಟ್ವಾಳ : ಮಗುವಿನ ನಿರೀಕ್ಷೆಯಲ್ಲಿದ್ದ 6 ತಿಂಗಳ ಗರ್ಭಿಣಿ ಮೃತ್ಯು...!
Twitter
Facebook
LinkedIn
WhatsApp
ಬಂಟ್ವಾಳ ಫೆಬ್ರವರಿ 16: ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ 6 ತಿಂಗಳ ಗರ್ಭಿಣಿ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಫೆಬ್ರವರಿ 14 ರಂದು ನಡೆದಿದೆ.
ಮೃತರನ್ನು ತೆಂಕಕಜೆಕಾರು ನಿವಾಸಿ ವಸಂತ ಅವರ ಪತ್ನಿ ಸುಜಾತಾ (40) ಎಂದು ಗುರುತಿಸಲಾಗಿದೆ. 6 ತಿಂಗಳ ಗರ್ಭಿಣಿಯಾಗಿರುವ ಅವರು ಗರ್ಭಸ್ಥ ಶಿಶುವಿಗೆ ಹೃದಯದ ಸಮಸ್ಯೆ ಹಿನ್ನಲೆ ಫೆಬ್ರವರಿ 12ರಂದು ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಫೆಬ್ರವರಿ 14ರ ಸಂಜೆ ಆರೋಗ್ಯ ಏರುಪೇರಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ವಸಂತ-ಸುಜಾತಾ ದಂಪತಿಗೆ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಮಕ್ಕಳಾಗಿರಲಿಲ್ಲ. ಪ್ರಸ್ತುತ ಚೊಚ್ಚಲ ಗರ್ಭಿಣಿಯಾಗಿದ್ದರು. ಸುಜಾತಾ ಹಲವು ವರ್ಷಗಳ ಕಾಲ ಸರಪಾಡಿ ಗ್ರಾಮ ಕರಣಿಕರ ಕಚೇರಿಯಲ್ಲಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಗ್ರಾಮದಲ್ಲಿಯೂ ಚಿರಪರಿಚಿತರಾಗಿದ್ದರು.