ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಾರ್ಚ್‌ 31ರ ಭಾನುವಾರವೂ ಬ್ಯಾಂಕ್ ಓಪನ್; ಆರ್‌ಬಿಐ

Twitter
Facebook
LinkedIn
WhatsApp
ಮಾರ್ಚ್‌ 31ರ ಭಾನುವಾರವೂ ಬ್ಯಾಂಕ್ ಓಪನ್; ಆರ್‌ಬಿಐ

ನವದೆಹಲಿ : ದೇಶಾದ್ಯಂತ ವಾರ್ಷಿಕ ಲೆಕ್ಕಪತ್ರಗಳ ಕ್ಲೋಸಿಂಗ್‌ ದಿನವಾಗಿರುವ ಕಾರಣಕ್ಕೆ ಮಾರ್ಚ್‌ 31ರ ಭಾನುವಾರದಂದು ದೇಶದ ಎಲ್ಲಾ ಬ್ಯಾಂಕ್‌ಗಳು ಸಾರ್ವಜನಿಕರಿಗೆ ಮುಕ್ತವಾಗಿರಲಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ಏಜೆನ್ಸಿ ಬ್ಯಾಂಕ್‌ಗಳು ಮಾರ್ಚ್ 31 ರಂದು ಸರ್ಕಾರಿ ವ್ಯವಹಾರಗಳನ್ನು ತೆರೆದಿಡಬೇಕು ಎಂದು ಆರ್‌ಬಿಐ ಪ್ರಕಟಣೆಯಲ್ಲಿ ಹೇಳಿದೆ.

ಕೇಂದ್ರ ಸರ್ಕಾರ ಈ ಕುರಿತಾಗಿ ಆರ್‌ಬಿಐಗೆ ಮನವಿ ಮಾಡಿದ್ದು, ಸರ್ಕಾರಿ ವ್ಯವಹಾರಗಳನ್ನು ಹೊಂದಿರುವ ದೇಶದ ಎಲ್ಲಾ ಬ್ಯಾಂಕ್‌ಗಳು ಮಾರ್ಚ್‌ 31ರ ಭಾನುವಾರದಂದು ತೆರೆದಿರಬೇಕು ಎಂದು ಹೇಳಿದೆ. ಆ ಮೂಲಕ 2023-24ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಸರ್ಕಾರಿ ವ್ಯವಹಾರಗಳನ್ನು ಮುಗಿಸುವ ಇರಾದೆ ಹೊಂದಿದೆ. ಇದರಿಂದಾಗಿ ಸರ್ಕಾರಿ ವ್ಯವಹಾರಗಳನ್ನು ಹೊಂದಿರುವ ಎಲ್ಲಾ ಏಜೆನ್ಸಿ ಬ್ಯಾಂಕ್‌ಗಳು ಹಣಕಾಸು ವರ್ಷದ ಕೊನೆ ದಿನ ತೆರೆದಿರಲಿದೆ ಎಂದು ಆರ್‌ಬಿಐ ತಿಳಿಸಿದೆ.

ಇದಕ್ಕೂ ಮುನ್ನ ಆದಾಯ ತೆರಿಗೆ ಇಲಾಖೆಯು ಮಾರ್ಚ್ 29 ರಿಂದ ಮಾರ್ಚ್ 31 ರವರೆಗಿನ ದೀರ್ಘ ವೀಕೆಂಡ್‌ಅನನ್ನು ಬಾಕಿ ಉಳಿದಿರುವ ತೆರಿಗೆ ಸಂಬಂಧಿತ ಕೆಲಸವನ್ನು ಪರಿಗಣಿಸಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ಮಾರ್ಚ್ 29 ಗುಡ್ ಫ್ರೈಡೇ ರಜಾದಿನವಾಗಿದೆ, ಮಾರ್ಚ್ 30 ಶನಿವಾರ, ಆದರೆ ಮಾರ್ಚ್ 31 ಭಾನುವಾರವಾಗಿದೆ.

“ಬಾಕಿ ಉಳಿದಿರುವ ಇಲಾಖಾ ಕಾರ್ಯಗಳನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ, ಭಾರತದಾದ್ಯಂತ ಎಲ್ಲಾ ಆದಾಯ ತೆರಿಗೆ ಕಚೇರಿಗಳು 29, 30 ಮತ್ತು 31 ಮಾರ್ಚ್ 2024 ರಂದು ತೆರೆದಿರುತ್ತವೆ” ಎಂದು ಆದಾಯ ತೆರಿಗೆ ಇಲಾಖೆಯು ಮಾರ್ಚ್ 31, 2024 ರ ಆದೇಶದಲ್ಲಿ ತಿಳಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ