ಬೆಂಗಳೂರು: ಹಾಡಹಗಲೇ ಯುವಕನ ಮೇಲೆ ಪುಂಡರ ಗ್ಯಾಂಗ್ವೊಂದು ಏಕಾಏಕಿ ಅಟ್ಯಾಕ್ (Attack) ಮಾಡಿದ್ದು, ದೊಣ್ಣೆ ಮತ್ತು ಬ್ಯಾಟ್ನಿಂದ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಕಾಟನ್ ಪೇಟೆಯ (Cottonpete) ಜಾಲಿ ಮೊಹಲ್ಲಾದಲ್ಲಿ ನಡೆದಿದೆ.
ಬೆಂಗಳೂರು:ಹಾಡಹಗಲೇ ಯುವಕನ ಮೇಲೆ ಪುಂಡರ ಅಟ್ಯಾಕ್
Twitter
Facebook
LinkedIn
WhatsApp
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ದಿನೇ ದಿನೇ ಪುಂಡರ ಅಟ್ಟಹಾಸ ಹೆಚ್ಚುತ್ತಿದ್ದು, ಬಿಬಿಎಂಪಿ (BBMP) ಕಸದ ಆಟೋ ಚಾಲಕ ಸತೀಶ್ ಎಂಬಾತನ ಮೇಲೆ ಪುಂಡರ ಗುಂಪೊಂದು ಏಕಾಏಕಿ ಹಲ್ಲೆ ಮಾಡಿದೆ. ಚಾಲಕ ಸತೀಶ್ 11 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದರು. ಈ ವೇಳೆ ರಾಜೇಂದ್ರ, ಮನು ಮತ್ತು ಗ್ಯಾಂಗ್ ಸೇರಿಕೊಂಡು ಜಾಲಿ ಮೊಹಲ್ಲಾ ರಸ್ತೆಯಲ್ಲಿ ಚಾಲಕ ಸತೀಶ್ ಮೇಲೆ ಹಲ್ಲೆ ಮಾಡಿದ್ದಾರೆ.
ಕ್ರಿಕೆಟ್ ಬ್ಯಾಟ್ ಮತ್ತು ದೊಣ್ಣೆಯಿಂದ ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪುಂಡರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಹಲ್ಲೆಯಿಂದ ಚಾಲಕ ಸತೀಶ್ಗೆ ಗಂಭೀರ ಗಾಯಗಳಾಗಿದ್ದು, ಹಲ್ಲೆ ನಡೆಸಿದ ರಾಜೇಂದ್ರ, ಮನು ಮತ್ತು ಗ್ಯಾಂಗ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.