ಬೆಂಗಳೂರು : ಐಸ್‌ಕ್ರೀಮ್ ಕಂಟೇನರ್ ಪಲ್ಟಿ – ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು
Twitter
Facebook
LinkedIn
WhatsApp
ಬೆಂಗಳೂರು: ಐಸ್‌ಕ್ರೀಮ್ ಕಂಟೇನರ್ (Ice Cream Container) ಒಂದು ಹೆದ್ದಾರಿಯಲ್ಲಿ ಪಲ್ಟಿ (Overturned) ಹೊಡೆದ ಪರಿಣಾಮ ಕಂಟೇನರ್ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆನೇಕಲ್ (Anekal) ತಾಲೂಕಿನ ಅತ್ತಿಬೆಲೆ (Attibele) ವೃತ್ತದಲ್ಲಿ ನಡೆದಿದೆ.
ಬೊಮ್ಮಸಂದ್ರದಿಂದ ಹೊಸಕೋಟೆಗೆ ತೆರಳುತ್ತಿದ್ದ ಐಸ್‌ಕ್ರೀಮ್ ಕಂಟೇನರ್ ಬೆಂಗಳೂರು ಹೊರವಲಯದಲ್ಲಿರುವ ಆನೇಕಲ್‌ನ ಅತ್ತಿಬೆಲೆಯಲ್ಲಿ ಅಪಘಾತಕ್ಕೊಳಗಾಗಿದೆ. ವೇಗವಾಗಿ ಬಂದ ಹಿನ್ನೆಲೆ ಕಂಟೇನರ್ ಪಲ್ಟಿ ಹೊಡೆದಿದೆ. ಪರಿಣಾಮ ಕಂಟೇನರ್‌ನಲ್ಲಿದ್ದ ಐಸ್‌ಕ್ರೀಮ್ ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ದುರ್ಘಟನೆಯಲ್ಲಿ ಸಾವನ್ನಪ್ಪಿರುವ ಕಂಟೇನರ್ ಚಾಲಕ ಹಾಗೂ ಕ್ಲೀನರ್ ತಮಿಳುನಾಡು ಮೂಲದವರು ಎಂಬುದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಹಾಗೂ ಅತ್ತಿಬೆಲೆ ಪೊಲೀಸರು ಆಗಮಿಸಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮೃತದೇಹಗಳನ್ನು ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ.