ಬೆಂಗಳೂರು : ಮದ್ಯ ಪ್ರಿಯರಿಗೆ ಶಾಕ್ – ಬಿಯರ್ ದರ ಏರಿಕೆ
Twitter
Facebook
LinkedIn
WhatsApp
ಬೆಂಗಳೂರು: ಮದ್ಯ (Alcohol) ಪ್ರಿಯರಿಗೆ ಇದೀಗ ಬೆಲೆ ಏರಿಕೆ (Price Hike) ಬಿಸಿ ಕಾಡುತ್ತಿದೆ. ಕುಡಿಯೋ ಮೊದಲೇ ಬಿಯರ್ (Beer) ಉತ್ಪಾದನಾ ಕಂಪನಿಗಳು ಮದ್ಯ ಪ್ರಿಯರ ಕಿಕ್ ಏರಿಸಿದೆ. ಪ್ರತಿ ಬಿಯರ್ ಮೇಲೂ 10 ರಿಂದ 15 ರೂ. ದರ ಏರಿಕೆಯಾಗಿದೆ.
ಇತ್ತ ಸರ್ಕಾರ ಸುಂಕ ಏರಿಕೆ ಮಾಡದಿದ್ದರೂ, ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿರೋ ಬಿಯರ್ ಉತ್ಪಾದನಾ ಕಂಪನಿಗಳು ಪ್ರತಿ ವರ್ಷದಂತೆ ಈ ವರ್ಷವೂ ದರ ಏರಿಕೆ ಮಾಡಿದೆ. ಬಿಯರ್ ಉತ್ಪಾದನೆಗೆ ತಗಲುವ ವೆಚ್ಚವನ್ನು ಹೊಂದಾಣಿಕೆ ಮಾಡಿಕೊಳ್ಳಲು ಬಿಯರ್ ದರವನ್ನು ಪ್ರತಿ ಬಾಟಲ್‌ಗೆ ಸುಮಾರು 10 ರೂ.ಗಳಷ್ಟು ಹೆಚ್ಚಳ ಮಾಡಿವೆ.
ಇದರ ನಡುವೆ ಜುಲೈನ ಹೊಸ ಬಜೆಟ್‌ನಲ್ಲೂ ಕಾಂಗ್ರೆಸ್ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಯಾವ ಬ್ರ್ಯಾಂಡ್ ಎಷ್ಟು ದರ ಏರಿಕೆ?
ಮದ್ಯ ಹಳೆಯ ದರ – ಹೊಸ ದರ
ಬಡ್ ವೈಸರ್ 198 – 220 ರೂ.
ಕಾರ್ಲ್ಸ್ ಬರ್ಗ್ 190 – 220 ರೂ.
ಬ್ಲಾಕ್ ಫೋಟ್ 135 – 155 ರೂ.
ಟುಬರ್ಗ್ 140 – 150 ರೂ.
ಹೇನಿಕೇನ್ 210 – 235 ರೂ.
ಕೊರೋನಾ 220 – 235 ರೂ.
ಕಿಂಗ್ ಫಿಶರ್ 160 – 170 ರೂ.
ಯುಬಿ ಪ್ರೀಮಿಯಂ 125 – 135 ರೂ.
ಯುಬಿ ಸ್ಟ್ರಾಂಗ್ 130 – 135 ರೂ.
ಕಿಂಗ್ ಫಿಶರ್ ಅಲ್ಟ್ರಾ 190 – 220 ರೂ.