ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಂಗಳೂರು : ಫೋರಂ ಮಾಲ್ ಬಳಿ ಅಗ್ನಿ ಅವಘಡ ; ಪ್ರಾಣ ಉಳಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ ವ್ಯಕ್ತಿ!

Twitter
Facebook
LinkedIn
WhatsApp
ಬೆಂಗಳೂರು : ಫೋರಂ ಮಾಲ್ ಬಳಿ ಅಗ್ನಿ ಅವಘಡ ; ಪ್ರಾಣ ಉಳಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ ವ್ಯಕ್ತಿ!

ಬೆಂಗಳೂರು ಅ.18: ನಗರದ ಕೊರಮಂಗಲದ (Koramangala) ಫೋರಂ ಮಾಲ್ ಮುಂಭಾಗದಲ್ಲಿರುವ ಮಾರುತಿ ಕಾರು ಷೋ ರೂಂನ ನಾಲ್ಕನೇ ಮಹಡಿಯಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದೆ. ನಾಲ್ಕನೇ ಮಹಡಿಯಲ್ಲಿದ್ದ ಮಡ್ ಪೈಪ್ ಹುಕ್ಕಾ ಕೆಫೆನಲ್ಲಿದ್ದ ಕಟ್ಟಡದಲ್ಲಿದ್ದ 8ರಿಂದ 10 ಸಿಲಿಂಡರ್​ಗಳು  ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರಾಣ ಉಳಿಸಿಕೊಳ್ಳಲು ಪ್ರೇಮ್​ ಎಂಬುವರು ನಾಲ್ಕನೇ ಮಹಡಿಯಿಂದ ಗಿಡದ ಮೇಲೆ ಜಿಗಿದಿದ್ದಾರೆ. ಅವರಿಗೆ ಗಾಯಗಳಾಗಿದ್ದು, ನಿಮ್ಹಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪಕ್ಕದ ಕಟ್ಟಡಕ್ಕೂ ಬೆಂಕಿ ಹರಡಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಾಲ್ಕು ಮಹಡಿಯ ​ಕಟ್ಟಡದಲ್ಲಿ, ಗ್ರೌಂಡ್ ಮತ್ತು ಮೊದಲ ಮಹಡಿಯಲ್ಲಿ ಕಾರು ಷೋ ರೂಂ ಇದೆ. ಎರಡು ಮತ್ತು ಮೂರನೇ ಮೂರನೇ ಮಹಡಿಯಲ್ಲಿ ಹುಕ್ಕಾ ಬಾರ್ ನಡೆಸಲಾಗುತ್ತಿದೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆರನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಹುರಿತಿತ್ತು. ಬೆಂಕಿ ಐದನೇ ಮಹಡಿಗೂ ಆವರಿಸಿತ್ತು. ಅಲ್ಲಿ ಸದ್ಯ ಯಾರು ಇರಲಿಲ್ಲ. ಒಟ್ಟು ಆರು ಗ್ಯಾಸ್ ಸಿಲಿಂಡರ್​ಗಳಿದ್ದವು. ನಾಲ್ಕು ಬ್ಲಾಸ್ಟ್ ಆಗಿವೆ, ಇನ್ನು ಎರಡು ಸಿಲೆಂಡರ್​​ಗಳು ಬ್ಲಾಸ್ಟ್​ ಆಗದ ಹಾಗೆ ಮಾಡಿದ್ದೇವೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

8-10 ಸಿಲಿಂಡರ್​ಗಳು ಇದ್ದವು. ಬ್ಲಾಸ್ಟ್ ಗೊತ್ತಾಗುತಿದ್ದಂತೆ ಕಟ್ಟಡ ಅಂಚಿಗೆ ಬಂದಿದ್ದಾನೆ. ನಂತರ ಬೆಂಕಿಗೆ ಸುಟ್ಟು ಹೋಗುತ್ತೇನೆ ಎಂದು ಕೆಳಗೆ ಹಾರಿದ್ದಾನೆ. ಹುಕ್ಕಾ ಬಾರ್​ನಲ್ಲಿ ಇದ್ದ ಸಿಲಿಂಡರ್​ನಿಂದ ಇಷ್ಟೆಲ್ಲಾ ದುರಂತ ಆಗಿದೆ. ರೂಫ್ ಟಾಪ್ ಸಂಪೂರ್ಣ ಭಸ್ಮವಾಗಿದೆ. ಫರ್ನಿಚರ್ ಮತ್ತು ಬೆಂಡುಗಳಿಂದ ಡೆಕೋರೆಶನ್ ಮಾಡಲಾಗಿತ್ತು ಹೀಗಾಗಿ ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಬಂದಾಗ ಪಕ್ಕದ ಕಟ್ಟಡಕ್ಕೆ ಬೆಂಕಿ ಆವರಿಸಿಕೊಳ್ಳುತಿತ್ತು. ಈ ವೇಳೆ ಮೊದಲಿಗೆ ಪಕ್ಕದಕಟ್ಟಡ ಬೆಂಕಿ ನಂದಿಸಿ ನಂತರ ಬೆಂಕಿ ಹೊತ್ತಿದ್ದ ಕಟ್ಟಡ ಬೆಂಕಿಯನ್ನು ಹತೋಟಿಗೆ ಪಡೆದಿದ್ದಾರೆ.

ಅಗ್ನಿ ಅವಘಡದಲ್ಲಿ ಕಟ್ಟಡದ ಓರ್ವ ಸಿಬ್ಬಂದಿಗೆ ಗಾಯವಾಗಿದೆ

ಅಗ್ನಿ ಅವಘಡದಲ್ಲಿ ಕಟ್ಟಡದ ಓರ್ವ ಸಿಬ್ಬಂದಿಗೆ ಗಾಯವಾಗಿದೆ. ಗಾಯಾಳುಗೆ ತಿಲಕ್​​ ನಗರದ ಕೆಜಿಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ರೆಸ್ಟೋರೆಂಟ್​​​ ಇದೆ. ರೆಸ್ಟೋರೆಂಟ್​ನ ಕೊಠಡಿಯಲ್ಲಿ 8-10 ಸಿಲಿಂಡರ್​ ಸಂಗ್ರಹಿಸಲಾಗಿತ್ತು. ಸಿಲಿಂಡರ್​​ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿರುವ ಮಾಹಿತಿ ದೊರೆತಿದೆ ಎಂದು ಅಗ್ನಿಶಾಮಕ ದಳ ಎಡಿಜಿಪಿ ಹರಿಶೇಖರನ್ ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ