ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಬೆಂಗಳೂರು : 2 ಟನ್ ಟೊಮೆಟೊವಿದ್ದ ವಾಹನವನ್ನೇ ಕದ್ದ ಕದಿಮರು!

Twitter
Facebook
LinkedIn
WhatsApp
download 1

ಬೆಂಗಳೂರು: ಬೆಲೆ ಏರಿಕೆ ಹಿನ್ನೆಲೆ ಜನಸಾಮಾನ್ಯರು ಈಗ ಟೊಮೆಟೊ (Tomato) ಖರೀದಿ ಮಾಡೋದೇ ಅಸಾಧ್ಯವಾಗಿದೆ. ಚಿನ್ನದ ಬೆಲೆ ಎನಿಸಿಕೊಂಡಿರುವ ಸಂದರ್ಭದಲ್ಲೇ 2 ಟನ್ ಟೊಮೆಟೊ ಹೊತ್ತಿದ್ದ ಬುಲೆರೋ ವಾಹನವನ್ನೇ ಖದೀಮರು ಎಗರಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಬೆಂಗಳೂರಿನ (Bengaluru) ಆರ್‌ಎಂಸಿ ಯಾರ್ಡ್‌ನಲ್ಲಿ (RMC Yard) ಘಟನೆ ನಡೆದಿದೆ. ರೈತರು ಚಿತ್ರದುರ್ಗದಿಂದ ಆರ್‌ಎಂಸಿ ಯಾರ್ಡ್‌ಗೆ ಟೊಮೆಟೊ ಲೋಡ್ ಅನ್ನು ತಂದಿದ್ದರು. ರೈತರು ಯಾವಾಗ ವಾಹನವನ್ನು ನಿಲ್ಲಿಸಿ, ಟೀ ಕುಡಿಯಲು ಹೋಗಿದ್ದರೋ ಆಗ ಬಂದ ಕಳ್ಳರು ವಾಹನ ಸಮೇತವಾಗಿ 2 ಟನ್ ಟೊಮೆಟೊ ಹೊತ್ತೊಯ್ದಿದ್ದಾರೆ. 

250 ಕ್ಕೂ ಹೆಚ್ಚು ಟೊಮೆಟೊ ಟ್ರೇ ಇದ್ದ ಬುಲೆರೋ ವಾಹನವನ್ನು ಕಾರಿನಲ್ಲಿ ಬಂದಿದ್ದ ಮೂವರು ಹೈಜಾಕ್ ಮಾಡಿದ್ದಾರೆ. ಟೊಮೆಟೊ ತುಂಬಿದ್ದ ಗಾಡಿ ಫಾಲೋ ಮಾಡಿ ಬಂದ ಆರೋಪಿಗಳು, ಆರ್‌ಎಂಸಿ ಯಾರ್ಡ್ ಬಳಿ ಅಡ್ಡ ಹಾಕಿ ರೈತನಿಗೆ ಅವಾಜ್ ಹಾಕಿದ್ದಾರೆ. ಗಾಡಿ ಟಚ್ ಆಗಿದೆ ಎಂದು ನಾಟಕ ಮಾಡಿ ಡ್ರೈವರ್‌ಗೆ ಥಳಿಸಿದ್ದು, ನಂತರ ರೈತನ ಮೇಲೂ ಹಲ್ಲೆ ಮಾಡಿ ಹಣ ಕೊಡು ಎಂದು ಅವಾಜ್ ಹಾಕಿದ್ದಾರೆ.

ಹಣ ಇಲ್ಲ ಎಂದಾಗ ಮೊಬೈಲ್‌ನಲ್ಲಿದ್ದ ಹಣ ಟ್ರಾನ್ಸ್ಫರ್ ಮಾಡಿಕೊಂಡು ಟೊಮೆಟೊ ಗಾಡಿಯಲ್ಲಿ ರೈತನನ್ನು ಕೂರಿಸಿಕೊಂಡು ಹೈಜಾಕ್ ಮಾಡಿದ್ದಾರೆ. ಚಿಕ್ಕಜಾಲ ಬಳಿ ಡ್ರೈವರ್‌ನ ಬಿಟ್ಟು ಟೊಮೆಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಒಂದಲ್ಲ, ಎರಡಲ್ಲ ಬರೋಬ್ಬರಿ 15 ಮದುವೆ – ಖತರ್ನಾಕ್‌ ಕಿಲಾಡಿ ಅರೆಸ್ಟ್‌

ಮೈಸೂರು: ವಿಧವೆಯರು, ಅವಿವಾಹಿತರಿಗೆ ಆನ್‌ಲೈನ್‌ನಲ್ಲಿ (Online Matrimony) ಗಾಳ ಹಾಕಿ ಒಂದಲ್ಲ, ಎರಡಲ್ಲ ಬರೋಬ್ಬರಿ 15 ಮಹಿಳೆಯರ ಜೊತೆ ಮದುವೆಯಾಗಿ, ಹಣ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಖತರ್ನಾಕ್ ಕಿಲಾಡಿಯನ್ನ ಮೈಸೂರಿನ ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬನಶಂಕರಿ ಬಡಾವಣೆ ನಿವಾಸಿ ಮಹೇಶ್ (35) ಬಂಧಿತ ಆರೋಪಿ. ಬಂಧಿತನಿಂದ 2 ಲಕ್ಷ ನಗದು, 2 ಕಾರ್, ಒಂದು ಬ್ರೇಸ್‌ಲೈಟ್‌, ಒಂದು ಉಂಗುರ, 2 ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್‌ಗಳನ್ನ ವಶ ಪಡಿಸಿಕೊಳ್ಳಲಾಗಿದೆ.

ಮಹೇಶ್‌ ಸಿಕ್ಕಿಬಿದ್ದದ್ದು ಹೇಗೆ?
ಆರೋಪಿ ಮಹೇಶ್‌ ಮೈಸೂರಿನ ನಿವಾಸಿ ಹೇಮಲತಾ ಎಂಬವರಿಗೆ ತಾನು ಡಾಕ್ಟರ್ ಎಂದು ಹೇಳಿಕೊಂಡು ಮೋಸ ಮಾಡಿದ್ದ. ಆನ್‌ಲೈನ್‌ ಮ್ಯಾಟ್ರೋಮೊನಿ ವೇದಿಕೆಯಲ್ಲಿ ಪರಿಚಯಿಸಿಕೊಂಡು ನಂಬಿಸಿ ವಿಶಾಖಪಟ್ಟಣದಲ್ಲಿ ಮದುವೆ ಮಾಡಿಕೊಂಡಿದ್ದ.

ಕ್ಲಿನಿಕ್ ತೆರೆಯಬೇಕೆಂದು 70 ಲಕ್ಷ ಸಾಲ ಕೊಡಿಸುವಂತೆ ಮಹೇಶ್ ಹೇಮಲತಗೆ ಒತ್ತಾಯ ಹೇರಿದ್ದ, ಸಾಲ ಕೊಡಿಸಲು ಹೇಮಲತಾ ಹಿಂದೇಟು ಹಾಕಿದ್ದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ 15 ಲಕ್ಷ ಹಣ ಹಾಗೂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಹೇಮಲತಾ ಮೈಸೂರಿನ ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿ ಮಹೇಶ್ ಹೆಡೆಮುರಿ ಕಟ್ಟಿ ವಿಚಾರಣೆಗೆ ಒಳಪಡಿಸಿದ್ದಾಗ ತಾನು ಡಾಕ್ಟರ್, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಎಂದು ಹೇಳಿಕೊಂಡು ಮೋಸ ಮಾಡಿರೋದು ಬೆಳಕಿಗೆ ಬಂದಿದೆ. ಈವರೆಗೆ ಸುಮಾರು 15 ಮಹಿಳೆಯರಿಗೆ ದೋಖಾ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist