ಶನಿವಾರ, ಡಿಸೆಂಬರ್ 21, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Bangalore : ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಯುವತಿಯರ ರಕ್ಷಣೆ

Twitter
Facebook
LinkedIn
WhatsApp
Bangalore : ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ;

ಬೆಂಗಳೂರು, ಫೆಬ್ರವರಿ 25: ನಗರದ ಥಾಯ್ ಸ್ಪಾ ಹೆಸರಿನ ವೇಶ್ಯಾವಾಟಿಕೆ ಅಡ್ಡೆ ಮೇಲೆ ಯಲಹಂಕ ನ್ಯೂಟೌನ್ ಪೊಲೀಸರು  ದಾಳಿ ಮಾಡಿದ್ದು, ಆಂಜನೇಯಗೌಡ, ಹರೀಶ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತು ಏಳು ಜನ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ರೋರಾ ಲಕ್ಸುರಿ ಥಾಯ್ ಸ್ಪಾ (ಮಸಾಜ್​ ಪಾರ್ಲರ್​) ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ  ನಡೆಸುತ್ತಿದ್ದರು. ಆರೋಪಿಗಳು ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶದ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬ್ಯುಸಿನೆಸ್ ವೀಸಾ ಮೂಲಕ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಈ ವಿಚಾರ ತಿಳಿದ ಈಶಾನ್ಯ ವಿಭಾಗದ ಡಿಸಿಪಿ, ಯಲಹಂಕ ನ್ಯೂಟೌನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಪೊಲೀಸರು ದಾಳಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟಿ ಕೋಟಿ ಹಣದಾಸೆಗೆ ವೇಶ್ಯಾವಾಟಿಕೆ ಆರಂಭಿಸಿದ ಟೆಕ್ಕಿ

ಒಂದೂವರೆ ಲಕ್ಷ ಸಂಬಳದ ಕೆಲಸದಲ್ಲಿದ್ದ ಟೆಕ್ಕಿ ಹಣದ ದಾಹಕ್ಕೆ ಬಿದ್ದು ಸ್ಟಾಕ್ ಮಾರ್ಕೆಟ್​ನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡು ಲಕ್ಷಲಕ್ಷ ಸಾಲವನ್ನು ಮಾಡಿದ್ದನು. ಆದರೆ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದ ಈತ ಕೆಲಸಕ್ಕೆ ಗುಡ್​ಬೈ ಹೇಳಿ ಮ್ಯಾಟ್ರಿಮೋನಿ ಮಾದರಿಯ ಆ್ಯಪ್ ಅಭಿವೃದ್ಧಿ ಮಾಡಿ ಹಣ ಸಂಪಾದಿಸುತ್ತಿದ್ದನು. ನಂತರ ಕೋಟ್ಯಾಂತರ ರೂಪಾಯಿ ಸಂಪಾದಿಸುಲು ಈ ಟೆಕ್ಕಿ ವೇಶ್ಯಾವಾಟಿಕೆ ದಂಧೆಯ ಹಾದಿ ಹಿಡಿದ್ದನು.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ವೈಶಾಕ್​ಗೆ ವೇತನಕ್ಕೇನು ಕೊರತೆ ಇರಲಿಲ್ಲ. ತಿಂಗಳಿಗೆ ಒಂದೂವರೆ ಲಕ್ಷರೂಪಾಯಿ ಸಂಬಳ ಪಡೆಯುತ್ತಿದ್ದನು. ಹೈಟೆಕ್ ಲೈಫ್​ ಸಾಗಿಸುತ್ತಿದ್ದನು. ಆದರೆ ಸ್ಟಾಕ್ ಮಾರ್ಕೆಟ್ ಹುಚ್ಚಿಗೆ ಬಿದ್ದ ವೈಶಾಕ್ ಅದರಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದನು. ಅಲ್ಲದೆ, ಲಕ್ಷ ಲಕ್ಷ ಸಾಲ ಮಾಡಿದ್ದನು.

ಟೆಕ್ನಾಲಜಿಯಲ್ಲಿ ತಂತ್ರಾಜ್ಞಾನದಲ್ಲಿ ಜ್ಞಾನ ಹೊಂದಿದ್ದ ವೈಶಾಕ್, ಉತ್ತಮ ವೇತನದ ಕಲಸ ಬಿಟ್ಟು ತಲೆ ಕೆಡಿಸಿಕೊಂಡಿದ್ದನು. ನಂತರ ಹಣ ಸಂಪಾದಿಸಲು ಮ್ಯಾಟ್ರಿಮೋನಿ ಮಾದರಿಯ ಆ್ಯಪ್ ಅಭಿವೃದ್ಧಿಪಡಿಸಿ ಅದರಲ್ಲಿ ವಿವಾಹವಾಗಲು ಇಚ್ಚಿಸುತ್ತಿರುವ ಯುವಕ-ಯುವತಿಯರನ್ನ ಆ್ಯಡ್ ಮಾಡಿ ಸಂಪರ್ಕ ಕಲ್ಪಿಸುತ್ತಿದ್ದನು. ಇಬ್ಬರಿಗೂ ಪರಸ್ಪರ ಕಾಂಟ್ಯಾಕ್ಟ್ ಮಾಡಿಸಲು ಹಣ ಪಡೆಯುತ್ತಿದ್ದನು. ಹೀಗೆ ಉತ್ತಮ ರೀತಿಯಲ್ಲಿ ಬ್ಯುಸಿನೆಸ್ ಸಾಗುತ್ತಿದ್ದಂತೆ ಬಿಟೆಕ್ ಮುಗಿಸಿದ್ದ ಗೋವಿಂದರಾಜು ಎಂಬಾತ ಈ ಆ್ಯಪ್​ಗೆ ಎಂಟ್ರಿಕೊಟ್ಟಿದ್ದನು. ಆ್ಯಪ್​ನ ಪ್ರೈವಸಿ ವರ್ಕ್ ನೋಡಿ ಶಾಕ್ ಆಗಿದ್ದ ಗೋವಿಂದರಾಜು, ವೈಶಾಕ್​ನನ್ನು ಸಂಪರ್ಕಿಸಿ ಮ್ಯಾಟ್ರಿಮೋನಿ ಕೆಲಸದ ಬದಲು ವೇಶ್ಯಾವಾಟಿಕೆ ದಂಧೆ ನಡೆಸುವಂತೆ ಖತರ್ನಾಕ್ ಐಡಿಯಾ ಕೊಟ್ಟಿದ್ದನು.

ಅಲ್ಲದೆ, ವಿದೇಶಿ ಮಹಿಳೆಯರಿಗೆ ಸಖತ್ ಡಿಮ್ಯಾಂಡ್ ಇದೆ, ಕೋಟಿ ಕೋಟಿ ಹಣ ಮಾಡಬಹುದು ಎಂದು ಮೈಂಡ್ ವಾಶ್ ಮಾಡಿದ್ದನು. ಅದಾಗಲೇ ಗೋವಿಂದರಾಜು ವಿದೇಶಿ ಪಿಂಪ್ ಜೊತೆ ಸಂಪರ್ದದಲ್ಲಿದ್ದನು. ಆಕೆಯಿಂದ ವಿದೇಶಿ ಯುವತಿಯರು ಸಿಗುತ್ತಾರೆ. ನೀನು ಕಾಂಟೆಕ್ಟ್​​ನಲ್ಲಿ ಗ್ರಾಹಕರನ್ನು ಹುಡುಕು ಎಂದು ವೈಶಾಕ್​ಗೆ ಹೇಳಿದ್ದನು. ಕೋಟಿಕೋಟಿ ಹಣ ಸಂಪಾದಿಸಲು ದಂಧೆಗೆ ಇಳಿದ ವೈಶಾಗ್​ಗೆ ಗೋವಿಂದರಾಜು ಆತನ ಆ್ಯಪ್​ನಲ್ಲಿದ್ದ ಕೆಲವು ಕಸ್ಟಮರ್​ಗಳನ್ನು ಹುಡುಕಿ ಕೊಡುತ್ತಿದ್ದನು. ದಿನ ಕಳೆದಂತೆ ಈ ದಂಧೆಯಿಂದ ಹೆಚ್ಚಿನ ಹಣ ಬರುವುದನ್ನು ನೋಡಿದ ವೈಶಾಕ್, ಇತರೆ ಇಬ್ಬರೊಂದಿಗೆ ಸೇರಿಕೊಂಡು ಹಲವು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದನು.

ರಷ್ಯಾ, ಖಜಕಿಸ್ತಾನ ಸೇರಿ ಬೇರೆ ಬೇರೆ ದೇಶಗಳಿಂದ ಯುವತಿಯರನ್ನು ಕರೆಸುತ್ತಿದ್ದರು. ಈ ವಿಚಾರ ತಿಳಿದ ಬೆಂಗಳೂರು ನಗರದ ಬಯ್ಯಪ್ಪನಹಳ್ಳಿ ಠಾಣಾ ಪೊಲೀಸರು, ಆರೋಪಿಗಳಾದ ವಿದೇಶಿ ಮಹಿಳೆ​, ಗೋವಿಂದರಾಜು ಹಾಗೂ ವೈಶಾಕ್​ನನ್ನ ಬಂಧಿಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist