ಕಲ್ಲಡ್ಕದ ಕೆಟಿ ಲಕ್ಷ್ಮಿ ಗಣೇಶ್ ಪ್ರಾಯೋಜಕತ್ವದಲ್ಲಿ ಬಾಳ್ತಿಲ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಎದ್ದು ನಿಂತಿದೆ ಫ್ರೀಡ್ ಟ್ರಸ್ಟ್ ನಿರ್ಮಾಣದ ವಿಶಿಷ್ಟ ಮೀಯಾವಾಕಿ ಅರಣ್ಯ.
ಬಿಸಿ ರೋಡ್: ಕಲ್ಲಡ್ಕಕ್ಕೆ ಸಮೀಪವಿರುವ ಬಾಳ್ತಿಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶಿಷ್ಟ ಮಿಯಾವಾಕಿ ಅರಣ್ಯವು ಎದ್ದು ನಿಂತಿದೆ.
ಕಲ್ಲಡ್ಕದ ಖ್ಯಾತ ಕೆಟಿ ಲಕ್ಷ್ಮಿ ಗಣೇಶ್ ಹೋಟೆಲ್ ನ ಪ್ರಾಯೋಜಕತ್ವದಲ್ಲಿ ಫಾರೆಸ್ಟ್ ಇಕಾಲಜಿ,ಎನ್ವಿರಾನ್ಮೆಂಟ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಟ್ರಸ್ಟ್ (Feerd) ಈ ಅರಣ್ಯವನ್ನು ಬಾಳ್ತಿಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಿದ್ದಾರೆ.
ತಜ್ಞ ಅರಣ್ಯ ನಿರ್ಮಾಣದ ವ್ಯಕ್ತಿಗಳಿಂದ ಈ ಅರಣ್ಯ ನಿರ್ಮಾಣವಾಗಿದ್ದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂತಹ ಅರಣ್ಯ ನಿರ್ಮಿಸಿರುವುದು ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಎಂದು ಅಭಿಪ್ರಾಯಪಡಲಾಗಿದೆ. ಜನರ ಆರೋಗ್ಯಕ್ಕೆ ಹಾಗೂ ಪರಿಸರಕ್ಕೆ ಪೂರಕವಾಗಿ ಈ ಅರಣ್ಯವನ್ನು ಬಹಳ ಮುತುವರ್ಜಿಯಿಂದ ನಿರ್ಮಿಸಲಾಗಿದ್ದು ಈಗ ಇದು ಸರ್ವರ ಗಮನ ಸೆಳೆಯುತ್ತಿದೆ.
ಅರಣ್ಯ ಸಂರಕ್ಷಣೆಯ ಸಂಪೂರ್ಣ ಮಹತ್ವವನ್ನು ಇದು ವಿವರಿಸಿ ಹೇಳುತ್ತದೆ ಎಂದು ಸಾರ್ವಜನಿಕರುರೂಬ್ಬರು ಅಭಿಪ್ರಾಯ ಪಡುತ್ತಾರೆ. ಈ ಅರಣ್ಯ ನಿರ್ಮಾಣದ ಕಾಳಜಿಯ ಬಗ್ಗೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಬಗ್ಗೆ ಬಹಳಷ್ಟು ಪ್ರಶಂಸೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.