ಅಧಿಕಾರ ಸ್ವೀಕರಿಸಿದ ದಿನವೇ ಸಂಜೆ ಹೃದಯಘಾತದಿಂದ ಅಧಿಕಾರಿ ಸಾವು!
ಧಾರವಾಡ: ಅಧಿಕಾರ ಸ್ವೀಕರಿಸಿದ ದಿನವೇ ಹೃದಯಾಘಾತದಿಂದ ಅಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ಸೋಮವಾರ ನಡೆದಿದೆ.ಬಡ್ತಿ ಪಡೆದು ಅಧಿಕಾರ ಸ್ವೀಕಾರ ಮಾಡಿದ್ದ ಜಯಪ್ರಕಾಶ ಕಲಕೋಟಿ ಮೃತ ಅಧಿಕಾರಿ.
ಇವರು ಧಾರವಾಡದ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ಹುದ್ದೆ ಅಲಂಕರಿಸಿದ್ದರು. ಆದರೆ ಬಡ್ತಿಯಿಂದ ಸಿಕ್ಕ ಅಧಿಕಾರದಲ್ಲಿ ಒಂದು ದಿನವೂ ಕಳೆಯದೆ ಇಹಲೋಕ ತ್ಯೆಜಿಸಿದ್ದಾರೆ.ಸೋಮವಾರ ಬೆಳಗ್ಗೆ ಅಧಿಕಾರ ಸ್ವೀಕಾರ ಮಾಡಿದ್ದ ಜಯಪ್ರಕಾಶ ಕಲಕೋಟಿ ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಮೊದಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ತಾಲುಕು ಖಜಾನೆ ಕಚೇರಿಯಲ್ಲಿ ಜಯಪ್ರಕಾಶ್ ಅವರು ಕೆಲಸ ಮಾಡುತ್ತಿದ್ದರು.15 ದಿನಗಳ ಹಿಂದಷ್ಟೇ ಜಯಪ್ರಕಾಶರಿಗೆ ಬಡ್ತಿ ಲಭಿಸಿತ್ತು. ಧಾರವಾಡ ಜಿಲ್ಲಾ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ್ದ ಅವರಿಗೆ ಸಂಜೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ರೈಲ್ವೇ ಹಳಿಯಲ್ಲಿ ಲೇಡಿ ಕಂಡಕ್ಟರ್ ಶವ ಪತ್ತೆ
ಗದಗ, (ಸೆಪ್ಟೆಂಬರ್ 06): ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ರೈಲ್ವೇ ಹಳಿಯ ಮೇಲೆ ಸಾರಿಗೆ ಬಸ್ ಮಹಿಳಾ ಕಂಡಕ್ಟರ್(Bus conductor) ಶವ ಪತ್ತೆಯಾಗಿದೆ. ಗದಗ(Gadag) ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ಅಕ್ಕಮ್ಮ (35) ಮೃತ ದೇಹ ಪತ್ತೆಯಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ರೈಲೆಗೆ ತಲೆ ಕೊಟ್ಟಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದ್ರೆ, ಸಾವಿನ ಸುತ್ತ ಅನುಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ಗದಗ ರೈಲ್ವೆ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ತಿಮ್ಮಾಪುರ ಗ್ರಾಮದ ಬಳಿಯ ತಮ್ಮ ಜಮೀನಿನ ಬಳಿ ಇರುವ ರೈಲ್ವೇ ಹಳಿಯಲ್ಲೇ ಅಕ್ಕಮ ಅವರ ಮೃತದೇಹ ಪತ್ತೆಯಾಗಿದ್ದು, ಈ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಅನುಮಾನಗಳು ಹುಟ್ಟಿಕೊಂಡಿದ್ದು, ಪೊಲೀಸ್ ತನಿಖೆ ಬಳಿಕ ಸತ್ಯಾಸತ್ಯ ತಿಳಿಯಲಿದೆ.