ಆನೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದ ಮಹಿಳೆ ಮೇಲೆ ದಾಳಿ ;ಇಲ್ಲಿದೆ ವೈರಲ್ ವಿಡಿಯೋ
ಆನೆಗಳು ಅಂದರೆ ಅದೆಷ್ಟೋ ಜನರಿಗೆ ತುಂಬಾ ಪ್ರೀತಿ. ಅವುಗಳನ್ನು ನೋಡಲು ಜನ ಪ್ರಾಣಿಸಂಗ್ರಹಾಲಯಕ್ಕೆ ಹೋಗುವುದಿದೆ. ಆನೆಗಳನ್ನು ಸಾಮಾನ್ಯವಾಗಿ ಸೌಮ್ಯ ಸ್ವಾಭಾವದ ದೈತ್ಯ ಪ್ರಾಣಿ ಎನ್ನಲಾದರೂ ಕೋಪಗೊಂಡರೆ ಅದರಷ್ಟು ಕೆಟ್ಟದಾಗಿ ಯಾವ ಪ್ರಾಣಿಗಳೂ ಇರುವುದಿಲ್ಲ.
ಪ್ರವಾಸಿ ವಾಹನಗಳನ್ನು ಓಡಿಸುವುದರಿಂದ ಹಿಡಿದು ನರಭಕ್ಷಕ ಪ್ರಾಣಿಗಳನ್ನು ಹೆದರಿಸುವವರೆಗೆ ಆನೆಗಳು ಭಯಾನಕ ವೀಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಾವೆಲ್ಲಾ ನೋಡಿದ್ದೇವೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆನೆಯೊಂದು ಮಹಿಳೆ ಮೇಲೆ ದಾಳಿ ಮಾಡಿದ ಭಯಾನಕ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸಿದೆ.
ವೈರಲ್ ವಿಡಿಯೋದಲ್ಲಿ ಆನೆಯೊಂದು ತನ್ನ ಪಾಡಿಗೆ ತಾನು ನಿಂತುಕೊಂಡಿದೆ. ಆದರೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದ ಮಹಿಳೆಗೆ ಆನೆ ಏಕಾಏಕಿ ಗುದ್ದಿದೆ. ಆನೆ ಗುದ್ದಿದ ರಬಸಕ್ಕೆ ಮಹಿಳೆ ಒಂದು ಅಡಿ ದೂರಕ್ಕೆ ಹೋಗಿ ಬಿದ್ದಿದ್ದಾಳೆ. ಬಳಿಕ ಮಹಿಳೆ ತಮ್ಮ ಬೆನ್ನು ಹಿಡಿದುಕೊಂಡು ದೂರಕ್ಕೆ ಹೋಗುತ್ತಾರೆ. ಈ ವಿಡಿಯೋ ಎಕ್ಸ್‌ನಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಮಹಿಳೆಯು ಆನೆಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆನೆ ತನ್ನ ಆಹಾರ ಸೇವಿಸುತ್ಥಾ ಇದೆ. ಮಹಿಳೆ ಖುಷಿಯಿಂದ ಅದರ ಹತ್ತಿರ ಹೆಜ್ಜೆ ಹಾಕುತ್ತಾರೆ. ಸ್ವಲ್ಪ ಸಮಯದ ನಂತರ ಆನೆ ಕೋಪಗೊಂಡು ಮಹಿಳೆಗೆ ಗುದ್ದುತ್ತದೆ. ತಕ್ಷಣ ಮಹಿಳೆ ಗಾಳಿಯಲ್ಲಿ ಹಾರಿ ಕೆಳಗೆ ಬೀಳುತ್ತಾಳೆ. ಆಕೆ ಬೆನ್ನಿಗೆ ಪೆಟ್ಟಾಗಿದೆ.
ಈ ವೀಡಿಯೊವನ್ನು ಬಳಕೆದಾರರು X ನಲ್ಲಿ ಪೋಸ್ಟ್ ಮಾಡಿದ್ದಾರೆ.ಈ ವೀಡಿಯೊ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಒಬ್ಬರು “ಕಾಡು ಪ್ರಾಣಿಗಳನ್ನು ಬಿಟ್ಟುಬಿಡಿ” ಎಂದು ಬರೆದಿದ್ದಾರೆ. “ಬಾಲ ಬೀಸುತ್ತಿರುವಾಗ ಎಂದಿಗೂ ಆನೆಯ ಹತ್ತಿರ ಹೋಗಬೇಡಿ. ಅದು ಹೆದರಿಕೆಯಿದ ದಾಳಿ ಮಾಡುತ್ತದೆ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ಕಳೆದ ಮೂರು ವಾರಗಳ ಹಿಂದೆ ಕೇರಳದಲ್ಲಿ ಆನೆಗಳ ದಾಳಿಯಲ್ಲಿ ಮೂರು ಜನರು ಸಾವನ್ನಪ್ಪಿದ್ದರು. ತೀರಾ ಇತ್ತೀಚಿನ ಘಟನೆಯಲ್ಲಿ ಅರಣ್ಯ ಪ್ರದೇಶದಲ್ಲಿರುವ ಪುಲ್ಪಲ್ಲಿ ಪಟ್ಟಣದಲ್ಲಿ ಶುಕ್ರವಾರ ಆನೆಗಳ ಹಿಂಡು 52 ವರ್ಷದ ಟೂರಿಸ್ಟ್ ಗೈಡ್ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿವೆ.