ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆದ ಪ್ರಸಿದ್ಧ ನಟಿ ಸಿತಾರಾ

ಹಾಲುಂಡ ತವರು ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಸಿತಾರಾ (Sitara), ಹಲವು ವರ್ಷಗಳಿಂದ ಚಿತ್ರೋದ್ಯಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರು ದೇಶದಲ್ಲಿ ಇದ್ದರಾ ಅಥವಾ ವಿದೇಶದಲ್ಲಿ ನೆಲೆಯೂರಿದ್ದರಾ ಎನ್ನುವ ಕುರಿತೂ ಮಾಹಿತಿ ಇರಲಿಲ್ಲ. ಇದೀಗ ಏಕಾಏಕಿ ಶಬರಿಮಲೆಯಲ್ಲಿ (Sabarimala) ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಚಿರಂಜೀವಿ ಸರ್ಜಾ ನಟನೆಯ ‘ಅಮ್ಮ ಐ ಲವ್ ಯೂ’ ಚಿತ್ರದ ನಂತರ ಬಹುತೇಕ ಚಿತ್ರರಂಗದಿಂದಲೇ ದೂರವಿದ್ದ ಸಿತಾರಾಗೆ ಶಬರಿಮಲೆಗೆ ಹೋಗಬೇಕು ಎನ್ನುವ ಸಂಕಲ್ಪವಿತ್ತು ಎಂದು ಹೇಳಲಾಗುತ್ತಿದೆ. ಅದನ್ನು ಈಗ ಪೂರೈಸಿದ್ದಾರೆ. ಹಲವು ಮಹಿಳೆಯರ ಜೊತೆ ಶಬರಿಮಲೆಗೆ ಬಂದಿದ್ದ ಸಿತಾರಾ ಅಯ್ಯಪ್ಪನ ದರ್ಶನ (Darshana) ಪಡೆದಿದ್ದಾರೆ.

ಕಾರ್ತಿಕ ಮಾಸದ ಆರಂಭದ ದಿನಗಳಲ್ಲಿ ಶಬರಿಮಲೆ ಬಾಗಿಲು ತೆರೆದಿರುತ್ತದೆ. ಹಾಗಾಗಿ ಇದೇ ಸಂದರ್ಭದಲ್ಲಿ ಸಿತಾರಾ ಅಯ್ಯಪ್ಪನ (Ayyappa) ದರ್ಶನಕ್ಕೆ ಆಗಮಿಸಿದ್ದಾರೆ. ಕುಟುಂಬದ ಸದಸ್ಯರು ಮತ್ತು ಆಪ್ತರೊಂದಿಗೆ ಶಬರಿಮಲೆಗೆ ಬಂದಿದ್ದ ಅವರು, ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಆ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕಣ್ಣೀರಿನ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದರು ಸಿತಾರಾ. ಅದರಲ್ಲೂ ಹಾಲುಂಡ ತವರು ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಕನ್ನಡದಲ್ಲೇ ಅವರು ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ವಿಷ್ಣುವರ್ಧನ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡ ಹೆಗ್ಗಳಿಕೆ ಅವರದ್ದು.

ಮಣಿಪುರ ಮಹಿಳೆಯರ ಮೇಲಿನ ದೌರ್ಜನ್ಯ: ಕಠಿಣ ಶಿಕ್ಷೆಯಾಗಲಿ ಎಂದ ರಶ್ಮಿಕಾ ಮಂದಣ್ಣ
ಮಣಿಪುರದ (Manipur) ಬುಡಕಟ್ಟು ಜನಾಂಗದ ಇಬ್ಬರು ಮಹಿಳೆಯರನ್ನು (Womens) ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ದೇಶವ್ಯಾಪ್ತಿ ಆಕ್ರೋಶ ವ್ಯಕ್ತವಾಗುತ್ತಿದೆ. ತಪ್ಪು ಮಾಡಿರುವ ದುಷ್ಟರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ ಎಂದು ಬಾಲಿವುಡ್ ಕಲಾವಿದರು ಕೂಡ ಆಗ್ರಹ ಮಾಡಿದ್ದಾರೆ. ಈ ಬೆನ್ನಲ್ಲೇ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡದ ‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ನಟಿಯಾಗಿ ಗಮನ ಸೆಳೆಯುತ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪುಷ್ಪ 2, ಅನಿಮಲ್, ಟೈಗರ್ ಶ್ರಾಫ್ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ.
ಮಣಿಪುರ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬಾಲಿವುಡ್ ಸ್ಟಾರ್ಸ್ ಪ್ರತಿಕ್ರಿಯೆ ನೀಡಿದ್ದರು. ಈಗ ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಓದಿದ್ದನ್ನು ನಂಬಲು ಆಗುತ್ತಿಲ್ಲ. ಕ್ಷಮಿಸಿ, ದೇಶದಲ್ಲಿ ಏನು ನಡೆಯುತ್ತಿದೆ. ಮಣಿಪುರದ ಮಹಿಳೆಯರ ಪರ ನಟಿ ಮಾತನಾಡಿದ್ದಾರೆ. ದುಷ್ಟರಿಗೆ ತಕ್ಕ ಶಿಕ್ಷೆಯಾಗಲಿ. ಅಪರಾಧಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷೆಯಾಗುತ್ತದೆ ಎಂದು ಭಾವಿಸುತ್ತೇನೆ ಎಂದು ರಶ್ಮಿಕಾ ಮಾತನಾಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದಾರೆ.
ಖ್ಯಾತ ನಟರಾದ ಸಂಜಯ್ ದತ್, ಅಕ್ಷಯ್ ಕುಮಾರ್, ರಿತೇಶ್ ದೇಶಮುಖ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಕಿಯಾರಾ ಅಡ್ವಾಣಿ ಸೇರಿದಂತೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದಾರೆ. ಜೊತೆಗೆ ಈ ಘಟನೆಗೆ ಕಾರಣರಾದ ದುರುಳರಿಗೆ ಆದಷ್ಟು ಬೇಗ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆಯು ಅತ್ಯಂತ ಹೇಯ ಕೃತ್ಯವಾಗಿದ್ದು, ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೋ ನನಗೆ ಅತ್ಯಂತ ನೋವು ತಂದಿದೆ. ತಪ್ಪು ಮಾಡಿದರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ. ಮಹಿಳೆಯರ ನೋವಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ.