ಅಧಿವೇಶನಕ್ಕಿಂತ ಯಾತ್ರೆಯೇ ಮುಖ್ಯ: ಕಳೆದ ಮೂರು ದಿನಗಳಿಂದ ಅಧಿವೇಶನದಲ್ಲಿ ಏನಾಗ್ತಿದೆ ಎಂಬುದು ಗೊತ್ತು. ನಾಡಿನ ಸಮಸ್ಯೆ ಬಗ್ಗೆ ಸಕಾರಾತ್ಮಕವಾಗಿ ಚರ್ಚೆಯಾಗಿಲ್ಲ. ನನಗೆ ಅಧಿವೇಶನಕ್ಕಿಂತ ಪಂಚರತ್ನ ಯಾತ್ರೆಯೆ ಮುಖ್ಯ. ನಾಡಿನಲ್ಲಿ ಪಂಚರತ್ನ ಯೋಜನೆ ಜಾರಿಗೆ ತರಲು ಯಾತ್ರೆ ಮಾಡ್ತಿದ್ದೇನೆ. ರಾಜ್ಯ, ದೇಶದಲ್ಲಿ ಆಗುತ್ತಿರುವ ಅನಾಹುತಗಳಿಗೆ ನ್ಯಾಯ ಓದಗಿಸಲು ಈ ಪಂಚರತ್ನ ಯೋಜನೆ ಜಾರಿಗೆ ತರಲು ಹೊರಟಿದ್ದೇನೆ. ವಿಧಾನಸಭೆಯಲ್ಲಿ ಕೂತು ಅರ್ಧಗಂಟೆ ಮಾತಾಡಿದ್ರೆ ಸರ್ಕಾರ ಸಮಸ್ಯೆ ಬಗೆಹರಿಸುತ್ತಾ.? ಇಷ್ಟು ವರ್ಷ ಮಾತನಾಡಿರುವುದನ್ನ ಸರ್ಕಾರ ಎಷ್ಟು ಜಾರಿಗೆ ತಂದಿದೆ. ಮಾಧ್ಯಮಗಳ ಮುಂದೆ ಸರ್ಕಾರ ಮಾತನಾಡುವುದು ಬೇರೆ, ಇರುವುದೇ ಬೇರೆಯಾಗಿದೆ ಎಂದು ಹೇಳಿದರು.
ಪಂಚರತ್ನ ಯಾತ್ರೆಗೆ ಜನರ ಬೆಂಬಲ ಹೆಚ್ಚಾಗ್ತಿದೆ: ಪ್ರತಿನಿತ್ಯ ಪಂಚರತ್ನ ಯಾತ್ರೆಗೆ ಜನ ಬೆಂಬಲ ಹೆಚ್ಚಾಗುತ್ತಿದೆ. ರಾಜ್ಯದ ಸಮಸ್ಯೆ ಬಗೆಹರಿಸಲು ಜೆಡಿಎಸ್ ಅನಿವಾರ್ಯ ಎಂಬುದು ಜನರ ಅಭಿಪ್ರಾಯ. ಎಲ್ಲಾ ಸಮಾಜಗಳು ಮೀಸಲಾತಿ ಹೋರಾಟ ಪ್ರಾರಂಭಿಸಿವೆ. ನಿಯಮಾವಳಿಗಳ ಆದಾರದ ಮೇಲೆ ಮೀಸಲಾತಿ ನೀಡಬೇಕು. ಸಮುದಾಯದ ಸಮಸ್ಯೆಗಳಿಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಸರ್ಕಾರ ತಾತ್ಕಾಲಿಕ ಪರಿಹಾರ ನೀಡಿ ಸಾರ್ವಜನಿಕವಾಗಿ ಯಾರನ್ನು ದಾರಿ ತಪ್ಪಿಸಬೇಡಿ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಹುಡುಗಾಟಿಕೆ ಬೇಡ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಪಾರದರ್ಶಕ ಮೆರಯಬೇಕು. ಮೀಸಲಾತಿ ವಿಚಾರದಲ್ಲಿ ಹೇಳಿಕೆ ಕೊಡುವ ಬದಲು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಸಮುದಾಯದ ಆರ್ಥಿಕತೆ, ಬಡತನ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಕೊಬ್ಬರಿ ಬೆಲ್ಲದ ವಿಶೇಷ ಹಾರ: ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಂಚರತ್ನ ಯಾತ್ರೆ ಕಾಲಿಡುತ್ತಿದ್ದಂತೆಯೇ ಭರ್ಜರಿ ಸ್ವಾತ ಸಿಕ್ಕಿದೆ. ಮಂಡ್ಯದ ಶಾಸಕ ಎಂ. ಶ್ರೀನಿವಾಸ್ ಅವರ ತವರೂರಾದ ಹನಕೆರೆಯಲ್ಲಿ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಇನ್ನು ಕೊಬ್ಬರಿ-ಬೆಲ್ಲದ ಹಾರ ಹಾಕಿ ಸ್ವಾಗತಿಸಲಾಯಿತು. ಜೆಡಿಎಸ್ ಕಾರ್ಯಕರ್ತರ ಸಂಭ್ರಮ ಮಾಡಿತ್ತು. ಕ್ರೈನ್ ಮೂಲಕ ಕೊಬ್ಬರಿ ಬೆಲ್ಲದ ಹಾರ ಹಾಕಿದ ಜೆಡಿಎಸ್ ಕಾರ್ಯಕರ್ತರು. ಶಾಸಕ ಎಂ.ಶ್ರೀನಿವಾಸ್, ಮನ್ಮುಲ್ ಅಧ್ಯಕ್ಷ ರಾಮಚಂದ್ರು, ಯೋಗೇಶ್, ಸೇರಿ ಹಲವರು ಸಾಥ್ ನೀಡಿದರು.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist