Asia Cup 2023 : ಪಂದ್ಯ ಶ್ರೇಷ್ಠ ಪ್ರಶಸ್ತಿಯ ಮೊತ್ತವನ್ನು ಮೈದಾನ ಸಿಬ್ಬಂದಿಗಳಿಗೆ ನೀಡಿ ಅಭಿಮಾನಿಗಳ ಹೃದಯ ಗೆದ್ದ ಸಿರಾಜ್..!
Asia Cup 2023 : ಈ ಅದ್ಭುತ ಪ್ರದರ್ಶನಕ್ಕಾಗಿ ಮೊಹಮ್ಮದ್ ಸಿರಾಜ್ (Mohammad Siraj) ಇಂದು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಆದರೆ ಈ ಪ್ರಶಸ್ತಿ ಮೊತ್ತವನ್ನು ಮೈದಾನದ ಸಿಬ್ಬಂದಿಗಳಿಗೆ ನೀಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.
ಭಾರತ ತಂಡ 2023ರ ಏಷ್ಯಾಕಪ್ ನಿರಾಶಯವಾಗಿ ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 10 ವಿಕೆಟ್ಗಳಿಂದ ಗೆದ್ದು 8ನೇ ಬಾರಿಗೆ ಏಷ್ಯಾ ಕಪ್ ಗೆದ್ದಿದೆ.
ಈ ಗೆಲುವಿಗೆ ಪ್ರಮುಖ ಕಾರಣ ಎಂದರೆ ಇಂದು ಟೀಂ ಇಂಡಿಯಾ ಬೌಲರ್ಗಳು. ಅದರಲ್ಲಿಯೂ ಮೊಹಮ್ಮದ್ ಸಿರಾಜ್ ಇಂದು ಲಂಕಾ ವಿರುದ್ಧ ಅಬ್ಬರಿಸುವ ಮೂಲಕ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಮೊಹ್ಮಮದ್ ಸಿರಾಜ್ ಶ್ರೀಲಂಕಾ ವಿರುದ್ಧ 7 ಓವರ್ಗಳಲ್ಲಿ 21 ರನ್ ನೀಡಿ 6 ವಿಕೆಟ್ ಉರುಳಿಸಿದರು. ಈ ಮೂಲಕ ಲಂಕಾ ಕೇವಲ 50 ರನ್ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಭಾರತ ನಿತರಾಯಾಸವಾಗಿ ಗೆದ್ದು ಬೀಗಿತು. ಇನ್ನು, ಈ ಅದ್ಭುತ ಪ್ರದರ್ಶನಕ್ಕಾಗಿ ಮೊಹಮ್ಮದ್ ಸಿರಾಜ್ ಇಂದು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಆದರೆ ಈ ಪ್ರಶಸ್ತಿ ಮೊತ್ತವನ್ನು ಮೈದಾನದ ಸಿಬ್ಬಂದಿಗಳಿಗೆ ನೀಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.
ಹೌದು, ಸಿರಾಜ್ ತಮಗೆ ದೊರಕಿದ 5000 ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಬರೋಬ್ಬರಿ 4,15,451 ಆಗುತ್ತದೆ. ಈ ಪ್ರಶಸ್ತಿ ಮೊತ್ತವನ್ನು ಸಂಪೂರ್ಣವಾಗಿ ಮೈದಾನದ ಸಿಬ್ಬಂದಿಗಳಿಗೆ ನೀಡುವ ಮೂಲಕ ಎಲ್ಲರ ಹೃದಯವನ್ನು ಗೆದ್ದಿದ್ದಾರೆ.
ಇದರ ಜೊತೆಗೆ ಎಸಿಸಿ ಸಹ ಕೊಲೊಂಬೊದಾ ಮೈದಾನದ ಸಿಬ್ಬಂದಿಗಳ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡಿದ್ದು, ಮೈದಾನದ ಸಿಬ್ಬಂದಿಗಳಿಗೆ 50000 ಡಾಲರ್ ಮೊತ್ತವನ್ನು ನೀಡಿ ಗೌರವಿಸಿದೆ. ಅಂದರೆ ಬರೋಬ್ಬರಿ 41,54,517 ಭಾರತೀಯ ರೂಪಾಯಿ ಆಗಿದೆ.
ಇಂದು ಮೈದಾನದ ಸಿಬ್ಬಂದಿಗಳು ಇರದಿದ್ದರೆ ಈ ಟೂರ್ನಿಯನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಈ ನಗದು ಬಹುಮಾನ ಅವರಿಗೆ ನೀಡುತ್ತಿದ್ದೇನೆ ಎಂದು ಸಿರಾಜ್ ಹೇಳಿದ್ದಾರೆ. ಮೊಹಮ್ಮದ್ ಸಿರಾಜ್ ಅವರ ಈ ನಡೆಗೆ ಇದೀಗ ಎಲ್ಲಡೆ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಮಾತ್ರವಲ್ಲದೇ ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸಹ ಮೈದಾನ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದ್ದರು. ಅಲ್ಲದೇ ಇಂದು ಇರ್ಪಾನ್ ಪಠಾಣ್ ಸಹ ಮೈದಾನ ಸಿಬ್ಬಂದಿ ಜೊತೆ ಫೋಟೋ ತೆಗೆದುಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.