ಆಶಾ ಕಾರ್ಯಕರ್ತೆಯರಿಗೆ ವೇತನವೂ ಇಲ್ಲ, ಪೆನ್ಶನ್ನೂ ಇಲ್ಲ ಎಂದು ಉಲ್ಟಾ ಹೊಡೆದ ಸರ್ಕಾರ !
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ತಮ್ಮ 14ನೇ ಬಜೆಟ್ ಮಂಡಿಸಿದ್ದು, ವಿವಿಧ ಇಲಾಖೆಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದ್ದಾರೆ. ಜೊತೆಗೆ ಗ್ಯಾರಂಟಿ ಜಾರಿಗೆ ಒತ್ತು ನೀಡುವುದರೊಂದಿಗೆ ಕೆಲವು ಯೋಜನೆಗಳನ್ನೂ ಜಾರಿ ತಂದಿವೆ. ಇದರೊಂದಿಗೆ ಅಂಗನವಾಡಿ ಕಾರ್ಯಕರ್ತರಿಗೆ, ಅಡುಗೆ ಸಿಬ್ಬಂದಿಗಳಿಗೂ ಸಖತ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೌದು, ಹಲವು ಯೋಜನೆಗಳಿಗೆ, ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡಿದ ಸಿಎಂ ಸಿದ್ದು, ಇದೇ ವೇಳೆ ಬಜೆಟ್ನಲ್ಲಿ ಆಶಾ ಕಾರ್ಯಕರ್ತೆಯರಿಗೆ (Asha workers salary), ಗ್ರಾಮ ಸಹಾಯಕರಿಗೆ ಮತ್ತು ಬಿಸಿಯೂಟ ತಯಾರಕರಿಗೆ ಹಾಗೂ ಸಹಾಯಕರಿಗೆ ತಲಾ 1000 ರೂ. ಗೌರವಧನ ಹೆಚ್ಚಳ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೇವಾನುಭವ ಆಧಾರದಲ್ಲಿ 1000 ರೂ. – 1500 ರೂ.ಗಳಷ್ಟು ಗೌರವಧನ ಹೆಚ್ಚಳ ಮಾಡಲಾಗುವುದು ಅಂತ ತಿಳಿಸಿದ್ದಾರೆ.
ಹಾಗಾದರೆ ಇನ್ನು ಈ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 3000 ರೂ ಹೆಚ್ಚಿಗೆ ದೊರೆತಂತೆ ಆಯಿತು. ಯಾಕೆಂದರೆ ಇದೀಗ ಸರ್ಕಾರ 1,000 ರೂ ಗೌರವಧನ ನೀಡುವುದಾಗಿ ಘೋಷಿಸಿದೆ. ಇದರೊಂದಿಗೆ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಒಂದಾಗಿರೋ ಗೃಹ ಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಪ್ರತೀ ತಿಂಗಳು 2000ರೂ ಕೂಡ ದೊರೆಯಲಿದೆ. ಹೀಗಾಗಿ 3000 ರೂ ಸಲೀಸಾಗಿ ಇವರ ಮಡಿಲು ಸೇರಲಿದೆ.
ಇಷ್ಟೇ ಅಲ್ಲದೆ ಪೌರಕಾರ್ಮಿಕರಿಗೆ ಮಾಸಿಕ 2,000 ರೂ. ಸಂಕಷ್ಟ ಭತ್ಯೆ. ಪ್ರವಾಸಿ ಗೈಡ್ಗಳಿಗೆ ಮಾಸಿಕ 2000 ರೂ. ಪ್ರೋತ್ಸಾಹಕ ನೀಡಲಾಗುವುದು ಅಂತ ತಿಳಿಸಿದ್ದಾರೆ. ಇನ್ನೂ ಜಲಜೀವನ್ ಮಿಷನ್ ಯೋಜನೆಯಡಿ ಮುಂದಿನ ಎರಡು ವರ್ಷಗಳಲ್ಲಿ ತಲಾ 25 ಲಕ್ಷ ಮನೆಗಳಿಗೆ ನಳ ಸಂಪರ್ಕ ಒದಗಿಸುವ ಹಾಗೂ 2022-23ನೇ ಸಾಲಿನಲ್ಲಿ 7,000 ಕೋಟಿ ರೂ.ಗಳನ್ನು ವೆಚ್ಚ ಭರಿಸುವ ಗುರಿ ಹೊಂದಲಾಗಿದೆ ಅಂತ ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರು, ಮೀನುಗಾರರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಆದ್ಯತೆ ಅಂತ ಅವರು ಇದೇ ವೇಳೆ ತಿಳಿಸಿದ್ದಾರೆ.
ಮೋದಿಯನ್ನು ಬೆಂಬಲಿಸಲಿದ್ದಾರೆ 67 % ಮುಸ್ಲಿಂ ಮಹಿಳೆಯರು ! ಹಾಗೆ ಬೆಂಬಲಿಸಲೂ ಇದೆ ಒಂದು ಭದ್ರ ಕಾರಣ, ಏನದು ?!
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು 67 % ಮುಸ್ಲಿಂ ಮಹಿಳೆಯರು ಬೆಂಬಲಿಸಲಿದ್ದಾರೆ. ಇದಕ್ಕೆ ಒಂದು ಭದ್ರ ಕಾರಣ ಇದೆ. ಏನದು ?! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್ !.
ಮೋದಿ ನೇತೃತ್ವದ ‘ಏಕರೂಪ ನಾಗರಿಕ ಸಂಹಿತೆ’ಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. ಈ ಯೋಜನೆಗೆ ದೇಶಾದ್ಯಂತ 67% ಮುಸ್ಲಿಂ ಮಹಿಳೆಯರು ಬೆಂಬಲ ಸೂಚಿಸಿದ್ದಾರೆ. ಶೇ.67 ಮುಸ್ಲಿಂ ಮಹಿಳೆಯರು, ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರದಂತಹ ವೈಯಕ್ತಿಕ ವಿಷಯಗಳಿಗಾಗಿ ಎಲ್ಲಾ ಭಾರತೀಯರಿಗೆ ಸಾಮಾನ್ಯ ಕಾನೂನನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆ ಕೇಳಲಾಗಿದ್ದು, ಇದಕ್ಕೆ
67% ಮಹಿಳೆಯರು-5,403- ಹೌದು ಹಾಗೂ 2,039 (25%) ಜನರು ಇಲ್ಲ ಎಂದು ಹೇಳಿದರು.
14 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇಕಡಾ 60 ರಷ್ಟು (1,037) ಅವರು ಕಾನೂನನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು. 515 (30%) ಜನರು ಬೆಂಬಲಿಸೋದಿಲ್ಲ ಮತ್ತು ಶೇಕಡಾ 11 (188) ಜನರು ಗೊತ್ತಿಲ್ಲ ಎಂದು ತಿಳಿಸಿದ್ದಾರೆ. 18-44 ವರ್ಷ ವಯಸ್ಸಿನ 4,366 (69%) ಸಾಮಾನ್ಯ ಕಾನೂನನ್ನು ಬೆಂಬಲಿಸುತ್ತೇವೆ ಎಂದರು. ಹಾಗೂ ಶೇಕಡಾ 24(1,524) ಜನರು ಇಲ್ಲ ಎಂದು ಹೇಳಿದರು. 6% ರಷ್ಟು (405 ಜನರು) ತಮಗೆ ಗೊತ್ತಿಲ್ಲ ಎಂದರು.