ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!
Twitter
Facebook
LinkedIn
WhatsApp

ನವದೆಹಲಿ : ಜಾರಿ ನಿರ್ದೇಶನಾಲಯದಿಂದ ಅಕ್ರಮ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ಹೈಕೋರ್ಟ್ ಗುರುವಾರ ರಿಲೀಫ್ ನೀಡಿದೆ. ಜೈಲಿನಿಂದ ಸರ್ಕಾರವನ್ನು ನಡೆಸಲು ಅನುವು ಮಾಡಿಕೊಡಬಾರದು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ದೆಹಲಿ ಹೈಕೋರ್ಟ್ ವಜಾ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಬಂಧನವಾಗಿದೆ. ಆದ ಕಾರಣದಿಂದ ಅವರನ್ನು ದೆಹಲಿ ಸಿಎಂ ಸ್ಥಾನದಿಂದ ತೆಗೆದುಹಾಕುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರ ನಡೆಸಿದ ಕೋರ್ಟ್, ಅರ್ಜಿಯನ್ನು ವಜಾ ಮಾಡಿದೆ. ‘ಈ ವಿಚಾರದಲ್ಲಿ ಕೋಟ್೯ ಪ್ರವೇಶ ಮಾಡಲು ಬರುವುದಿಲ್ಲ. ಜೈಲಿನಲ್ಲಿ ಕೂತು ಅಧಿಕಾರ ನಡೆಸಬಾರದು ಅಂಥ ಯಾವ ಕಾನೂನು ಹೇಳುತ್ತದೆ’ ಎಂದು ದೆಹಲಿ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಅದಲ್ಲದೆ, ಇದು ಸಂಪೂರ್ಣವಾಗಿ ಶಾಸಕಾಂಗದ ವಿಚಾರವಾಗಿದೆ. ಇದರಲ್ಲಿ ಮಧ್ಯಪ್ರವೇಶಿಸಲು ಕೋರ್ಟ್‌ಗೆ ಸಾಧ್ಯವಿಲ್ಲ. ಹಾಗಾಗಿ ಈ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡದೇ ಇರುವುದು ಒಳಿತು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ವಿಷಯ ಕಾರ್ಯಾಂಗದ ವ್ಯಾಪ್ತಿಯಲ್ಲಿದೆ ಎಂದು ನಾವು ಅಭಿಪ್ರಾಯಪಡುತ್ತೇವೆ. ನಾವು ಅದನ್ನು ನ್ಯಾಯಾಂಗ ವಿಮರ್ಶೆ ಮಾಡಲು ಸಾಧ್ಯವಿಲ್ಲ. ಕಸ್ಟಡಿಗೆ ಬಂದ ನಂತರ ಕೇಜ್ರಿವಾಲ್ ಅವರನ್ನು ತೆಗೆದುಹಾಕುವ ಅಗತ್ಯವಿದೆಯೇ ಎಂದು ನ್ಯಾಯಾಲಯವು ಪ್ರಶ್ನೆ ಮಾಡಿದೆ. ಜೈಲಿನಲ್ಲಿದ್ದು ಅಧಿಕಾರ ನಡೆಸಬಾರದು ಎಂದು ಯಾವ ಕಾನೂನು ಕೂಡ ಹೇಳೋದಿಲ್ಲ ಎಂದಿದೆ. ಈ ಬಗ್ಗೆ ಅರ್ಜಿದಾರರು ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಅಥವಾ ಲೆಫ್ಟಿನೆಂಟ್ ಗವರ್ನರ್ ಪರಿಗಣಿಸಿ ಮಧ್ಯಪ್ರವೇಶಿಸಬೇಕು ಎಂದು ಹೇಳಿದರು.
ಇದೆಲ್ಲ ಕಾರ್ಯಾಂಗದ ವ್ಯಾಪ್ತಿಗೆ ಒಳಪಡುತ್ತದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಂಗದ ವ್ಯಾಪ್ತಿಗೆ ಒಳಪಡುವುದಿಲ್ಲ. ನಾವು ಅದನ್ನು ನ್ಯಾಯಾಂಗ ವಿಮರ್ಶೆ ಮಾಡಲು ಸಾಧ್ಯವಿಲ್ಲ, ಅವರು ಅದನ್ನು ಮಾಡಲಿ. ಇದು ರಾಜಕೀಯ ವಿಷಯ. ನೀವೇ ನಿರ್ಧಾರ ಮಾಡಿ, ಇದರಲ್ಲಿ ಯಾವ ತೀರ್ಪು ನೀಡಲು ಬರುತ್ತದೆ? ಎಂದು ಪ್ರಶ್ನೆ ಮಾಡಿದೆ. ಇದರಲ್ಲಿ ನ್ಯಾಯಾಂಗದ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ಪುನರುಚ್ಚರಿಸಿದೆ.