Arun Kumar Putthila: ಪುತ್ತೂರು ರಾಜಕೀಯದಲ್ಲಿ ಸಂಚಲನ; ಮತ್ತೆ ಬಿಜೆಪಿ ಜೊತೆ ಕೈ ಜೋಡಿಸುತ್ತಾ ಪುತ್ತಿಲ ಪರಿವಾರ?
ಪುತ್ತೂರು : ಪುತ್ತೂರು ರಾಜಕೀಯದಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಕೈ ಬಿಟ್ಟು ಹೋದವರನ್ನು ವಾಪಸ್ ಕರೆತರುವ ಕೆಲಸವನ್ನು ರಾಜ್ಯ ಬಿಜೆಪಿ ಘಟಕ ಮುಂದಾಗಿದೆ. ಮೊದಲ ಹಂತವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಹಿಂದಿರುಗಿ ತರುವಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಯಶಸ್ಸು ಕಂಡಿದ್ದಾರೆ. ಈಗ ಮುಂದಿನ ಭಾಗವಾಗಿ ಪುತ್ತೂರು ಭಾಗದ ಹಿಂದೂ ಮುಖಂಡ ಮತ್ತು ಪುತ್ತಿಲ ಪರಿವಾರದ ಮುಖ್ಯಸ್ಥರಾಗಿರೋ ಅರುಣ್ ಕುಮಾರ್ ಘರ್ ವಾಪ್ಸಿ ಮೂಲಕ ಕಮಲ ಮನೆಗೆ ಕರೆ ತರುವ ಪ್ರಯತ್ನಗಳು ನಡೆತಿದೆ. ಇನ್ನು ಈ ಕಾರ್ಯ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬ ಕುತೂಹಲ ಹಲವರಿಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಯಿಂದಾಗಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ನಂತರ ಪುತ್ತೂರು ನಗರಸಭೆ ಮತ್ತು ಪಂಚಾಯ್ತಿ ಚುನಾವಣೆಗಳಲ್ಲಿಯೂ ಪುತ್ತಿಲ ಪರಿವಾರದಿಂದ ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ಬಿಜೆಪಿಗೆ ಟಕ್ಕರ್ ನೀಡಲಾಗಿತ್ತು.
ಇನ್ನು ಇಂದು ನಡೆದ ಸಮಾಲೋಚನ ಸಭೆಯಲ್ಲಿ ಹಲವು ವಿಷಯಗಳು ಚರ್ಚೆಯಾಗಿದ್ದು, ಎಲ್ಲವೂ ಸರಿಯಾಗಿ ನಡೆಸಿಕೊಂಡು ಹೋಗಲು ಮೂರು ದಿನಗಳ ಗಡು ಬಿಜೆಪಿ ನಾಯಕರಿಗೆ ಪುತ್ತಿಲ ಪರಿವಾರ ನೀಡಿದೆ.
ಪುತ್ತಿಲ ಪರಿವಾರದ ಬೆಂಬಲಿಗರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಗಡುವು ವಿಧಿಸಿದ್ದು, ಮೂರು ದಿನಗಳೊಳಗೆ ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳಿ. ಎಲ್ಲವೂ ಸರಿಯಾಗುವ ಶಕ್ತಿಯನ್ನು ಈ ತುಳುವ ಮಣ್ಣು ನೀಡಲಿ. ನೀವು ಸತಾಯಿಸುವುದು ಬೇಡ ನಾಲ್ಕು ಜನರನ್ನು ಸರಿ ಮಾಡಿ ಇಲ್ಲವಾದಲ್ಲಿ ಪುತ್ತಿಲ ಪರಿವಾರ ಸಾಮಾಜಿಕ ಸಂಘಟನೆಯಾಗಿ ಹುಟ್ಟಿದ್ದು ಹೌದಾದರೂ ಮುಂದೆ ರಾಜಕೀಯ ಕ್ಷೇತ್ರಕ್ಕೆ ಧುಮುಕಲು ಟೊಂಕಕಟ್ಟಿ ಕೊಳ್ಳುತ್ತೇವೆ ಎಂದು ಸಂಘಟನಾ ಸಂದೇಶ ರವಾನಿಸಿದ್ದಾರೆ.
ಪುತ್ತಿಲ ಪರಿವಾರ ಬಿಜೆಪಿಗೆ ಸೆರ್ಪಡೆಯಾಗಬೇಕೆಂದು ಇಷ್ಟವಿದೆ. ಆದರೆ ಅರುಣ್ ಕುಮಾರ್ ಪುತ್ತಿಲ ಒಳಗೆ ಬಂದ್ರೆ ನಮ್ಮ ಕುರ್ಚಿಗೆ ಪೆಟ್ಟು ಬೀಳುತ್ತೆ ಎಂದು 4 ಜನ ಮಾತ್ರ ಅಡ್ಡಿ ಬಿಟ್ರೆ 32000 ಜನರ ವಿರೋಧವೇ ಇಲ್ಲ ಎಂದರು. ಪುತ್ತೂರು ರಾಜಕೀಯ ಸರಿಯಾಗಲಿಲ್ಲವೆಂದರೆ ಮುಂದೆ ನಾವು ಮುಂದೆ ಅನಿವಾರ್ಯವಾಗಿ ರಾಜಕೀಯ ಕ್ಷೇತ್ರಕ್ಕೆ ನಿಲ್ಲೋದು ಪಕ್ಕ ಎಂದು ಪುತ್ತಿಲ ಪರಿವಾರದ ಮುಖಂಡ ಶ್ರೀ ಕೃಷ್ಣ ಉಪಾಧ್ಯಾಯ ಹೇಳಿಕೆ ನೀಡಿದ್ದಾರೆ.