ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದೀಪಾವಳಿ ಹಬ್ಬಕ್ಕೆ ಜನತೆಯ ಅನುಕೂಲಕ್ಕಾಗಿ 4 ವಿಶೇಷ ರೈಲಿನ ವ್ಯವಸ್ಥೆ; ಬೆಂಗಳೂರು, ಬೀದರ್​ ಜನತೆಗೆ ಅನುಕೂಲ!

Twitter
Facebook
LinkedIn
WhatsApp
ದೀಪಾವಳಿ ಹಬ್ಬಕ್ಕೆ ಜನತೆಯ ಅನುಕೂಲಕ್ಕಾಗಿ 4 ವಿಶೇಷ ರೈಲಿನ ವ್ಯವಸ್ಥೆ; ಬೆಂಗಳೂರು, ಬೀದರ್​ ಜನತೆಗೆ ಅನುಕೂಲ!

ಬೀದರ್: ದೀಪಾವಳಿ ಹಬ್ಬಕ್ಕಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು ಸುಮಾರು 600 ಹೆಚ್ಚುವರಿ ಬಸ್‌ಗಳ ಸೌಲಭ್ಯ ಕಲ್ಪಿಸಿರುವ ಬೆನ್ನಲೆ ರೈಲ್ವೆ ಇಲಾಖೆಯೂ ಸಹ ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕು ರೈಲುಗಳ ಅನುಕೂಲ ಮಾಡಿಕೊಟ್ಟಿದೆ.

ದೀಪಾವಳಿ ಹಬ್ಬದ ನಿಮಿತ್ತ ಬೆಂಗಳೂರು, ಹುಬ್ಬಳ್ಳಿಯಲ್ಲಿರುವ ಬೀದರ್ ಲೋಕಸಭಾ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ರೈಲು ಇಂದು (ನವೆಂಬರ್‌ 10ರ ಶುಕ್ರವಾರ) ಹುಬ್ಬಳ್ಳಿ ಯಿಂದ ಬೀದರ್​​​​ಗೆ ವಾಯಾ ಯಶವಂತಪುರ, ಕಲಬುರಗಿ, ಹುಮನಾಬಾದ ಮಾರ್ಗವಾಗಿ ಚಲಿಸಲಿದೆ. ಹಾಗೆ ನ. 14 ರಂದು ಬೀದರನಿಂದ ಯಶವಂತಪುರ ವಾಯಾ ಹುಮನಾಬಾದ, ಕಲಬುರಗಿ ಮಾರ್ಗವಾಗಿ ಚಲಿಸಲಿದೆ.

ನ. 10 ರಂದು ರೈಲು ಸಂಖ್ಯೆ: 06505, ಹುಬ್ಬಳ್ಳಿ-ಬೀದರ್​​ ವಾಯಾ ಯಶವಂತಪುರ, ಹುಮನಾಬಾದ ರೈಲು ಮಹ್ನಾಹ್ನ 2.30ಕ್ಕೆ ಹುಬ್ಬಳ್ಳಿಯಿಂದ ಹೊರಟು, ಯಶವಂತಪುರಕ್ಕೆ ರಾತ್ರಿ 11.15ಕ್ಕೆ ಬರಲಿದ್ದು, ಅಲ್ಲಿಂದ ಹೊರಟು ಯಾದಗಿರ, ಕಲಬುರಗಿ, ತಾಜಸುಲ್ತಾನಪುರ ಮಾರ್ಗವಾಗಿ ಹುಮನಾಬಾದಗೆ ಶನಿವಾರ ಬೆಳಗ್ಗೆ 10.49ಕ್ಕೆ ಹಾಗೂ ಬೀದರಗೆ 12.15ಕ್ಕೆ ತಲುಪಲಿದೆ.

ರೈಲು ಸಂಖ್ಯೆ: 06506, ನ.14 ರಂದು ಮಂಗಳವಾರ ಮಧ್ಯಾಹ್ನ 2.30ಕ್ಕೆ ಬೀದರನಿಂದ ಹೊರಟು, ಹುಮನಾಬಾದ್​​​ಗೆ ಮಧ್ಯಾಹ್ನ 3ಕ್ಕೆ ತಲುಪಲಿದೆ ಅಲ್ಲಿಂದ ಬಂದ ಮಾರ್ಗವಾಗಿ ಮರುದಿನ ಬೆಳಗ್ಗೆ ಬುಧವಾರ ನಸುಕಿನ ಜಾವ 4ಗಂಟೆಗ ಯಶವಂತಪೂರವರೆಗೆ ಮಾತ್ರ ಚಲಿಸಲಿದೆ.

ಇದರ ಜೊತೆ ಕಳೆದ ವಾರ ಪ್ರಾರಂಭಗೊಂಡ ಬೀದರ್​​-ಯಶವಂತಪುರ ವಾಯಾ ಹುಮನಾಬಾದ ಹೊಸ ರೈಲಿನ ಸೇವೆಯೂ ಯತಾಸ್ಥಿತಿಯಲ್ಲಿರಲಿದೆ. ಈ ಹೊಸ ರೈಲು ಶನಿವಾರ ರಾತ್ರಿ11.15ಕ್ಕೆ ಯಶವಂತಪುರನಿಂದ ಬಿಟ್ಟು ಮರುದಿನ ರವಿವಾರ ಮಧ್ಹಾಹ್ನ 1.30ಕ್ಕೆ ಬೀದರ್​​ ತಲುಪಲಿದೆ ಮತ್ತು ಅದೇ ದಿನ ಮಧ್ಯಾಹ್ನ 2.30ಕ್ಕೆ ಬೀದರ್​​​ನಿಂದ ಹೊರಟು ಸೊಮುವಾರ ನಸುಕಿನ ಜಾವ 4 ಗಂಟೆಗೆ ಯಶವಂತಪುರ ತಲುಪಲಿದೆ.

ದೀಪಾವಳಿ ಹಬ್ಬಕ್ಕೆ ಬೀದರ್‌ ಲೋಕಸಭಾ ಕ್ಷೇತ್ರದ ಜನತೆಗೆ ಕಲಬುರಗಿ, ಹುಮನಾಬಾದ ಮಾರ್ಗವಾಗಿ 2 ರೈಲುಗಳು ಹಾಗೂ ವಾಯಾ ವಿಕಾರಬಾದ ಜಹಿರಾಬಾದ ಮಾರ್ಗವಾಗಿ ದಿನನಿತ್ಯ ಇರುವ ರೈಲುಗಳು ಒಟ್ಟು 4 ರೈಲುಗಳಿವೆ, ಜನತೆ ಈ ನಾಲ್ಕು ರೈಲುಗಳ ಮೂಲಕ ಸುರಕ್ಷಿತವಾಗಿ, ಬೀದರ್​​ಗೆ ಬಂದು ಕುಟುಂಬದೊಂದಿಗೆ ಹಬ್ಬದ ಕ್ಷಣಗಳು ಕಳೆಯಲು ಜನತೆಯಲ್ಲಿ ಕೇಂದ್ರ ಸಚಿವ ಸಚಿವ ಭಗವಂತ ಖೂಬಾ ಮನವಿ ಮಾಡಿದ್ದಾರೆ.

ಈ ರೈಲುಗಳ ಮೂಲಕ ನಮ್ಮ ಜನರ ಸಾವಿರಾರು ರೂಪಾಯಿಗಳು ಉಳಿತಾಯವಾಗಲಿದೆ ಹಾಗೂ ಸುಖಕರ ಪ್ರಯಾಣವು ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ನಮ್ಮ ಭಾಗದ ಜನತೆಗೆ ರೈಲಿನ ವ್ಯವಸ್ಥೆ ಮಾಡಿಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್​ ಅವರಿಗೆ ಮತ್ತು ರೈಲ್ವೆ ಅಧಿಕಾರಿಗಳಿಗೆ ಸಚಿವ ಭಗವಂತ ಖೂಬಾ ಧನ್ಯವಾದಗಳು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ