ಅರ್ಪಿತಾ ಎಂಬ ಯುವತಿಯ 10 ಸೆಕಂಡ್ ಬೆತ್ತಲೆ ವಿಡಿಯೋದಿಂದ 98 ಸಾವಿರ ರೂ. ಕಳೆದುಕೊಂಡ ಯುವಕ ; ದೂರು ದಾಖಲು!
ಬೆಂಗಳೂರು: ಸೈಬರ್ ವಂಚಕರ ಜಾಲಾ ಎಲ್ಲೆಡೆ ಮಹಾ ಮಾರಿಯಂತೆ ಹಬ್ಬುತ್ತಿದ್ದು ಅನೇಕ ಅಮಾಯಕರು ಇದಕ್ಕೆ ಪ್ರತೀ ದಿನ ಬಲಿಯಾಗುತ್ತಿದ್ದಾರೆ.
ವಿವಿಧ ರೂಪಗಳಲ್ಲಿ ಬರುವ ಈ ವಂಚಕರ ಜಾಲವನ್ನು ಭೇದಿಸಲು ಪೊಲೀಸ್ ಇಲಾಖೆಗಳು ಎಷ್ಟೆ ಪ್ರಯತ್ನಪಟ್ಟರೂ ನಿರೀಕ್ಷಿಸಿದಷ್ಟು ಯಶಸ್ಸು ಮಾತ್ರ ಸಿಕ್ಕಿಲ್ಲ .
ಇದೀಗ ಇಂತಹುದೇ ಜಾಲಕ್ಕೆ ಬೆಂಗಳೂರಿನ ಸಂಶೋಧನ ವಿದ್ಯಾರ್ಥಿಯೋರ್ವ ಸಿಲುಕಿಕೊಂಡಿದ್ದಾನೆ.
10 ಸೆಕೆಂಡ್ಗಳ ವಿಡಿಯೋ ಕಾಲ್ ಗೆ ಸ್ಪಂದಿಸಿ 98 ಸಾವಿರ ರೂ. ಕಳೆದುಕೊಂಡಿದ್ದಾನೆ ಈ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ಸರಕಾರದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಈತನಿಗೆ ಸೆ.3 ರಂದು ಫೇಸ್ಬುಕ್ನಲ್ಲಿ ಅರ್ಪಿತಾ ಅಗರ್ವಾಲ್ ಹೆಸರಿನ ಯುವತಿ ಪರಿಚಯವಾಗಿದ್ದಳು.
ಮೆಸೆಂಜರ್ ಮೂಲಕ ಮಾತಿಗೆ ಇಳಿದ ಅರ್ಪಿತಾ, ಕೆಲವೇ ನಿಮಿಷಗಳಲ್ಲಿ ತಾನು ಆಪ್ತಳು ಎಂಬಂತೆ ನಡೆದುಕೊಂಡಿದ್ದಳು.
ಬಳಿಕ ಮೊಬೈಲ್ ನಂಬರ್ ಕಳುಹಿಸಿಕೊಟ್ಟು ತಡರಾತ್ರಿ ವಿಡಿಯೋ ಕಾಲ್ ಮಾಡುವಂತೆ ತಿಳಿಸಿದ್ದಳು.
ಯುವಕ ಕೂಡ ತನ್ನ ವೈಯಕ್ತಿಕ ಮೊಬೈಲ್ ನಂಬರ್ ಶೇರ್ ಮಾಡಿ ಎಟವಟ್ಟು ಮಾಡಿಕೊಂಡಿದ್ದ.
ಈ ನಟೋರಿಯಸ್ ಯುವತಿ ಅರ್ಪಿತಾ ಸೆ.3ರಂದು ರಾತ್ರಿ 9.20ರ ಸುಮಾರಿಗೆ ವಿಡಿಯೋ ಕಾಲ್ ಮಾಡಿದಾಗ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, 10 ಸೆಕೆಂಡ್ಗಳಲ್ಲಿಯೇ ಯುವಕ ಕರೆ ಕಟ್ ಮಾಡಿದ್ದ.
ಇದಾದ ಕೆಲವೇ ಹೊತ್ತಿನಲ್ಲಿ ರಿತಿನ್ ವಾಟ್ಸ್ಯಾಪ್ಗೆ ಅಶ್ಲೀಲ ವಿಡಿಯೋ ಬಂದಿದ್ದು, ಅದರಲ್ಲಿ ಯವಕನ ಮುಖವನ್ನೂ ಮಾರ್ಫ್ ಮಾಡಿ ಬಳಸಲಾಗಿತ್ತು. ಅದಾದ ಬಳಿಕ ಯುವಕನ ನಂಬರ್ಗೆ ಬಂದ ವಾಯ್ಸ್ ಮೆಸೇಜ್ನಲ್ಲಿ ಹೇಳಿದಷ್ಟು ಹಣ ಕಳುಹಿಸದಿದ್ದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ಮೇಲ್ ಮಾಡಲಾಗಿತ್ತು.
ಇದರಿಂದ ಕಂಗಾಲಾದ ಯುವಕ ಹಂತ- ಹಂತವಾಗಿ ವಂಚಕರು ಕಳುಹಿಸಿದ್ದ ಅಕೌಂಟ್ ನಂಬರ್ಗಳಿಗೆ 98,500 ಕಳಿಸಿದ್ದರು. ಆದರೆ, ವಂಚಕರು ಪುನಃ ಹಣಕ್ಕೆ ಬೇಡಿಕೆ ಇರಿಸಿದ್ದರಿಂದ ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆತ ದೂರು ನೀಡಿದ್ದ ಅರ್ಪಿತಾ ಅಗರ್ವಾಲ್ ಎಂಬಾಕೆಯದ್ದು ಫೇಸ್ ಬುಕ್ ಖಾತೆ ನಕಲಿ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ಫೇಸ್ಬುಕ್, ವಾಟ್ಸ್ಯಾಪ್, ಇನ್ಸ್ಟಾಗ್ರಾಂ ಖಾತೆಗಳ ಮೂಲಕ ಸ್ನೇಹಿತರಾಗುತ್ತಿದ್ದಾರೆ. ಬಳಿಕ ವಿಡಿಯೋ ಕಾಲ್ ನೆಪದಲ್ಲಿ ರೆಕಾರ್ಡೆಡ್ ವಿಡಿಯೋ ಮುಂದಿಟ್ಟು ಅದರಲ್ಲಿ ಕರೆ ಸ್ವೀಕರಿಸಿದವರ ಫೋಟೊ ತಿರುಚಿ ಅಶ್ಲೀಲ ವಿಡಿಯೋ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇರಿಸಿ ವಂಚಿಸುತ್ತಿದ್ದಾರೆ.
ಹೀಗಾಗಿ, ಅಪರಿಚಿತ ಮಹಿಳೆಯರ ಸ್ನೇಹ ಹಾಗೂ ವಿಡಿಯೋ ಕರೆಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.