ಶನಿವಾರ, ಸೆಪ್ಟೆಂಬರ್ 7, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಡಗುತಿಟ್ಟು ಯಕ್ಷಗಾನದ ಆರ್ಗೋಡು ಮೋಹನ್ದಾಸ್ ಶೆಣೈಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ

Twitter
Facebook
LinkedIn
WhatsApp
ಬಡಗುತಿಟ್ಟು ಯಕ್ಷಗಾನದ ಆರ್ಗೋಡು ಮೋಹನ್ದಾಸ್ ಶೆಣೈಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ

ಮೋಹನದಾಸ ಶೆಣೈ: ಕುಂದಾಪುರ ತಾಲೂಕಿನ ಕಮಲಶಿಲೆ ಬಳಿಯ ಅರ್ಗೋಡು ಮೋಹನದಾಸ ಶೆಣೈ ಸುಮಾರು ೪ ದಶಕಗಳಿಂದ ಯಕ್ಷಗಾನ ಕಲಾಸೇವೆಯಲ್ಲಿದ್ದಾರೆ.
ಹಿರಿಯಡಕ ಮೇಳದಲ್ಲಿ ಕಲಾವಿದನಾಗಿ ಸೇರ್ಪಡೆಗೊಳ್ಳುವ ಮೂಲಕ ಕಲಾಸೇವೆ ಆರಂಭಿಸಿ ಪೆರ್ಡೂರು, ಸಾಲಿಗ್ರಾಮ, ಕಮಲಶಿಲೆ, ಕುಮಟಾ, ಅಮೃತೇಶ್ವರಿ ಮೇಳಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸುಧನ್ವ, ದಶರಥ, ಭೀಷ್ಮ, ಶ್ರೀರಾಮ, ಶಂತನು, ನಾರದ, ಭೀಮ, ಅರ್ಜುನ, ಹನುಮಂತ ಮೊದಲಾದ ಪಾತ್ರಗಳು ಅವರಿಗೆ ಖ್ಯಾ ತಂದಿತ್ತ ಪಾತ್ರಗಳು, ಜೊತೆಗೆ ಐತಿಹಾಸಿಕ ಮತ್ತು ಸಾಮಾಜಿಕ ಪ್ರಸಂಗಗಳ ಪಾತ್ರಗಳಲ್ಲೂ ಅಭಿನಯಿಸಿದ್ದಾರೆ.
ಯಕ್ಷಗಾನ ಪ್ರಸಂಗಕರ್ತರೂ ಆಗಿರುವ ಮೋಹನದಾಸ ಶೆಣೈ, ಯಾವುದೇ ಪೂರ್ವತಯಾರಿ ಇಲ್ಲದೇ ನಿರರ್ಗಳವಾಗಿ ಅಹೋರಾತ್ರಿ ಅರ್ಥ ಹೇಳಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ವಿವಿಧ ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ.

150ಕ್ಕಿಂತ ಅಧಿಕ ವರ್ಷಗಳಿಂದ ಅವರ ಮನೆಯಲ್ಲಿ ಗಣೇಶ ಹಬ್ಬ ಆಚರಿಸಲಾಗುತ್ತಿತ್ತು. ಈ ವೇಳೆ ನಡೆಯುತ್ತಿದ್ದ ಯಕ್ಷಗಾನ ತಾಳಮದ್ದಳೆ, ತಂದೆಯ ಕಲಾಸಕ್ತಿ ಪ್ರೇರಣೆಗಳ ಅವರನ್ನು ಯಕ್ಷರಂಗಕ್ಕೆ ಕರೆದು ತಂದಿತ್ತು ಯಕ್ಷಗಾನದ ಕಷ್ಟ ಪರಸಿದ ಮನೆಯೇ ಮೋಷನ್ದಾಸ್ ಶೆಣೈ ಅವರಲ್ಲಿ ಹುದುಗಿದ್ದ ಯಕ್ಷಗಾನ ಸೇವಾಸಕ್ತಿಗೆ ಆಡಂಬೊಲವಾಗಿತ್ತು. ತಂದೆ ಆರ್ಗೋಡು ಗೋವಿಂದರಾಯ್ ಶೆಣೈ ಅವರು 50 ವರ್ಷಗಳ ಕಾಲ ಯಕ್ಷಗಾನ ಸೇವೆ ಸಲ್ಲಿಸಿದ ಭಾಗವತರು, ತಾಯಿ ಮುಕ್ತಾಬಾಯಿ ಕಲಾ ಪೋಷಕರಾಗಿದ್ದರು. ಈ ಕಾರಣದಿಂದಲೋ ಏನೋ ಮೋಹನದಾಸ್ ಅವರು ಪಿಯುಸಿ ನಂತರದ ವಿದ್ಯಾಭ್ಯಾಸಕ್ಕೆ ಶಡಿವಾಣ ಹಾಕಿಯಸೇವೆಗೆ ಅರ್ಪಿಸಿಕೊಳ್ಳುವ ನಿರ್ಧಾರ ಮಾಡಿದ್ದರು.

ದೊಡ್ಡಪ್ಪಂದಿರಾದ ರಾಮಚಂದ್ರ ಶೆಣೈ, ನರಸಿಂಹ ಶೆಣೈ ಅವರಿಂದ ಮಾತುಗಾರಿಕೆ ಕಲಿತ ಅವರಿಗೆ ಹೆಜ್ಜೆ ಕಲಿಸಿದವರು ಪ್ರಸಿದ್ಧ ಹಾಸ್ಯ ಕಲಾವಿದರಾಗಿದ್ದ ಕಮಲಶಿಲೆ ಮಹಾಬಲ ದೇವಾಡಿಗ, ಮೋಹನದಾಸ್ ಅವರ 13 ವರ್ಷಗಳ ಯಕ್ಷಸೇವೆಯಲ್ಲಿ ಹಿರಿಯಡಕ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಕುಮಟಾ, ಅಮೃತೇಶ್ವರಿ ಹಾಗೂ ಕಮಲಶಿಲೆ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸುಧನ್ವದಿಂದ ಆರಂಭವಾದ ಅವರ ವೇಷಾನೆಯ ದಶರಥ, ಭಿಷ್ಯ, ರಾಮ, ಪರಶುರಾಮ, ಶಂತನು ದೇವವೃತ, ಉಗ್ರಸೇನ, ಅಕ್ರೂರ, ನಾರದ, ಭೀಮ, ನಗರ, ನಳ, ಋತುವರ್ಣ, ಮಾಯಕಾ ವೀರಮಣಿ, ಮುಕ್ಕಾಂಗದ, ವಿಶ್ರವಸು, ಜಮದಗ್ನಿ, ಮೈತ್ರೇಯ (ವಸಂತ ಐತಿಹಾಸಿಕ) ಸೇರಿದಂತೆ ಬಹತಹ ಬಿರಾಜ್, ಸಾಮಾಜಿಕ ಹಾಗೂ ಐತಿಹಾಸಿಕ ಪಾತ್ರಗಳಿಗೆ ಬಣ್ಣ ಹಾಕಿದ್ದಾರೆ.
ಪ್ರಶಸ್ತಿಗಳು

ಕೆ.ಎಸ್. ನಿಡಂಬೂರು ಪ್ರಶಸ್ತಿ, ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ, ಶಿರಿಯಾರ ಮಂಜುನಾಥ ನಾಯ್ಕ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಬೈಕಾಡಿ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಜಿ.ಎಸ್.ಬಿ ಕಲಾರತ್ನ, ಡೊಂಬಿವಿಲಿ ಕರ್ನಾಟಕ ಸಂಘ ಮುಂಬೈ, ಬಂಟರ ಸಂಘ ಮುಂಬೈ, ಮೊಗವೀರ ಸಂಘ ಬೆಂಗಳೂರು, ಅಗ್ನಿಸೇವಾ ಟ್ರಸ್ಟ್, ನವನೀತ ಯಕ್ಷಗಾನ ಮಂಡಳಿ, ಶೇಣಿ ಕಲೋತ್ಸದ ಪ್ರಶಸ್ತಿಗಳು ಸೇರಿ ಅನೇಕ ಪ್ರಶಸ್ತಿ, ಸನ್ಯಾಸಿಗಳು ಅವರ ಮುಡಿಗೇರಿದೆ.

ಶೋತೃಗಳ ಆಸಕ್ತಿಗೆ ಅನುಗುಣವಾಗಿ ಗಾನ್ಯ, ನಾಟ್ಯ, ಮಾತುಗಾರಿಕೆ, ವೇಷ, ಲಯ, ತಾಳ ಎಲ್ಲವನ್ನೂ ಮೇಲೈಸಿಕೊಂಡಿರುವ ಕರಾವಳಿಯ ಗಂಡುಕಲೆ ಎನಿಸಿಕೊಂಡಿರುವ ಯಕ್ಷಗಾನದಲ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೆ, ಶುದ್ಧ, ಸರಳ ನಿರರ್ಗಳವಾಗಿ ಕನ್ನಡದಲ್ಲಿ ಅಹೋರಾತ್ರಿ ಮಾತನಾಡಿ ಶೋತ್ರಗಳ ಮನಗೆಲ್ಲುವ ಯಕ್ಷಗಾನ ಕಲಾವಿದರ ಪರಂಪರೆಯಲ್ಲಿ ಕಲಾವಿದ ಎನ್ನುವ ಹೆಗ್ಗಳಿಕೆ ಜೊತೆ ಯಕ್ಷ ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಅವರ ಅಭಿಮಾನಿಗಳಿಗೆ ಹರ್ಷ ತಂದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ