ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Arecanut : ಕುಸಿತ ಕಂಡಿದ್ದ ಅಡಿಕೆ ಧಾರಣೆ ಮತ್ತೆ 50,000 ರೂ. ಗಡಿಯತ್ತ! ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ

Twitter
Facebook
LinkedIn
WhatsApp
Arecanut : ಕುಸಿತ ಕಂಡಿದ್ದ ಅಡಿಕೆ ಧಾರಣೆ ಮತ್ತೆ 50,000 ರೂ. ಗಡಿಯತ್ತ! ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ

ದಕ್ಷಿಣ ಕನ್ನಡ ಉಡುಪಿ ಮತ್ತು ಕೆಲವು ಮಲೆನಾಡು ಗಳಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಧಾರಣೆ ಎರಡು ತಿಂಗಳಿನಿಂದ ಏರುಗತಿಯಲ್ಲಿ ಸಾಗುತ್ತಿದ್ದು 500ರ ಗಡಿ ತಲುಪುತ್ತಿದೆ. ಈ ಹಿಂದೆ ಇಳಿಕೆಯಲ್ಲಿದ್ದ ಅಡಿಕೆ ಧಾರಣೆ ಮತ್ತೆ ಏರಿಕೆಯಾಗಿದ್ದು ಚೇತರಿಸಿಕೊಳ್ಳುತ್ತಿದ್ದು ಇದರಿಂದ ರೈತರಲ್ಲಿ ಸಂತೋಷ ಹೆಚ್ಚಾಗಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಅಡಿಕೆ ಬೆಳೆಗೆ ರೈತರು ಹೆಚ್ಚು ಉತ್ಸಾಹ ನೀಡುತ್ತಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ದರ ಕೆಜಿಗೆ 445 ರಿಂದ 460 ವರೆಗೆ ಇದೆ. ಹಾಗೂ ಹಳೆ ಅಡಿಕೆ ಧಾರಣೆ 470 ರಿಂದ 490 ರವರೆಗೆ ಇದ್ದು ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಗಣೇಶ ಚತುರ್ಥಿ ಹಬ್ಬದ ನಂತರ ಮತ್ತೆ ಏರಿಕೆಯಾಗಬಹುದ ಎಂಬ ಮಾತು ಕೃಷಿ ವಲಯದಲ್ಲಿದೆ.

ಕಳೆದ ತಿಂಗಳಲ್ಲಿ ಏರಿಕೆ ಹಾದಿಯಲ್ಲಿದ್ದ ಅಡಿಕೆದರ ಮತ್ತೆ ಕುಸಿತಗೊಂಡಿತ್ತು. ಆದರೆ ಇದೀಗ ಮತ್ತೆ ಏರಿಕೆಯಾಗಿದ್ದು 500 ರಗಡಿ ತಲುಪಲು ಇನ್ನು ಕೆಲವೇ ದಿನಗಳಿದ್ದು ಮುಂದಿನ ತಿಂಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂದು ಅಡಿಕೆ ವರ್ತಕರು ಮತ್ತು ಬೆಳೆಗಾರರಲ್ಲಿ ಹಾಗೂ ಕೃಷಿ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.

ಕರಾವಳಿ ಭಾಗಗಳಲ್ಲಿ ಅತಿ ಹೆಚ್ಚಾಗಿ ಅಡಿಕೆ ಬೆಳೆಯನ್ನೇ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿಸಿ ರೈತರು ಜೀವನ ನಡೆಯುತ್ತಿದ್ದಾರೆ. ಎಲೆಚುಕ್ಕಿ ರೋಗ ದಿಂದ ಹಲವು ಪ್ರದೇಶಗಳಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಉಂಟಾಗಿತ್ತು ಆದರೆ ಈ ಬಾರಿ ಬೇಸಿಗೆಯಲ್ಲಿ ಹಲವು ಕಡೆ ನೀರಿನ ಅಭಾವದಿಂದ ಅಡಿಕೆ ಗಿಡಗಳು ಬತ್ತಿ ಹೋಗಿವೆ. ಕೆರೆ ಹಾಗೂ ನದಿಗಳನ್ನು ನಂಬಿಕೊಂಡಿದ್ದ ಹಲವು ಜನರಿಗೆ ಸಂಕಷ್ಟ ಉಂಟಾಗಿತ್ತು.

ಹೊಸ ಹಾಗೂ ಹಳೆ ಅಡಿಕೆಗೆ ಕೇವಲ 25 ರೂಪಾಯಿಯಷ್ಟು ವ್ಯತ್ಯಾಸವಿದ್ದು ಹೊಸ ಅಡಿಕೆಗೆ ಬಾರಿ ಬೇಡಿಕೆ ಇದೆ. ಗುಜರಾತ್ ಉತ್ತರ ಪ್ರದೇಶ ಅಂತಹ ರಾಜ್ಯಗಳಿಗೆ ರಫ್ತಾಗುತ್ತಿದ್ದು, ದೇಶ ವಿದೇಶಗಳಿಗೂ ಈ ಭಾಗದಿಂದ ರಫ್ತಾಗುತ್ತಿದೆ.

ಕಳೆದ ಮೂರು ವರ್ಷಗಳ ಹಿಂದೆ ಸುಳ್ಯ ಮಡಿಕೇರಿ ಭಾಗಕ್ಕೆ ಎಲಚುಕ್ಕಿ ರೋಗವು ಸಾಕಷ್ಟು ಹಾನಿ ಉಂಟು ಮಾಡಿತ್ತು. ಆದರೆ ಕರಾವಳಿ ಭಾಗಗಳಲ್ಲಿ ಕೀಟನಾಶಕ ಸಿಂಪಡಿಸಿ ಎಲೆ ಚುಕ್ಕಿ ರೋಗದಿಂದ ಪಾರಾಗಿದ್ದರು ಕಳೆದ ಬಾರಿಯೂ ಅಡಿಕೆಗೆ ಬಾರಿ ಬೇಡಿಕೆ ಇದ್ದು 500 ಗಡಿ ತಲುಪಿತ್ತು ಈ ಬಾರಿ ಅಡಿಕೆ ಬೆಳೆಗಾರರು ಉತ್ತಮ ದರದಲ್ಲಿ ನಿರೀಕ್ಷಿದ್ದು ಕ್ವಿಂಟಲ್ ಗೆ 50,000 ಗಡಿ ದಾಟುವುದು ಎಂದು ಅಡಿಕೆ ಬೆಳೆಗಾರರಲ್ಲಿ ಮಾತು ಕೇಳಿ ಬರುತ್ತಿದೆ. ಮುಂದಿನ ಗಣೇಶ ಚತುರ್ಥಿ ಮತ್ತು ಅಷ್ಟಮಿಯ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆಯು ಇದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇದ್ದು ಅಡಿಕೆ ವರ್ತಕರು ಕೂಡ ರೈತರಿಂದ ಉತ್ತಮ ದರಕ್ಕೆ ಅಡಿಕೆಯನ್ನು ಪಡೆದುಕೊಂಡಿರುತ್ತಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist