Arecanut: ಕಳೆದ ವಾರ ಇಳಿಕೆಯಲ್ಲಿದ್ದ ಅಡಿಕೆ ಧಾರಣೆ ಮತ್ತೆ ಏರಿಕೆ ; 500 ರ ಗಡಿ ತಲುಪುವ ಸಾಧ್ಯತೆ!
ಬಂಟ್ವಾಳ
ಹಳೆದು -46,000 – 49,000 ರೂ.
ಹೊಸದು -44000 – 460000
ಪುತ್ತೂರು
ಹಳೆದು – 46,000 – 49,000 ರೂ
ಹೊಸದು – 44000 – 46500
ಶಿವಮೊಗ್ಗ
ರಾಶಿ ಅಡಿಕೆ – 51,621 ರೂ.
ತುಮಕೂರು
ರಾಶಿ ಅಡಿಕೆ – 54,050 ರೂ.
ಸಾಗರ
ರಾಶಿ ಅಡಿಕೆ- 50,219 ರೂ
ಕರಾವಳಿ ಭಾಗಗಳಲ್ಲಿ ಅತಿ ಹೆಚ್ಚಾಗಿ ಅಡಿಕೆ ಬೆಳೆಯನ್ನೇ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿಸಿ ರೈತರು ಜೀವನ ನಡೆಯುತ್ತಿದ್ದಾರೆ. ಎಲೆಚುಕ್ಕಿ ರೋಗ ದಿಂದ ಹಲವು ಪ್ರದೇಶಗಳಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಉಂಟಾಗಿತ್ತು ಆದರೆ ಈ ಬಾರಿ ಬೇಸಿಗೆಯಲ್ಲಿ ಹಲವು ಕಡೆ ನೀರಿನ ಅಭಾವದಿಂದ ಅಡಿಕೆ ಗಿಡಗಳು ಬತ್ತಿ ಹೋಗಿವೆ. ಕೆರೆ ಹಾಗೂ ನದಿಗಳನ್ನು ನಂಬಿಕೊಂಡಿದ್ದ ಹಲವು ಜನರಿಗೆ ಸಂಕಷ್ಟ ಉಂಟಾಗಿತ್ತು.
ಹೊಸ ಹಾಗೂ ಹಳೆ ಅಡಿಕೆಗೆ ಕೇವಲ 25 ರೂಪಾಯಿಯಷ್ಟು ವ್ಯತ್ಯಾಸವಿದ್ದು ಹೊಸ ಅಡಿಕೆಗೆ ಬಾರಿ ಬೇಡಿಕೆ ಇದೆ. ಗುಜರಾತ್ ಉತ್ತರ ಪ್ರದೇಶ ಅಂತಹ ರಾಜ್ಯಗಳಿಗೆ ರಫ್ತಾಗುತ್ತಿದ್ದು, ದೇಶ ವಿದೇಶಗಳಿಗೂ ಈ ಭಾಗದಿಂದ ರಫ್ತಾಗುತ್ತಿದೆ.
ಕಳೆದ ಮೂರು ವರ್ಷಗಳ ಹಿಂದೆ ಸುಳ್ಯ ಮಡಿಕೇರಿ ಭಾಗಕ್ಕೆ ಎಲಚುಕ್ಕಿ ರೋಗವು ಸಾಕಷ್ಟು ಹಾನಿ ಉಂಟು ಮಾಡಿತ್ತು. ಆದರೆ ಕರಾವಳಿ ಭಾಗಗಳಲ್ಲಿ ಕೀಟನಾಶಕ ಸಿಂಪಡಿಸಿ ಎಲೆ ಚುಕ್ಕಿ ರೋಗದಿಂದ ಪಾರಾಗಿದ್ದರು ಕಳೆದ ಬಾರಿಯೂ ಅಡಿಕೆಗೆ ಬಾರಿ ಬೇಡಿಕೆ ಇದ್ದು 500 ಗಡಿ ತಲುಪಿತ್ತು ಈ ಬಾರಿ ಅಡಿಕೆ ಬೆಳೆಗಾರರು ಉತ್ತಮ ದರದಲ್ಲಿ ನಿರೀಕ್ಷಿದ್ದು ಕ್ವಿಂಟಲ್ ಗೆ 50,000 ಗಡಿ ದಾಟುವುದು ಎಂದು ಅಡಿಕೆ ಬೆಳೆಗಾರರಲ್ಲಿ ಮಾತು ಕೇಳಿ ಬರುತ್ತಿದೆ. ಮುಂದಿನ ಗಣೇಶ ಚತುರ್ಥಿ ಮತ್ತು ಅಷ್ಟಮಿಯ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆಯು ಇದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇದ್ದು ಅಡಿಕೆ ವರ್ತಕರು ಕೂಡ ರೈತರಿಂದ ಉತ್ತಮ ದರಕ್ಕೆ ಅಡಿಕೆಯನ್ನು ಪಡೆದುಕೊಂಡಿರುತ್ತಾರೆ.