Arecanut: 500 ರ ಗಡಿಯತ್ತ ಅಡಿಕೆ ಧಾರಣೆ ; ಚೌತಿ ಬಳಿಕ ಇನ್ನೂ ಏರಿಕೆಯಾಗಲಿದೆಯಾ ಅಡಿಕೆ ಬೆಲೆ!
Arecanut: ದಕ್ಷಿಣ ಕನ್ನಡ ಉಡುಪಿ ಮತ್ತು ಕೆಲವು ಮಲೆನಾಡು ಗಳಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಧಾರಣೆ ಎರಡು ತಿಂಗಳಿನಿಂದ ಏರುಗತಿಯಲ್ಲಿ ಸಾಗುತ್ತಿದ್ದು 500ರ ಗಡಿ ತಲುಪುತ್ತಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಅಡಿಕೆ (Arecanut)ಬೆಳೆಗೆ ರೈತರು ಹೆಚ್ಚು ಉತ್ಸಾಹ ನೀಡುತ್ತಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ದರ ಕೆಜಿಗೆ 438 ರಿಂದ 445 ವರೆಗೆ ಇದೆ. ಹಾಗೂ ಹಳೆ ಅಡಿಕೆ ಧಾರಣೆ 465 ರಿಂದ 475 ರವರೆಗೆ ಇದ್ದು ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಗಣೇಶ ಚತುರ್ಥಿ ಹಬ್ಬದ ನಂತರ ಮತ್ತೆ ಏರಿಕೆಯಾಗಬಹುದ ಎಂಬ ಮಾತು ಕೃಷಿ ವಲಯದಲ್ಲಿದೆ.
ಮೂರು ತಿಂಗಳಿನಿಂದ ಅಡಿಕೆ ಧಾರಣೆಯಲ್ಲಿ ಭರ್ಜರಿ ಏರಿಕೆಯಾಗುತ್ತಲೇ ಇದೆ. ಕೆಲವರು ಹಳೇ ಅಡಿಕೆಯನ್ನು ಶೇಖರಿಸಿ ಇಟ್ಟು ಸಪ್ಟೆಂಬರ್ – ಅಕ್ಟೋಬರ್ ತಿಂಗಳ ನಂತರ ದರ ಏರಿಕೆಗೆ ನಿರೀಕ್ಷೆಯಲ್ಲಿದ್ದಾರೆ.3 ತಿಂಗಳಿನಿಂದ ಅಡಿಕೆ ಧಾರಣೆ ಏರಿಕೆಯಾಗುತ್ತಲೇ ಇದೆ. ಕಳೆದ ಬಾರಿ ಕೆಜಿಗೆ 375 ಇದ್ದ ದರ ಪ್ರಸ್ತುತ 470ಕ್ಕೆ ತಲುಪಿ 90 ರೂಪಾಯಿ ಏರಿಕೆ ಕಂಡಿದೆ. ಅಡಿಕೆಗೆ ಬಾರಿ ಬೇಡಿಕೆ ಇದ್ದು, ಮುಂದಿನ ತಿಂಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಡಿಕೆ ಮಾರುಕಟ್ಟೆಯಲ್ಲಿ ಮಾತು ಕೇಳಿ ಬರುತ್ತಿದೆ. ಆದರೂ ಏರಿಳಿತದಲ್ಲಿರುವ ಅಡಿಕೆದಾರಣೆ ಯಾವ ಸಂದರ್ಭದಲ್ಲಿ ಏರಿಕೆಯಾಗುತ್ತದೆ ಮತ್ತು ಇಳಿಕೆಯಾಗುತ್ತದೆಂದು ಊಹಿಸಲು ಸಾಧ್ಯವಿಲ್ಲ.
ಮತ್ತು ಈ ಬಾರಿ ಅಡಿಕೆಗೆ ದರ ಏರಿಕೆಯಾಗಿದ್ದು ಅಡಿಕೆ ವರ್ತಕರು, ಎಪಿಎಂಸಿ, ಕ್ಯಾಂಪ್ಕೋಗಳಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ.ನಗರದಲ್ಲಿನ ಅಡಿಕೆವರ್ತಕರು ಅಡಿಕೆ ವರ್ತಕರು ಹಳ್ಳಿಗಳಿಗೆ ಮುಖ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ರೈತರು ಅಡಿಕೆಯನ್ನು ಬಹಳ ಜಾಗರೂಕತೆಯಿಂದ ಸಂಗ್ರಹಿಸಿ ಹೇಳುತ್ತಾರೆ. ಮತ್ತು ಹಳೆ ಅಡಿಕೆಗೆ ಇನ್ನು ಕೆಲವೇ ದಿನಗಳಲ್ಲಿ 500 ರೂಪಾಯಿ ಗಡಿ ತಲುಪುವ ಸಂಭವವಿದ್ದು ಅಡಿಕೆ ಬೆಳೆಗಾರರಲ್ಲಿ ಹರ್ಷ ತಂದಿದೆ.
ಕರಾವಳಿ ಜಿಲ್ಲೆಗಳಲ್ಲಿ ಉತ್ಪಾದಿಸಲಾದ ಅಡಿಕೆ ಉತ್ತಮ ಗುಣಮಟ್ಟ ಹೊಂದಿದ್ದು ಈ ಅಡಿಕೆಯನ್ನು ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಗೆ ಅಡಿಕೆ ರಫ್ತಾಗುತ್ತಿದ್ದು, ದೇಶವಿದೇಶಗಳಲ್ಲೂ ಉತ್ತಮ ಬೇಡಿಕೆ ಇದೆ.
ಇತ್ತೀಚಿನ ದಿನಗಳಲ್ಲಿ ಅಡಿಕೆ ಸುಲಿಯಲು ವಿಶೇಷ ಯಂತ್ರಗಳು ಬಂದಿದ್ದು ಆದರೂ ಅದಕ್ಕೆ ಬೆಳೆಗಾರರು ಕೂಲಿ ಕಾರ್ಮಿಕರನ್ನು ಹೆಚ್ಚಾಗಿ ಬಳಸುತ್ತಿದ್ದು ಅಡಿಕೆಗೆ ಯಾವುದೇ ಹಾನಿಯಾಗದೆ ಯಾವುದೇ ನಷ್ಟ ಉಂಟಾಗುವುದಿಲ್ಲ. ಕೆಲವರು ಯಂತ್ರಗಳಿಗೆ ಹಿಂದೇಟು ಹಾಕುತ್ತಿದ್ದು, ಯಂತ್ರಗಳಲ್ಲಿ ಅಡಿಕೆಗಳು ಪುಡಿಯಾಗುತ್ತವೆ ಎಂಬ ಮಾತು ರೈತರಲ್ಲಿದೆ.
ಅದಲ್ಲದೆ ಈ ಬಾರಿ ಹೆಚ್ಚು ಮಳೆಯಾಗಿದೆ ಕೊಳೆ ರೋಗದಿಂದ ರೈತರು ಪಾರಾಗಿದ್ದಾರೆ ಆದರೂ ಕೆಲವು ಕಡೆ ಕಳೆದ ಬೇಸಿಗೆಯಲ್ಲಿ ಹೆಚ್ಚು ಬಿಸಿಲ ತಾಪಕ್ಕೆ ನೀರಿಲ್ಲದೆ ಕೆಲವು ಅಡಿಕೆ ಗಿಡಗಳು ಬತ್ತಿ ಹೋಗಿವೆ ಆದರೂ ಲಾಭ ನಷ್ಟ ಎಂಬ ಹಾದಿಯಲ್ಲಿ ಬೆಳೆಗಾರರು ಅಡಿಕೆಗೆ ಹೆಚ್ಚು ಉತ್ಸಾಹ ನೀಡುತ್ತಿದ್ದಾರೆ ಮುಂದಿನ ತಿಂಗಳಲ್ಲಿ ಅಡಿಕೆ ಬೆಲೆ ಮತ್ತಷ್ಟು ಏರಿಕೆಯಾಗಲಿದೆಯಾ ಎಂಬ ಸವಾಲು ಅಡಿಕೆ ಬೆಳೆಗಾರರಲ್ಲಿದೆ 500 ದಾಟಿ ಹೋದರೆ ಇನ್ನು ಹೆಚ್ಚು ರೈತರು ಅಡಿಕೆ ಬೆಳೆಗೆ ಆಸಕ್ತಿ ನೀಡುವುದು ಖಚಿತ.