ಶುಕ್ರವಾರ, ಏಪ್ರಿಲ್ 19, 2024
ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?-ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?-ನಾಳೆ ಮಂಗಳೂರಿನಲ್ಲಿ ಮೋದಿ ರೋಡ್ ಶೋ ; ವಾಹನ ಸಂಚಾರದಲ್ಲಿ ಬದಲಾವಣೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Apple iPhone 13: ಐಫೋನ್ 13ರ ಬೆಲೆಯಲ್ಲಿ ಭಾರೀ ಇಳಿಕೆ

Twitter
Facebook
LinkedIn
WhatsApp
Apple iPhone 13: ಐಫೋನ್ 13ರ ಬೆಲೆಯಲ್ಲಿ ಭಾರೀ ಇಳಿಕೆ

ನವದೆಹಲಿ: ಐಫೋನ್ 13 ಪ್ರಚಂಡ ಸ್ಮಾರ್ಟ್‌ಫೋನ್ ಆಗಿದ್ದು, ಇದು ಐಫೋನ್ 14ರ ಸರಣಿ ಸ್ಮಾರ್ಟ್‍ಫೋನ್ ಬಿಡುಗಡೆ ಬಳಿಕವೂ ಟ್ರೆಂಡಿಂಗ್‍ನಲ್ಲಿದೆ. ಬಹುತೇಕ ಐಫೋನ್ ಬಳಕೆದಾರರಿಗೆ ಈ ಸ್ಮಾರ್ಟ್‍ಫೋನ್‍ ತುಂಬಾ ಇಷ್ಟವಾಗಿದೆ. ಅತ್ಯುತ್ತಮ ವೈಶಿಷ್ಟ್ಯಗಳಿಂದ ಗಮನ ಸೆಳೆದಿದ್ದ ಐಫೋನ್ 13 ಇಂದಿಗೂ ಮಾರುಕಟ್ಟೆಯಲ್ಲಿ ಬಿಸಿ ದೋಸೆಯಂತೆ ಸೇಲ್ ಆಗುತ್ತಿದೆ.

ಐಫೋನ್ 13 ಮಾದರಿಯು ನೀವು ಇಷ್ಟಪಡುವ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‍ಫೋನ್‍ ಕ್ಯಾಮೆರಾವು ತುಂಬಾ ಅದ್ಭುತವಾಗಿದೆ. ಇದು ನಿಮಗೆ ಅತ್ಯುತ್ತಮ ಅನುಭವವನ್ನು ನೀಡುತ್ತದೆ. ನೀವೂ ಐಫೋನ್ 13 ಖರೀದಿಸುವ ಯೋಚನೆಯಲ್ಲಿದ್ದರೆ ಇಲ್ಲಿದೆ ಸುವರ್ಣಾವಕಾಶ. ಈ ಸ್ಮಾರ್ಟ್‍ಫೋನ್‍ ಮೇಲೆ ಭರ್ಜರಿ ರಿಯಾಯಿತಿ ದೊರೆಯುತ್ತಿದೆ. ನೀವೂ ಊಹಿಸಲು ಸಾಧ್ಯವಾಗದ ಬೆಲೆಯಲ್ಲಿ ಈ ಫೋನ್ ಲಭ್ಯವಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 13 ಖರೀದಿಯ ಮೇಲೆ ಈ ಕೊಡುಗೆ ನೀಡಲಾಗುತ್ತಿದೆ. ಇದು ಕೆಲವೇ ದಿನ ಲಭ್ಯವಿರುವ ರಿಯಾಯಿತಿ. ಫ್ಲಿಪ್‌ಕಾರ್ಟ್‌ನಲ್ಲಿ iPhone 13ನ ಮೂಲ ಬೆಲೆ 69,900 ರೂ. ಆಗಿದೆ, ಆದರೆ ಈಗಾಗಲೇ ಇದರ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ಭರ್ಜರಿ ಡಿಸ್ಕೌಂಟ್ ಆಫರ್ ಬಳಿಕ ಐಫೋನ್ 13 ಸ್ಮಾರ್ಟ್‍ಪೋನ್‍ ನಿಮಗೆ ಕೇವಲ 65,999 ರೂ.ಗೆ ಸಿಗಲಿದೆ. 

APPLE iPhone 13 Starlightನ 128 GB ಸ್ಟೋರೇಜ್ ಮಾದರಿಯ ಮೇಲೆ ಈ ಡಿಸ್ಕೌಂಟ್ ನಿಮಗೆ ಸಿಗುತ್ತಿದೆ. ನೀವು ಈಗಲೇ ಇದನ್ನು ಖರೀದಿಸಿದರೆ, ಇದು ನಿಮಗೆ ಉತ್ತಮವಾದ ಡೀಲ್ ಅಂತಾನೇ ಹೇಳಬಹುದು. ಇದರ ಜೊತೆಗೆ ನೀವು ಹಳೆಯ ಐಫೋನ್ ಮಾದರಿ ಫೋನ್ ಹೊಂದಿದ್ದರೆ ಇನ್ನೂ ಹೆಚ್ಚಿನ ರಿಯಾಯಿತಿ ಪಡೆಯಬಹುದು.

APPLE iPhone 13 Starlightನ 128 GB ಮಾದರಿಯ ಮೇಲೆ ಗ್ರಾಹಕರಿಗೆ 22,500 ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ. ಇದು ವಾಸ್ತವವಾಗಿ ವಿನಿಮಯ ಬೋನಸ್ ಆಗಿದ್ದು, ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ Exchange ಮಾಡಿಕೊಂಡಾಗ ಲಭ್ಯವಾಗಲಿದೆ. ನಿಮ್ಮ ಹಳೆಯ ಐಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಅತ್ಯುತ್ತಮ ರಿಯಾಯಿತಿ ನಿಮಗೆ ದೊರೆಯಲಿದೆ. ಈ ಡಿಸ್ಕೌಂಟ್ ಪಡೆದ ಬಳಿಕ ನೀವು ಅತ್ಯಂತ ಕಡಿಮೆ ಬೆಲೆಗೆ ಐಫೋನ್ 13 ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಫ್ಲಿಪ್‌ಕಾರ್ಟ್‌ ವೆಬ್‍ಸೈಟ್‍ಗೆ ಭೇಟಿ ನೀಡಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ