ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಚೈತ್ರಾ ಕುಂದಾಪುರ ಮಾದರಿಯಲ್ಲಿ ಮತ್ತೊಂದು ಪ್ರಕರಣ ; ಅಮಿತ್ ಶಾ ಹೆಸರು ಹೇಳಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಿಂದ ಲಕ್ಷ ಲಕ್ಷ ಲೂಟಿ!

Twitter
Facebook
LinkedIn
WhatsApp
ಚೈತ್ರಾ ಕುಂದಾಪುರ ಮಾದರಿಯಲ್ಲಿ ಮತ್ತೊಂದು ಪ್ರಕರಣ ; ಅಮಿತ್ ಶಾ ಹೆಸರು ಹೇಳಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಿಂದ ಲಕ್ಷ ಲಕ್ಷ ಲೂಟಿ!

ಕೊಪ್ಪಳ: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರಿಂದ ಉದ್ಯಮಿ ಗೋವಿಂದ ಪೂಜಾರಿ ರೀತಿಯಲ್ಲೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಲಪಟಾಸಿರುವ ಪ್ರಕರಣವೊಂದು ಇದೀಗ ಕೊಪ್ಪಳ ಜಿಲ್ಲೆಯಲ್ಲೂ ಬೆಳಕಿಗೆ ಬಂದಿದೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೆವೆಂದು ಕನಕಗಿರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗೆ ವಂಚನೆ‌ ಮಾಡಲಾಗಿದೆ. ತಮ್ಮ ಪತ್ನಿಗೆ ಟಿಕೆಟ್ ಕೊಡಿಸುವಲ್ಲಿ ಭಾರಿ ಪ್ರಯತ್ನ ಮಾಡಿದ್ದ ಜಿ‌ ತಿಮ್ಮಾರೆಡ್ಡಿ ಗೌಡ ಗಿಲ್ಲೆಸೂಗುರ್ ಅವರು ಕನಕಗಿರಿ ಎಸ್ಸಿ ಮೀಸಲು ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಬಿಜೆಪಿ ಟಿಕೆಟ್ ಗಾಗಿ ಭಾರಿ ಪೈಪೋಟಿ ಮಾಡಿದ್ದ ತಿಮ್ಮಾರೆಡ್ಡಿ ಗೆ ಟಿಕೆಟ್ ಕೊಡಿಸುತ್ತೆವೆಂದು ಮೂವರು ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದೆಹಲಿಯ ತಂಡದಿಂದ ವಂಚನೆ

ಇಲ್ಲೂ ಚೈತ್ರಾ ಕುಂದಾಪುರ ಗ್ಯಾಂಗ್ ರೀತಿಯಲ್ಲೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ದೆಹಲಿ ಮೂಲದ ವಿಶಾಲ್ ನಾಗ್ ಮತ್ತು ಬೆಂಗಳೂರಿನ ಜೀತು, ಗೌರವ್ ಎಂಬುವರಿಂದ ವಂಚನೆ ನಡೆದಿದೆ. ಬರೊಬ್ಬರಿ 21 ಲಕ್ಷ ರೂಪಾಯಿ ಹಣ ಪಂಗನಾಮ ಹಾಕಲಾಗಿದೆ. ಮೂವರ ವಿರುದ್ದ ಬೆಂಗಳೂರಿನ ಅಶೋಕ ನಗರ ಠಾಣೆಯಲ್ಲಿ ತಿಮ್ಮಾರೆಡ್ಡಿ ಎಂಬವರು ದೂರು ದಾಖಲಿಸಿದ್ದಾರೆ

ತಮಗೆ ಅಮಿತ್ ಶಾ ಪರಿಚಯವೆಂದು ವಂಚನೆ ಮಾಡಲಾಗಿದೆ. ರಾಜ್ಯದಲ್ಲಿ ಸಮೀಕ್ಷೆ ಮಾಡುತ್ತಿದ್ದೇವೆ, ಅದರಲ್ಲಿ ನಿಮ್ಮ ಹೆಸರು ಮುಂಚೂಣಿಗೆ ತರುತ್ತೇವೆ ಎಂದು ವಂಚಕರು ಯಮಾರಿಸಿದ್ದಾರೆ. ತಾನು ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ಮುಖ್ಯಸ್ಥನೆಂದು ಪರಿಚಯಿಸಿಕೊಂಡಿದ್ದ ವಿಶಾಲ್ ನಾಗ್ ನನ್ನು ನಂಬಿ ವಿಶಾಲ್ ಬ್ಯಾಂಕ್ ಖಾತೆಗೆ 19 ಲಕ್ಷ ರೂಪಾಯಿ ನೀಡಿದ್ದಾರೆ. ಆಕಾಂಕ್ಷಿಯ ಪತಿ ತಿಮ್ಮಾರೆಡ್ಡಿ. ಕೊನೆಗೆ ಟಿಕೆಟ್ ಸಿಗದೇ ಹಣವೂ ವಾಪಸ್ ಬಾರದ ಹಿನ್ನಲೆ ದೂರು ನೀಡಿದ್ದಾರೆ.ನನ್ನ ರೀತಿಯೇ ಬಹಳ ಜನರಿಗೆ ಮೋಸ ಮಾಡಿದ್ದಾನೆನ್ನುತ್ತಿರುವ ತಿಮ್ಮಾರೆಡ್ಡಿ, ಬಿಜೆಪಿ ಟಿಕೆಟ್ ಗಾಗಿ ರಾಜ್ಯದಲ್ಲಿ ಹಲವರು ಕೋಟ್ಯಾಂತರ ಹಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ನನ್ನ ರೀತಿಯೇ ಬಹಳ ಜನರಿಗೆ ಮೋಸ ಮಾಡಿದ್ದಾನೆನ್ನುತ್ತಿರುವ ತಿಮ್ಮಾರೆಡ್ಡಿ, ಬಿಜೆಪಿ ಟಿಕೆಟ್ ಗಾಗಿ ರಾಜ್ಯದಲ್ಲಿ ಹಲವರು ಕೋಟ್ಯಾಂತರ ಹಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಹಿಂದೂಪರ ಭಾಷಣಗಾರ್ತಿ ಚೈತ್ರಾ ಕುಂದಾಪುರ ಮತ್ತು ಅವರ ಗ್ಯಾಂಗ್ ಬರೋಬ್ಬರಿ 5 ಕೋಟಿ ರೂಪಾಯಿ ವಂಚಿಸಿದ್ದರು. ಈ ಬಗ್ಗೆ ಗೋವಿಂದ ಬಾಬು ಪೂಜಾರಿ ಅವರು ಚೈತ್ರಾ ಸಹಿತ 8 ಮಂದಿಯ ವಿರುದ್ಧ ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಚೈತ್ರಾ ಕುಂದಾಪುರ, ಚಿಕ್ಕಮಗಳೂರಿನ ಗಗನ್ ಕಡೂರು, ಧನರಾಜ್ , ವಿಜಯನಗರದ ಅಭಿನವ ಹಾಲಾಶ್ರೀ ಸ್ವಾಮೀಜಿ, ಚಿಕ್ಕಮಗಳೂರಿನ ರಮೇಶ್, ಬೆಂಗಳೂರಿನ ನಾಯ್ಕ್ , ಉಡುಪಿಯ ಶ್ರೀಕಾಂತ್, ಬೈಂದೂರಿನ ಪ್ರಸಾದ್ ಎಂಬುವವರ ಮೇಲೆ ವಿರುದ್ಧ ದೂರು ದಾಖಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಚೈತ್ರಾ ಕುಂದಾಪುರ ಸಹಿತ 6 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ