- ರಾಜ್ಯ
- 3:25 ಅಪರಾಹ್ನ
- ಅಕ್ಟೋಬರ್ 26, 2023
ಆನೇಕಲ್ : ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ!

ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮುಗಳೂರು ಬ್ರಿಡ್ಜ್ ಸಮೀಪ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಮೃತದೇಹವು ಪತ್ತೆಯಾಗಿದೆ.
ಬ್ರಿಡ್ಜ್‌ನ ತಡೆಗೋಡೆ ಮೇಲೆ ರಕ್ತದ ಕಲೆಗಳು ಪತ್ತೆ ಆಗಿದ್ದು, ಯಾರೋ ದುಷ್ಕರ್ಮಿಗಳು ಕೊಲೆಗೈದು ಹೊಳೆಗೆ ಎಸೆದಿರುವ ಶಂಕೆಯು ವ್ಯಕ್ತವಾಗಿದೆ. ಜತೆಗೆ ಬ್ರಿಡ್ಜ್ ಮೇಲೆ ರೈಡಿಂಗ್ ಮಾಡುವಾಗ ಬಳಸುವ ಕನ್ನಡಕ ಪತ್ತೆ ಆಗಿದೆ. ಡಿವೈಡರ್‌ಗೆ ಡಿಕ್ಕಿಯಾಗಿ ಬೈಕ್ ಸಮೇತ ಹೊಳೆಗೆ ಬಿದ್ದಿರುವ ಸಾಧ್ಯತೆ ಇದೆ.
ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಸ್ನೇಹಿತನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ
ಕಾರವಾರ: ಇನ್‌ಸ್ಟಾಗ್ರಾಮ್‌ನಲ್ಲಿ (instagram) ಪರಿಚಯ ಬೆಳೆಸಿದ ಸ್ನೇಹಿತನ ಕಿರುಕುಳದಿಂದ (blackmail case) ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ (Self harm) ಘಟನೆ ಭಟ್ಕಳದಲ್ಲಿ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳದ ಹಾಡವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನೇತ್ರಾ ಗೋವಾಳಿ(24) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹಿತನಾಗಿದ್ದ ಗೋವರ್ಧನ್ ಮೊಗೇರ್ ಎಂಬಾತ ಈಕೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಕಳೆದೊಂದು ವರ್ಷದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಗೋವರ್ಧನ್ ಈಕೆಗೆ ಪರಿಚಯವಾಗಿದ್ದ. ನೇತ್ರಾಳೊಂದಿಗೆ ಆತ್ಮೀಯವಾಗಿ ಸ್ನೇಹ ಬೆಳೆಸಿದ್ದ ಈತ ಬಳಿಕ ಪ್ರೀತಿಸುವಂತೆ ಕಿರುಕುಳ ನೀಡಲು ಆರಂಭಿಸಿದ್ದ. ಪ್ರೀತಿಗೆ ಒಪ್ಪದಿದ್ದಾಗ, ತಾನು ಖರ್ಚು ಮಾಡಿದ್ದ ಹಣ ನೀಡುವಂತೆ ಪೀಡಿಸಲು ಆರಂಭಿಸಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ನಿನ್ನ ಅಶ್ಲೀಲ ಪೋಟೋಗಳನ್ನು ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ.
ಈ ಕಿರುಕುಳದಿಂದ ಬೇಸತ್ತ ನೇತ್ರಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳ ಸಾವಿಗೆ ಗೋವರ್ಧನ್ ಕಾರಣ ಎಂದು ನೇತ್ರಾ ತಂದೆಯಿಂದ ಗೋವರ್ಧನ್ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.