ವೇದಿಕೆಯಲ್ಲೇ ಅರ್ಜೆಂಟಿನಾದ ಅಧ್ಯಕ್ಷರಿಂದ ಯುವತಿಯೊಂದಿಗೆ ಅನಿರೀಕ್ಷಿತ ಚುಂಬನ ; ವಿಡಿಯೋ ವೈರಲ್
ಅರ್ಜೆಂಟೀನಾ: ಇತ್ತೀಚೆಗಷ್ಟೇ ಅರ್ಜೆಂಟೀನಾದ ಅಧ್ಯಕ್ಷರಾಗಿ (Argentine President) ಚುನಾಯಿತರಾಗಿರುವ ಜೇವಿಯರ್ ಮಿಲೀ(Javier Milei) ಅವರು ಶುಕ್ರವಾರ ತಮ್ಮ ಗೆಳತಿ ಫಾತಿಮಾ ಫ್ಲೋರೆಜ್ (Fatima Florez) ಅವರಿಗೆ ಸಂಗೀತ ಕಚೇರಿ (music concert) ವೇದಿಕೆಯ ಮೇಲೆ ಚುಂಬಿಸುವ ಮೂಲಕ ಸುದ್ದಿಯಾಗಿದ್ದಾರೆ(kisses to grilfriend). ಅಧ್ಯಕ್ಷರ ಈ ಅನಿರೀಕ್ಷತೆ ಚುಂಬನ ಕ್ರಿಯೆ ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ, ಅವರು ಚುಂಬಿಸುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ(Viral Video). ಅರ್ಜೆಂಟೀನಾದ ರಾಕ್ಸಿ ಥಿಯೇಟರ್‌ನಲ್ಲಿ ಸಂಗೀತ ಕಚೇರಿಯನ್ನು ಆಯೋಜಿಸಲಾಗಿತ್ತು.
Argentina’s new President is Trump on Steroids pic.twitter.com/ux08bw4BnA
— Gabbar (@GabbbarSingh) December 31, 2023
ಸ್ಥಳೀಯ ಸುದ್ದಿವಾಹಿನಿ ಕ್ಲಾರಿನ್ ಪ್ರಕಾರ ಶುಕ್ರವಾರ ರಾತ್ರಿ 9:40ಕ್ಕೆ ಸ್ಥಳಕ್ಕೆ ಆಗಮಿಸಿದ ಅಧ್ಯಕ್ಷ ಮಿಲೀ ಅವರು ತಮ್ಮ ವೈಯಕ್ತಿಕ ಹಣದಿಂದಲೇ ಸಂಗೀತ ಕಚೇರಿ ಟಿಕೆಟ್ ಖರೀದಿಸಿದ್ದರು. ಚುಂಬಿಸುವ ಮೊದಲು ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಮಿಲೀ ಅವರು, ಅರ್ಜೆಂಟೀನಾಕ್ಕೆ ಮುಂಬರುವ ಸವಾಲಿನ ಸಮಯವನ್ನು ಒಪ್ಪಿಕೊಂಡರು ಮತ್ತು ದೇಶವು ಪ್ರಗತಿಯ ಅಗತ್ಯವನ್ನು ಒತ್ತಿ ಹೇಳಿದರು.
ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆಯ ಮುಕ್ತಾಯದ ನಂತರ ಲೈವ್ ಟೆಲಿವಿಷನ್‌ನಲ್ಲಿ ಅವರು ಇದೇ ರೀತಿಯಲ್ಲಿ ಚುಂಬಿಸಿದ್ದರು. ಹಾಗಾಗಿ, ಸಾರ್ವಜನಿಕವಾಗಿ ಈ ದಂಪತಿ ಚುಂಬಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಅಧ್ಯಕ್ಷ ಮಿಲೀ ಅವರ ಸಹೋದರಿ ಕರೀನಾ ಅವರು ಭದ್ರತಾ ಸಿಬ್ಬಂದಿ ಜತೆಗೆ ಇದೇ ಸಂಗೀತ ಕಚೇರಿಯಲ್ಲಿ ಇದ್ದರು ಎನ್ನಲಾಗಿದೆ.
ಗಾಯಕಿ ಫ್ಲೋರೆಜ್ ತನ್ನ ಪತಿಯಿಂದ ಬೇರ್ಪಟ್ಟ ನಂತರ ಟಾಕ್ ಶೋ ವೇಳೆ, ಅರ್ಜೆಂಟೀನಾ ಅಧ್ಯಕ್ಷರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಆ ಬಳಿಕ ಇಬ್ಬರ ನಡುವಿನ ಸಂಬಂಧ ಗಾಢವಾಗಿ ಬೆಳೆಯಿತು ಎನ್ನಲಾಗಿದೆ. ಸಂಗೀತ ಕಚೇರಿಯಲ್ಲಿ ಅಧ್ಯಕ್ಷರ ಉಪಸ್ಥಿತಿಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ ಫ್ಲೋರೇಜ್ ಅವರೊಂದಿಗೆ ಹೊರಟ ಹೋದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇವರಿಬ್ಬರ ಆರಂಭಿಕ ಸಂವಹನವು ಇನ್‌ಸ್ಟಾಗ್ರಾಮ್ ಮೂಲಕ ಶುರುವಾಯಿತು. ಆ ಬಳಿಕ ನಿಧನವಾಗಿ ಸಂಬಂಧ ಬೆಳೆಯಿತು. ಸಂದರ್ಶನವೊಂದರಲ್ಲಿ ಫ್ಲೋರೆಜ್ ಅವರು, ಅಧ್ಯಕ್ಷರ ಒಂಟಿತನ ನಿವಾರಣೆಯಲ್ಲಿ ತಮ್ಮ ಪಾತ್ರ ಮಹತ್ವದ್ದಾಗಿದೆ ಎಂದು ತಮಾಷೆಯಾಗಿ ಹೇಳಿದ್ದರು. ಅಕ್ಟೋಬರ್‌ನಲ್ಲ ಈ ಜೋಡಿ ಮತ್ತೊಂದು ಟಾಕ್ ಶೋನಲ್ಲಿ ಜಂಟಿಯಾಗಿ ಕಾಣಿಸಿಕೊಂಡಿತು ಮತ್ತು ತಾವು ಪರಸ್ಪರ ಪ್ರೀತಿಸುತ್ತಿರುವುದಾಗಿ ಬಹಿರಂಗಪಡಿಸಿದ್ದರು.