ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಾಲ್ಯದಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಭಾರತದ ವ್ಯಕ್ತಿ ; ಇಂದು ದುಬೈಯ ಬುರ್ಜ್ ಖಲೀಫಾದ 22 ಅಪಾರ್ಟ್ಮೆಂಟ್ಗಳ ಮಾಲೀಕ!

Twitter
Facebook
LinkedIn
WhatsApp
ಬಾಲ್ಯದಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಭಾರತದ ವ್ಯಕ್ತಿ ; ಇಂದು ದುಬೈಯ ಬುರ್ಜ್ ಖಲೀಫಾದ 22 ಅಪಾರ್ಟ್ಮೆಂಟ್ಗಳ ಮಾಲೀಕ!

ದುಬೈನ ಬುರ್ಜ್‌ ಖಲೀಫಾ ಕಟ್ಟಡದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಅಷ್ಟು ಫೇಮಸ್‌ ಆ ಕಟ್ಟಡ. ಯಾಕೆ ಅಂದ್ರೆ ಇದು ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂದು ದಾಖಲೆ ಬರೆದಿದೆ. ಈ ಬುರ್ಜ್ ಖಲೀಫಾ ದುಬೈನ ಐಕಾನಿಕ್ (Iconic) ಲ್ಯಾಂಡ್‌ಸ್ಕೇಪ್‌ನ ಕಿರೀಟ ರತ್ನ ಅಂತಲೂ ಸಹ ಹೆಸರು ಪಡೆದಿದೆ. ಈ ಗಗನಚುಂಬಿ ಎತ್ತರದ ಕಟ್ಟಡದಲ್ಲಿ ಒಂದು ಅರ್ಪಾಟ್‌ಮೆಂಟ್‌ ಹೊಂದುವುದು ಒಂದು ಹೆಗ್ಗಳಿಕೆಯ ಸಂಕೇತ. ಬುರ್ಜ್ ಖಲೀಫಾದಲ್ಲಿನ (Burj Khalifa) ಅಪಾರ್ಟ್‌ಮೆಂಟ್‌ಗಳು (Apartment) ಬಹಳ ದುಬಾರಿ. ಅದು ವಿಶ್ವದ ಅತ್ಯಂತ ದೊಡ್ಡ ಕಟ್ಟಡ ಆಗಿರೋದ್ರಿಂದ ಅಲ್ಲಿ ಅಪಾರ್ಟ್‌ಮೆಂಟ್‌ ಹೊಂದುವುದು ಅಂದ್ರೆ ಸಾಮಾನ್ಯ ವಿಷಯವಂತ್ರೂ ಅಲ್ವೇ ಅಲ್ಲ. ಆ ದುಬಾರಿ ಕಟ್ಟಡದಲ್ಲಿ ನಮ್ಮ ಭಾರತೀಯ ಅತ್ಯಂತ ಶ್ರೀಮಂತ ವ್ಯಕ್ತಿಗಳು ಅರ್ಪಾಟ್‌ಮೆಂಟ್‌ಗಳನ್ನು ಖರೀದಿ ಮಾಡುತ್ತಾರೆ.

ಇನ್ನೊಂದು ಆಶ್ಚರ್ಯಕರ ಸಂಗತಿಯೆಂದ್ರೆ ವಾಸ್ತವವಾಗಿ, ಬುರ್ಜ್ ಖಲೀಫಾ ನೀಡುವ 900 ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 150 ಅಪಾರ್ಟ್ಮೆಂಟ್‌ಗಳನ್ನು ಭಾರತೀಯರು ಹೊಂದಿದ್ದಾರೆ. ಇದಲ್ಲದೇ ಇನ್ನೊಂದು ಇಂಟ್ರೆಸ್ಟಿಂಗ್‌ ವಿಷ್ಯ ಏನೆಂದ್ರೆ ಭಾರತೀಯರೊಬ್ಬರು ಬುರ್ಜ್ ಖಲೀಫಾದ ಅತಿದೊಡ್ಡ ಆಸ್ತಿ ಮಾಲೀಕರಾಗಿದ್ದಾರೆ ಎಂದು ವರದಿಯಾಗಿದೆ.

ಬುರ್ಜ್‌ ಖಲೀಫಾದ ಅತಿ ದೊಡ್ಡ ಆಸ್ತಿ ಮಾಲೀಕರು ಯಾರು? ಅವರ ಹಿನ್ನೆಲೆ ಏನು, ಎತ್ತ? ಅಂತ ತಿಳಿಯೋಣ

ಬುರ್ಜ್ ಖಲೀಫಾದ ಅತಿದೊಡ್ಡ ಆಸ್ತಿ ಮಾಲೀಕರಾಗಿರುವ ಅವರು ಹಿಂದೆ ಒಬ್ಬ ಸಾಮಾನ್ಯ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದ. ಕೇವಲ ಒಬ್ಬ ಮೆಕ್ಯಾನಿಕ್‌ ಆಗಿದ್ದ ವ್ಯಕ್ತಿ ಒಂದು ವಿಶ್ವದ ಅತಿ ಎತ್ತರದ ಕಟ್ಟಡದಲ್ಲಿ ಹೆಚ್ಚು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿ ತನ್ನ ಜೀವನವನ್ನು ಹೇಗೆ ಮೇಲಸ್ತರಕ್ಕೆ ತೆಗೆದುಕೊಂಡು ಹೋದ ವ್ಯಕ್ತಿಯೇ ಇಂದು ನಮ್ಮ ಲೇಖನದ ಹೀರೋ. ಜಾರ್ಜ್ ವಿ ನೆರೆಯಂಪರಂಬಿಲ್ ಅವರು ಈ ಸ್ಪೂರ್ತಿದಾಯಕ ಕಥೆಯ ನಾಯಕ. ನಾವಿಂದು ಅವರ ಬಗ್ಗೆ , ಅವರ ಸಾಧನೆ ಬಗ್ಗೆ ಈ ಲೇಖನದಲ್ಲಿ ಅರಿಯೋಣ ಬನ್ನಿ.

ನಮ್ಮ ಕಥೆಯ ನಾಯಕ ಜಾರ್ಜ್ ಅವರು ಜನಿಸಿದ್ದು ಕೇರಳದಲ್ಲಿ. ಕೇರಳದಲ್ಲಿ ಅವರ ಕುಟುಂಬ ಕಡುಬಡತನ ಕಟುಂಬವಾಗಿತ್ತು. ಶಾಲೆಗೂ ಹೋಗಿಲ್ಲ ಇವರು. ಚಿಕ್ಕ ವಯಸ್ಸಿನಲ್ಲಿ ಜಾರ್ಜ್‌ ಕೆಲಸ ಮಾಡಲು ಆರಂಭಿಸಿದರು. ಇವರು ತಮ್ಮ 11 ನೇ ವಯಸ್ಸಿನಲ್ಲಿ, ತಮ್ಮ ತಂದೆಗೆ ನಗದು ಬೆಳೆಗಳನ್ನು ಸಾಗಿಸಲು ಮತ್ತು ವ್ಯಾಪಾರ ಮಾಡಲು ಸಹಾಯ ಮಾಡುತ್ತಿದ್ದರು. ಈ ನಗದು ಬೇಳೆ ಅಂದ್ರೆ ಹೆಚ್ಚು ಇಳುವರಿ ಮತ್ತು ಲಾಭ ಗಳಿಸುವ ಬೆಳೆ ಎಂದು ಅರ್ಥ. ಉದಾಹರಣೆಗೆ ಅಕ್ಕಿ, ಕಬ್ಬು, ಹತ್ತಿ, ಹೀಗೆ

ಸಾಮಾನ್ಯ ಮೆಕ್ಯಾನಿಕ್‌ ಇಂದು ಕೋಟಿ ಕೋಟಿ ದುಡಿಯುವ ಕಂಪನಿಯ ಒಡೆಯ

ಅವರ ತಂದೆಗೆ ಕೃಷಿಯಲ್ಲಿ ಸಹಾಯ ಮಾಡುವುದಲ್ಲದೇ, ಜಾರ್ಜ್ ಮೆಕ್ಯಾನಿಕ್ ಆಗಿಯೂ ಕೆಲಸ ಮಾಡಿದರು. 1976 ರಲ್ಲಿ ಅವರು ಮರುಭೂಮಿಯನ್ನೆ ಹೆಚ್ಚು ಹೊಂದಿರುವ ಶಾರ್ಜಾ ನಗರಕ್ಕೆ ಆಗಮಿಸಿದಾಗ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಬಂದಿತು. ಈ ಮರುಭೂಮಿಯ ಪ್ರದೇಶದಲ್ಲಿ ಹವಾನಿಯಂತ್ರಣ ವಲಯಕ್ಕೆ ಬಹಳ ಬೆಲೆಯಿದೆ ಎಂದು ಅವರು ಅರಿತುಕೊಂಡರು.

ಆಗ ಅವರು ಕ್ರಮೇಣ ಆ ವ್ಯಾಪಾರವನ್ನೆ ಮಾಡಲು ಶುರು ಮಾಡಿದರು. ಆ ಚಿಕ್ಕ ವ್ಯಾಪಾರ ಕಲ್ಪನೆಯನ್ನು ಇಂದು GEO ಗ್ರೂಪ್ ಆಫ್ ಕಂಪನೀಸ್ ಎಂಬ ಬೃಹತ್ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿದ್ದಾರೆ. ಗಲ್ಫ್ ಪ್ರದೇಶದಲ್ಲಿನ ಅತ್ಯಂತ ಪ್ರಮುಖ ಭಾರತೀಯ ವ್ಯಾಪಾರ ಉದ್ಯಮಿಗಳಲ್ಲಿ ಒಬ್ಬರಾಗಿ ಬೆಳೆದು ಹೆಮ್ಮರವಾಗಿ ನಿಂತಿದ್ದಾರೆ.

ಆದ್ದರಿಂದ ಬುರ್ಜ್ ಖಲೀಫಾದ ಬೆಲೆಬಾಳುವ ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಲು ನೆರೆಯಪರಂಬಿಲ್ ಅವರಿಗೆ ಸಾಧ್ಯವಾಗಿದೆ. ಇಲ್ಲಿಯೇ ಯಾಕೆ ಅವರು ಅಪಾರ್ಟ್‌ಮೆಂಟ್‌ ಖರೀದಿ ಮಾಡಿದ್ರೂ ಎನ್ನುವುದಕ್ಕೂ ಒಂದು ಇಂಟ್ರೆಸ್ಟಿಂಗ್‌ ಕಥೆ ಅವರ ಜೀವನದಲ್ಲಿ ಇದೆ.

ಅದು ಏನೆಂದ್ರೆ ಅಲ್ಲಿ ಸಂಬಂಧಿಯೊಬ್ಬರು ಬುರ್ಜ್ ಖಲೀಫಾವನ್ನು ನೀವು ಪ್ರವೇಶಿಸಲು ಕೂಡ ಸಾಧ್ಯವಾಗುವುದಿಲ್ಲ ಎಂದು ಗೇಲಿ ಮಾಡಿದ್ದರಂತೆ ಆಗಿನಿಂದ ಅಲ್ಲಿ ನಾನು ಒಂದು ಅಪಾರ್ಟ್‌ಮೆಂಟ್‌ ತಗೊಬೇಕು ಅಂತ ಬಹಳ ಕಷ್ಟ ಪಟ್ಟು 2010 ರಲ್ಲಿ ಜಾರ್ಜ್ ಅವರು ಬುರ್ಜ್‌ ಕಟ್ಟಡದಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದರು.

ಬಾಡಿಗೆ ಪಡೆದು ಕೆಲವೇ ವರ್ಷಗಳಲ್ಲಿ ಅವರು ಬುರ್ಜ್ ಖಲೀಫಾದಲ್ಲಿ ಒಟ್ಟು 22 ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಇದಪ್ಪ ಸಾಧನೆ ಅಂದ್ರೆ ಅಂತ ತೋರಿಸಿಕೊಟ್ಟರು. ಜಾರ್ಜ್ ಅವರ ಅಪಾರ್ಟ್‌ಮೆಂಟ್‌ಗಳ ಗೋಡೆಗಳು, ಸೀಲಿಂಗ್‌ಗಳು ಮತ್ತು ಮಹಡಿಗಳನ್ನು ಚಿನ್ನದಿಂದ ಅಲಂಕಾರ ಮಾಡಿದೆ. ಇವರು ತಮ್ಮ ಸಂಪತ್ತನ್ನು ಎಂದಿಗೂ ಮುಚ್ಚಿಡುವ ಕೆಲಸ ಮಾಡಿಲ್ಲ ಎಂದು ಇದರಲ್ಲಿಯೇ ಕಾಣಿಸುತ್ತದೆ ಎಂದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಲು ಜಾರ್ಜ್‌ ಬಹಳ ಉತ್ಸುಕರಾಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ