ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸಿಮೆಂಟ್ ಮತ್ತು ಇಟ್ಟಿಗೆಗಳಿಲ್ಲದೆ ಸಿವಿಲ್ ಎಂಜಿನಿಯರ್ ದಂಪತಿಗಳು ನಿರ್ಮಿಸಿದ ಪರಿಸರ ಸ್ನೇಹಿ ಮನೆ ; ಈ ಮನೆಯ ವಿಶೇಷತೆ ಏನು?

Twitter
Facebook
LinkedIn
WhatsApp
ಸಿಮೆಂಟ್ ಮತ್ತು ಇಟ್ಟಿಗೆಗಳಿಲ್ಲದೆ ಸಿವಿಲ್ ಎಂಜಿನಿಯರ್ ದಂಪತಿಗಳು ನಿರ್ಮಿಸಿದ ಪರಿಸರ ಸ್ನೇಹಿ ಮನೆ ; ಈ ಮನೆಯ ವಿಶೇಷತೆ ಏನು?

ಡುಂಗರ್‌ಪುರ ನಗರದಲ್ಲಿ ವಾಸಿಸುತ್ತಿರುವ ಸಿವಿಲ್ ಎಂಜಿನಿಯರ್ ಆಶಿಶ್ ಪಾಂಡಾ ಮತ್ತು ಅವರ ಪತ್ನಿ ಮಧುಲಿಕಾ ಈ ವಿಶೇಷ ಮನೆಯನ್ನು ನಿರ್ಮಿಸಿದ್ದಾರೆ. ಮಧುಲಿಕಾ ವೃತ್ತಿಯಲ್ಲಿ ಸಾಫ್ಟ್‌ವೇರ್ ಡೆವಲಪರ್. ಇದರೊಂದಿಗೆ ಸಮಾಜ ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಯ ಆಸೆಯು ತನ್ನ ಕನಸಿನ ಮನೆಯನ್ನು ಕಟ್ಟಬೇಕು, ಇದರಿಂದ ತಾವೂ ತನ್ನ ಕುಟುಂಬದೊಂದಿಗೆ ಸಂತೋಷದಿಂದ ಬದುಕಬಹುದು ಎಂಬುದು ಕನಸಾಗಿರುತ್ತದೆ. ಇದೇ ವೇಳೆ ರಾಜಸ್ಥಾನದ ಡುಂಗರಪುರದ ಕುಟುಂಬವೊಂದು ಪರಿಸರದ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ವಿಶಿಷ್ಟವಾದ ಮನೆಯೊಂದನ್ನು ನಿರ್ಮಿಸಿದೆ. ಈ ಮನೆ ನಿರ್ಮಾಣಕ್ಕೆ ಕಾಂಕ್ರೀಟ್ ಮತ್ತು ಸಿಮೆಂಟ್ ಬಳಸಿಲ್ಲ ಆದರೆ ಇದು ಪರಿಸರ ಸ್ನೇಹಿಯಾಗಿದೆ.ಬುಡಕಟ್ಟು ಪ್ರದೇಶದಲ್ಲಿ ಇಂತಹ ಮನೆ ಹಿಂದೆ ಅಪರೂಪಕ್ಕೆ ಕಾಣಸಿಗುತ್ತಿತ್ತು.

WhatsApp Image 2023 08 31 at 7.13.21 AM

ಡುಂಗರ್‌ಪುರ ನಗರದಲ್ಲಿ ವಾಸಿಸುತ್ತಿರುವ ಸಿವಿಲ್ ಎಂಜಿನಿಯರ್ ಆಶಿಶ್ ಪಾಂಡಾ ಮತ್ತು ಅವರ ಪತ್ನಿ ಮಧುಲಿಕಾ ಈ ವಿಶೇಷ ಮನೆಯನ್ನು ನಿರ್ಮಿಸಿದ್ದಾರೆ. ಮಧುಲಿಕಾ ವೃತ್ತಿಯಲ್ಲಿ ಸಾಫ್ಟ್‌ವೇರ್ ಡೆವಲಪರ್. ಇದರೊಂದಿಗೆ ಸಮಾಜ ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.  ಮನೆಯ ಅಡಿಪಾಯ, ಗೋಡೆ, ಮಹಡಿ ಎಲ್ಲವೂ ಪರಿಸರ ಸ್ನೇಹಿಯಾಗಿದೆ.

ಒರಿಸ್ಸಾಗೆ ಸೇರಿದ 40 ವರ್ಷದ ಆಶಿಶ್, ತನ್ನ ಶಾಲಾ ಶಿಕ್ಷಣದವರೆಗೂ ಮದ್ರಾಸ್‌ನಲ್ಲಿ ಕಳೆದಿದ್ದರು. ಇದಾದ ನಂತರ ಬಿಟ್ಸ್ ಪಿಲಾನಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದರು. ನಂತರ ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ವಿಜಯವಾಡದ ಪತ್ನಿ 41 ವರ್ಷದ ಮಧುಲಿಕಾ ಕೂಡ ಬಿಟ್ಸ್ ಪಿಲಾನಿಯಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ. ಅದರ ನಂತರ ಆಕೆ ತನ್ನ ಸ್ನಾತಕೋತ್ತರ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿ, ಒಂದು ವರ್ಷ ಅಮೆರಿಕದಲ್ಲಿಯೂ ಕೆಲಸ ಮಾಡಿದ್ದಾರೆ.

WhatsApp Image 2023 08 31 at 7.32.17 AM

ಆಶಿಶ್ ಮತ್ತು ನಾನು ಬೇರೆ ಬೇರೆ ಸ್ಥಳಗಳಲ್ಲಿ ವಾಸವಾಗಿದ್ದರೂ, ನಮ್ಮ ಕಾಲೇಜಿನ ಸಮಯದಿಂದಲೂ ನಾವು ರಾಜಸ್ಥಾನಕ್ಕೆ ಹೋಗಿ ಅಲ್ಲೇ ನೆಲಸಬೇಕೆಂದು ನಿರ್ಧರಿಸಿದ್ದೆವು. ಕಾಲೇಜು ದಿನಗಳಿಂದಲೇ ನಾನು ಸಾಮಾಜಿಕ ಸಮಸ್ಯೆಗಳತ್ತ ಮತ್ತು ಆಶಿಶ್ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯತ್ತ ಒಲವು ಹೊಂದಿದ್ದಾಗಿ ತಿಳಿಸಿದ್ದಾರೆ.

ದಂಪತಿ ದೇಶ ಮತ್ತು ವಿದೇಶದಲ್ಲಿ ಅನೇಕ ಸ್ಥಳಗಳಲ್ಲಿ ವಾಸಿಸಿದ ನಂತರ 2008 ರಲ್ಲಿ ರಾಜಸ್ಥಾನಕ್ಕೆ ಬಂದರು. ನಾವಿಬ್ಬರು ಯಾವುದೇ ದೊಡ್ಡ ಮೆಟ್ರೋ ಸಿಟಿಯಲ್ಲಿ ವಾಸಿಸುವುದು ಬೇಡ ಎಂದು ಮೊದಲೇ ನಿರ್ಧರಿಸಿದ್ದೆವು. ಯಾವಾಗಲೂ ಪ್ರಕೃತಿಗೆ ಹತ್ತಿರವಾಗಬೇಕೆಂದು ಬಯಸುತ್ತೇವೆ. ಇದಕ್ಕಾಗಿ, ನಾನು ಕೆಲವು ತಿಂಗಳುಗಳ ಕಾಲ ವಿವಿಧ ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿದೆವು. ನಮ್ಮ ಮಗಳು 2010 ರಲ್ಲಿ ಡುಂಗರ್‌ಪುರದಲ್ಲಿ ಜನಿಸಿದ್ದಳು, ಹಾಗಾಗಿ ನಾವು ಇಲ್ಲಿಯೇ ನೆಲೆಸೋಣ ಎಂದು ಪತ್ನಿ ಆಸೆಪಟ್ಟಳು.

ನಂತರ ನೈಸರ್ಗಿಕವಾಗಿ ಮನೆ ಕಟ್ಟಲು ಬಯಸಿದೆವು. ಮನೆ ನಿರ್ಮಿಸಲು ಸ್ಥಳೀಯ ವಸ್ತುಗಳಾದ ಬಲವಾಡ ಕಲ್ಲು ಮತ್ತು ಚಪ್ಪಡಿಗಳು, ಸುಣ್ಣದ ಕಲ್ಲು ಮತ್ತು ಸುಣ್ಣವನ್ನು ಬಳಸಿ ನಿರ್ಮಾಣ ಮಾಡಿದೆವು. ಮನೆಯ ಎಲ್ಲಾ ಗೋಡೆಗಳು ಕಲ್ಲಿನಿಂದ ಮಾಡಲ್ಪಟ್ಟಿದೆ. ಕಲ್ಲು, ಪ್ಲಾಸ್ಟರ್ ಮತ್ತು ಛಾವಣಿಯ ಪ್ಲಾಸ್ಟಿಂಗ್​ಗೆ ಸುಣ್ಣವನ್ನು ಬಳಸಲಾಗಿದೆ. ಹಾಗಾಗಿ ಈ ಮನೆಯಲ್ಲಿ ಬೇಸಿಗೆಯಲ್ಲೂ ಎಸಿ ಮತ್ತು ಫ್ಯಾನ್ ಅಗತ್ಯವಿಲ್ಲ ಎಂದು ಆಶಿಶ್ ತಿಳಿಸಿದ್ದಾರೆ.

ಇದಲ್ಲದೇ ಈ ಮನೆಯ ಮೇಲ್ಛಾವಣಿ, ಬಾಲ್ಕನಿ, ಮೆಟ್ಟಿಲುಗಳ ನಿರ್ಮಾಣಕ್ಕೆ ಮರದ ಪಟ್ಟಿಗಳನ್ನು ಬಳಸಲಾಗಿದೆ. ತಮಾಷೆಯೆಂದರೆ ಈ ಇಡೀ ಮನೆಯಲ್ಲಿ ಎಲ್ಲಿಯೂ ಸಿಮೆಂಟ್ ಬಳಸಿಲ್ಲ. ರಾಜಸ್ಥಾನದಲ್ಲಿ ನಿರ್ಮಿಸಲಾದ ಎಲ್ಲಾ ಹಳೆಯ ಅರಮನೆಗಳು, ಬಂಗಲೆ ಮತ್ತು ಮನೆಗಳನ್ನು ಕಲ್ಲು, ಸುಣ್ಣ ಅಥವಾ ಮಣ್ಣು ಬಳಸಿ ನಿರ್ಮಿಸಲಾಗಿದೆ. ಯಾವುದೇ ಮೇಲ್ಛಾವಣಿಯಲ್ಲಿ ಸಿಮೆಂಟ್ ಮತ್ತು ಸ್ಟೀಲ್ ಬಳಸಲಾಗಿಲ್ಲ. ಆದರೂ ಈ ಕಟ್ಟಡಗಳು ಹಲವು ವರ್ಷಗಳಿಂದ ಯಥಾಸ್ಥಿತಿಯಲ್ಲಿವೆ ಎಂದು ಆಶಿಶ್ ಮತ್ತು ಮಧುಲಿಕಾ ಹೇಳುತ್ತಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist