ಲಾರಿ ಮತ್ತು ಜೀಪ್ ನಡುವೆ ಅಪಘಾತ ;ಸ್ಥಳದಲ್ಲೇ ನಾಲ್ವರ ದುರ್ಮರಣ..!
ಕಲಬುರಗಿ: ಅಫಜಲಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಲಾರಿ ಹಾಗೂ ಜೀಪ್ (Lorry- Jeep Accident Kalaburagi) ನಡುವೆ ನಡೆದ ಅಪಘಾತದಲ್ಲಿ ಸಂತೋಷ್ (40), ಶಂಕರ್ (55), ಸಿದ್ದಮ್ಮ (50), ಹುಚ್ಚಪ್ಪ (05) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಪೂಜಾ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮೃತರೆಲ್ಲರೂ ಅಫಜಲಪುರ ಮಾಡ್ಯಾಳ ಗ್ರಾಮದ ನಿವಾಸಿಗಳಾಗಿದ್ದಾರೆ. ಇವರು ಅಫಜಲಪುರ ಕಡೆಯಿಂದ ಮಲ್ಲಾಬಾದ್ ಕಡೆ ಜೀಪ್‍ನಲ್ಲಿ ಹೊರಟಿದ್ದರು. ಇತ್ತ ಕಲಬುರಗಿ ಕಡೆಯಿದ ಹೊರಟಿದ್ದ ಲಾರಿಗೆ ಈ ಜೀಪ್ ಡಿಕ್ಕಿ ಹೊಡೆದಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
24 ಲಕ್ಷದ ಬೈಕಿನ ಸ್ಪೀಡ್ ತೋರಿಸಲು ಬಂದವನು ದುರ್ಮರಣ
ಬೆಂಗಳೂರು: 24 ಲಕ್ಷ ರೂ. ಮೌಲ್ಯದ ಬೈಕ್ ಕಾರಿಗೆ ಡಿಕ್ಕಿ ಹೊಡೆದ (Bike Accident) ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜಯನಗರದ ಅಶೋಕ ಪಿಲ್ಲರ್ ಬಳಿ ತಡರಾತ್ರಿ ನಡೆದಿದೆ.
ಜಯನಗರದ (Jayanagara) ಅಶೋಕ ಪಿಲ್ಲರ್ ಬಳಿ ಘಟನೆ ನಡೆದಿದ್ದು, ಬೈಕ್ ಸವಾರ ಶೇಕ್ ನಾಸಿರ್ (32) ಸಾವನ್ನಪ್ಪಿದ್ದಾರೆ. ಹಿಂಬದಿ ಬೈಕ್ ಸವಾರ ಸೈಯದ್ ಮುದಾಸಿರ್ ಗಾಯಗೊಂಡಿದ್ದಾರೆ.
ಬೈಕ್ ಸವಾರರು ದುಬಾರಿ ಬೆಲೆಯ ಬಿಎಂಡಬ್ಲ್ಯೂ ಆರ್‌ಆರ್ 1000 ಸಿಸಿ (BMW RR 1000CC Bike) ಚಲಾಯಿಸುತ್ತಿದ್ದರು. ವ್ಹೀಲಿಂಗ್ ಮಾಡುತ್ತಾ ಅತಿ ವೇಗವಾಗಿ ಬಂದು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಶೇಕ್ ನಾಸಿರ್ ಎಂಬ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ಬೈಕ್ ಸವಾರರು ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಕುತ್ತಿಗೆಗೆ ತೀವ್ರ ಏಟು ಬಿದ್ದ ಕಾರಣ ಸ್ಥಳದಲ್ಲೇ ನಾಸಿರ್ ಸಾವಿಗೀಡಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಸವಾರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಕಾರಿನ ಮುಂಭಾಗ ಹಾನಿಗೀಡಾಗಿದ್ದು, ಗಾಜು ಒಡೆದಿದೆ. ಕಾರಿನಲ್ಲಿದ್ದವರಿಗೆ ಗಾಯವಾಗಿಲ್ಲ.