ಶನಿವಾರ, ಮೇ 4, 2024
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!-ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?-ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!-ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!-ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!-ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Amazon: ಆಹಾರ ವಿತರಣೆ ಉದ್ಯಮವನ್ನೂ ಸ್ಥಗಿತಗೊಳಿಸಲಿದೆ ಅಮೆಜಾನ್

Twitter
Facebook
LinkedIn
WhatsApp
Amazon: ಆಹಾರ ವಿತರಣೆ ಉದ್ಯಮವನ್ನೂ ಸ್ಥಗಿತಗೊಳಿಸಲಿದೆ ಅಮೆಜಾನ್

ನವದೆಹಲಿ: ಎಜುಟೆಕ್ ತಾಣ ಅಮೆಜಾನ್​ ಅಕಾಡೆಮಿಯನ್ನು (Amazon Academy) ಹಂತ ಹಂತವಾಗಿ ಮುಚ್ಚುವುದಾಗಿ ತಿಳಿಸಿದ ಮರುದಿನವೇ,ಆಹಾರ ವಿತರಣೆ (Food Delivery) ಉದ್ಯಮವನ್ನೂ ಸ್ಥಗಿತಗೊಳಿಸುವುದಾಗಿ ಅಮೆಜಾನ್ ಇಂಡಿಯಾ (Amazon India) ತಿಳಿಸಿದೆ ಎಂದು ವರದಿಯಾಗಿದೆ. ಆಹಾರ ವಿತರಣೆ ಸೇವೆಯನ್ನು ಡಿಸೆಂಬರ್ 29ರಿಂದ ನಿಲ್ಲಿಸುವುದಾಗಿ ಪಾಲುದಾರರಿಗೆ ಅಮೆಜಾನ್ ತಿಳಿಸಿದೆ ಎಂದು ‘ಮನಿ ಕಂಟ್ರೋಲ್’ ವರದಿ ಮಾಡಿದೆ. 2020ರ ಮೇ ತಿಂಗಳಲ್ಲಿ, ಕೋವಿಡ್ ಲಾಕ್​​ಡೌನ್ ಸಂದರ್ಭದಲ್ಲಿ ಅಮೆಜಾನ್ ಇಂಡಿಯಾ ಆಹಾರ ವಿತರಣೆ ಉದ್ಯಮವನ್ನು ಆರಂಭಿಸಿತ್ತು.

ಹೀಗಾಗಿ ಡಿಸೆಂಬರ್ 29ರ ನಂತರ ‘ಅಮೆಜಾನ್ ಫುಡ್​’ ಮೂಲಕ ಗ್ರಾಹಕರು ಆಹಾರವನ್ನು ತರಿಸಿಕೊಳ್ಳಲು ಸಾಧ್ಯವಾಗದು. ಅಲ್ಲಿಯವರೆಗೂ ನೀವು ಆರ್ಡರ್​ಗಳನ್ನು ಸ್ವೀಕರಿಸಬಹುದು. ಕೊನೆಯ ದಿನಾಂಕದ ವರೆಗೂ ಗ್ರಾಹಕರಿಗೆ ಸೇವೆ ನೀಡುತ್ತೇವೆ ಎಂದು ರೆಸ್ಟೋರೆಂಟ್ ಮಾಲೀಕರಿಗೆ ಅಮೆಜಾನ್ ಫುಡ್ ಕಳುಹಿಸಿದ ಇ-ಮೇಲ್ ಸಂದೇಶದಿಂದ ತಿಳಿದುಬಂದಿದೆ ಎಂದು ವರದಿ ಉಲ್ಲೇಖಿಸಿದೆ.

ಬಾಕಿ ಇರುವ ಎಲ್ಲಾ ಪಾವತಿಗಳು ಮತ್ತು ಇತರ ಒಪ್ಪಂದದ ಬಾಧ್ಯತೆಗಳನ್ನು ಪೂರೈಸುವುದಾಗಿ ರೆಸ್ಟೋರೆಂಟ್ ಪಾಲುದಾರರಿಗೆ ಅಮೆಜಾನ್ ಭರವಸೆ ನೀಡಿದೆ ಎಂದೂ ವರದಿ ತಿಳಿಸಿದೆ.

ಆರ್ಥಿಕ ಸಂಕಷ್ಟದ ಕಾರಣ ಎಜುಟೆಕ್ ತಾಣ ಅಮೆಜಾನ್​ ಅಕಾಡೆಮಿಯನ್ನು ಹಂತ ಹಂತವಾಗಿ ಮುಚ್ಚಲಾಗುವುದು ಎಂದು ಅಮೆಜಾನ್ ಹೇಳಿರುವುದಾಗಿ ಶುಕ್ರವಾರ ವರದಿಯಾಗಿತ್ತು. ಇದರೊಂದಿಗೆ ಭಾರತದಲ್ಲಿ ಕಾರ್ಯಾರಂಭ ಮಾಡಿದ ಎರಡು ವರ್ಷಗಳ ಒಳಗಾಗಿ ತಾಣ ಸ್ಥಗಿತಗೊಂಡಂತಾಗಲಿದೆ. ಅಮೆಜಾನ್ ಅಕಾಡೆಮಿಯನ್ನು ಕೂಡ ಕೋವಿಡ್ ಎರಡನೇ ಲಾಕ್​ಡೌನ್ ಸಂದರ್ಭದಲ್ಲಿ ಆರಂಭಿಸಲಾಗಿತ್ತು. ಜಾಗತಿಕ ಮಟ್ಟದಲ್ಲಿ ಸುಮಾರು 10 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸಲು ಚಿಂತನೆ ನಡೆಸಿರುವುದಾಗಿ ಅಮೆಜಾನ್ ಕಂಪನಿ ಇತ್ತೀಚೆಗೆ ಹೇಳಿತ್ತು. ಇದರ ಬೆನ್ನಲ್ಲೇ ಭಾರತದಲ್ಲಿ ಹಲವು ಉದ್ಯೋಗಿಗಳಿಗೆ ಸ್ವಯಂಪ್ರೇರಿತ ಬೇರ್ಪಡಿಕೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ವರದಿಯಾಗಿತ್ತು. ಕಾರ್ಮಿಕ ಕಾನೂನನ್ನು ಕಂಪನಿ ಉಲ್ಲಂಘಿಸುತ್ತಿದೆ ಎಂಬ ದೂರುಗಳೂ ಕೇಳಿಬಂದಿದ್ದು, ಇದಕ್ಕಾಗಿ ಕಾರ್ಮಿಕ ಸಚಿವಾಲಯದಿಂದ ಕಂಪನಿಗೆ ಸಮನ್ಸ್ ನೀಡಲಾಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ