ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೈತ್ರಿಯ ಹೊರತಾಗಿಯೂ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬಹುಮತದೊಂದಿಗೆ ಗೆಲ್ಲಲಿದ್ದಾರೆ: ಅಮಿತ್ ಶಾ

Twitter
Facebook
LinkedIn
WhatsApp
ಮೈತ್ರಿಯ ಹೊರತಾಗಿಯೂ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬಹುಮತದೊಂದಿಗೆ ಗೆಲ್ಲಲಿದ್ದಾರೆ: ಅಮಿತ್ ಶಾ

ನವದೆಹಲಿ: “ಮೋದಿ ಅವರನ್ನು ಸೋಲಿಸಲು ನೀವೆಲ್ಲಾ ‘ಇಂಡಿಯಾ’ ಮೈತ್ರಿ ರಚನೆ ಮಾಡಿಕೊಂಡಿದ್ದೀರಿ. 2024ರಲ್ಲಿ ಅವರೇ ಮತ್ತೆ ಪೂರ್ಣ ಬಹುಮತದಿಂದ ಗೆದ್ದು ಬರುತ್ತಾರೆ. ಹೀಗಾಗಿ ನಿಮ್ಮ ರಾಜಕೀಯ ಹಿತಚಿಂತನೆ ಬಿಟ್ಟು ದಿಲ್ಲಿಯ ಬಗ್ಗೆ ಯೋಚನೆ ಮಾಡಿ. ರಾಷ್ಟ್ರ ರಾಜಧಾನಿಯ ಭವಿಷ್ಯದ ದೃಷ್ಟಿಯಿಂದ ತರಲಾಗಿರುವ ವಿಧೇಯಕ ಬೆಂಬಲಿಸಿ,” ಎಂದು ಪ್ರತಿಪಕ್ಷಗಳಿಗೆ ಅಮಿತ್‌ ಶಾ ಮನವಿ ಮಾಡಿದರು.

”ದಿಲ್ಲಿ ಆಡಳಿತಾತ್ಮಕ ವಿಚಾರಗಳು ಸುಸೂತ್ರವಾಗಿ ನಡೆಯಬೇಕಿದೆ. 2015ರ ವರೆಗೆ ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತಿದ್ದ ಆಡಳಿತ ವ್ಯವಸ್ಥೆ ಆದೊಂದು ಪಕ್ಷಕ್ಕೆ ಇಷ್ಟವಾಗುತ್ತಿಲ್ಲ. ಜನರ ಸೇವೆ ಮಾಡಲು ಆ ಪಕ್ಷ ರಾಜಕೀಯಕ್ಕೆ ಬಂದಿಲ್ಲ. ಬದಲಾಗಿ ಸಂಪತ್ತು ಲೂಟಿ ಮಾಡುವ ಕಾರ್ಯಕ್ಕೆ ಅಧಿಕಾರ ಬೇಕಿದೆ. ಅಧಿಕಾರಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ನೂತನ ವಿಧೇಯಕ ವಿರೋಧಿಸುತ್ತಿದೆ.,” ಎಂದು ಆಮ್‌ ಆದ್ಮಿ ಪಕ್ಷದ ವಿರುದ್ಧ ಗುಡುಗಿದರು.

”ಪ್ರತಿಪಕ್ಷಗಳು ರಾಷ್ಟ್ರ ರಾಜಧಾನಿಯ ದಿಲ್ಲಿಹಿತಾಸಕ್ತಿ ಕಾಪಾಡಬೇಕೆ ವಿನಾ, ರಾಜಕೀಯ ಉದ್ದೇಶಕ್ಕೆ ಹೊಸದಾಗಿ ಉದಯವಾಗಿರುವ ‘ಇಂಡಿಯಾ’ ಎಂಬ ಮೈತ್ರಿ ಕೂಟ ಉಳಿಸುವ ಕಡೆ ನೋಡಬಾರದು,” ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ . ಪ್ರತಿಪಕ್ಷಗಳ ವಿರೋಧ, ಗದ್ದಲ ಕೋಲಾಹಲ, ಸಭಾತ್ಯಾಗದ ನಡುವೆ ರಾಷ್ಟ್ರೀಯ ರಾಜಧಾನಿ ಪ್ರದೇಶ ದಿಲ್ಲಿ (ತಿದ್ದುಪಡಿ) ವಿಧೇಯಕವನ್ನು ಲೋಕಸಭೆ ಗುರುವಾರ ಅಂಗೀಕರಿಸಿತು.

ಲೋಕಸಭೆಯಲ್ಲಿ ಮಂಡಿಸಲಾಗಿದ್ದ ದಿಲ್ಲಿ ಆಡಳಿತ ಯಂತ್ರ ನಿಯಂತ್ರಿಸುವ ಸುಗ್ರೀವಾಜ್ಞೆ ಬದಲಿಗೆ ‘ರಾಷ್ಟ್ರೀಯ ರಾಜಧಾನಿ ಪ್ರದೇಶ ದಿಲ್ಲಿ (ತಿದ್ದುಪಡಿ) ವಿಧೇಯಕ-23’ ದ ಮೇಲೆ ಮಾತನಾಡಿದ ಅಮಿತ್‌ ಶಾ, ”ರಾಷ್ಟ್ರ ರಾಜಧಾನಿ ಪ್ರದೇಶದ ಹಿತ ಕಾಯ್ದುಕೊಳ್ಳಲು ಸಂವಿಧಾನದಲ್ಲಿ ಇರುವ ಅವಕಾಶ ಬಳಸಿಕೊಂಡು ವಿಧೇಯಕ ತರಲಾಗಿದೆ,” ಎಂದು ಸರಕಾರದ ನಡೆಯನ್ನು ಸಮರ್ಥಿಸಿಕೊಂಡರು.

ಸಿಎಂ ಪುತ್ರ ಯತೀಂದ್ರಗೆ ವರುಣದಲ್ಲಿ ಫುಲ್ ಡಿಮ್ಯಾಂಡ್

ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿನಿಧಿಸಿರುವ ವರುಣ (Varuna) ಕ್ಷೇತ್ರದಲ್ಲಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಫುಲ್ ಆಕ್ಟೀವ್ ಆಗಿದ್ದಾರೆ. ಸಿಎಂ ಪುತ್ರನಿಗೆ ಮನವಿ ಪತ್ರ ಕೊಡಲು ಜನ ಎಲ್ಲಾ ಕಡೆ ಮುಗಿಬೀಳುತ್ತಿದ್ದಾರೆ.

ಸಿದ್ದರಾಮಯ್ಯ ಸಿಎಂ ಆದ ಬಳಿಕ ತಮ್ಮ ಕ್ಷೇತ್ರದ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಈಗ ಮೈಸೂರಿನಲ್ಲಿ (Mysuru) ಭಾರೀ ಡಿಮ್ಯಾಂಡ್ ವ್ಯಕ್ತವಾಗಿದೆ.

ಯತೀಂದ್ರ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಸುಮಾರು 3 ಗಂಟೆಗೂ ಹೆಚ್ಚು ಕಾಲ ವರುಣ ಕ್ಷೇತ್ರದ ಜನರ ಬಳಿ ಮನವಿ ಪತ್ರ ಸ್ವೀಕರಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ