ಮೈತ್ರಿಯ ಹೊರತಾಗಿಯೂ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬಹುಮತದೊಂದಿಗೆ ಗೆಲ್ಲಲಿದ್ದಾರೆ: ಅಮಿತ್ ಶಾ
ನವದೆಹಲಿ: “ಮೋದಿ ಅವರನ್ನು ಸೋಲಿಸಲು ನೀವೆಲ್ಲಾ ‘ಇಂಡಿಯಾ’ ಮೈತ್ರಿ ರಚನೆ ಮಾಡಿಕೊಂಡಿದ್ದೀರಿ. 2024ರಲ್ಲಿ ಅವರೇ ಮತ್ತೆ ಪೂರ್ಣ ಬಹುಮತದಿಂದ ಗೆದ್ದು ಬರುತ್ತಾರೆ. ಹೀಗಾಗಿ ನಿಮ್ಮ ರಾಜಕೀಯ ಹಿತಚಿಂತನೆ ಬಿಟ್ಟು ದಿಲ್ಲಿಯ ಬಗ್ಗೆ ಯೋಚನೆ ಮಾಡಿ. ರಾಷ್ಟ್ರ ರಾಜಧಾನಿಯ ಭವಿಷ್ಯದ ದೃಷ್ಟಿಯಿಂದ ತರಲಾಗಿರುವ ವಿಧೇಯಕ ಬೆಂಬಲಿಸಿ,” ಎಂದು ಪ್ರತಿಪಕ್ಷಗಳಿಗೆ ಅಮಿತ್ ಶಾ ಮನವಿ ಮಾಡಿದರು.
”ದಿಲ್ಲಿ ಆಡಳಿತಾತ್ಮಕ ವಿಚಾರಗಳು ಸುಸೂತ್ರವಾಗಿ ನಡೆಯಬೇಕಿದೆ. 2015ರ ವರೆಗೆ ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತಿದ್ದ ಆಡಳಿತ ವ್ಯವಸ್ಥೆ ಆದೊಂದು ಪಕ್ಷಕ್ಕೆ ಇಷ್ಟವಾಗುತ್ತಿಲ್ಲ. ಜನರ ಸೇವೆ ಮಾಡಲು ಆ ಪಕ್ಷ ರಾಜಕೀಯಕ್ಕೆ ಬಂದಿಲ್ಲ. ಬದಲಾಗಿ ಸಂಪತ್ತು ಲೂಟಿ ಮಾಡುವ ಕಾರ್ಯಕ್ಕೆ ಅಧಿಕಾರ ಬೇಕಿದೆ. ಅಧಿಕಾರಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ನೂತನ ವಿಧೇಯಕ ವಿರೋಧಿಸುತ್ತಿದೆ.,” ಎಂದು ಆಮ್ ಆದ್ಮಿ ಪಕ್ಷದ ವಿರುದ್ಧ ಗುಡುಗಿದರು.
”ಪ್ರತಿಪಕ್ಷಗಳು ರಾಷ್ಟ್ರ ರಾಜಧಾನಿಯ ದಿಲ್ಲಿಹಿತಾಸಕ್ತಿ ಕಾಪಾಡಬೇಕೆ ವಿನಾ, ರಾಜಕೀಯ ಉದ್ದೇಶಕ್ಕೆ ಹೊಸದಾಗಿ ಉದಯವಾಗಿರುವ ‘ಇಂಡಿಯಾ’ ಎಂಬ ಮೈತ್ರಿ ಕೂಟ ಉಳಿಸುವ ಕಡೆ ನೋಡಬಾರದು,” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ . ಪ್ರತಿಪಕ್ಷಗಳ ವಿರೋಧ, ಗದ್ದಲ ಕೋಲಾಹಲ, ಸಭಾತ್ಯಾಗದ ನಡುವೆ ರಾಷ್ಟ್ರೀಯ ರಾಜಧಾನಿ ಪ್ರದೇಶ ದಿಲ್ಲಿ (ತಿದ್ದುಪಡಿ) ವಿಧೇಯಕವನ್ನು ಲೋಕಸಭೆ ಗುರುವಾರ ಅಂಗೀಕರಿಸಿತು.
ಲೋಕಸಭೆಯಲ್ಲಿ ಮಂಡಿಸಲಾಗಿದ್ದ ದಿಲ್ಲಿ ಆಡಳಿತ ಯಂತ್ರ ನಿಯಂತ್ರಿಸುವ ಸುಗ್ರೀವಾಜ್ಞೆ ಬದಲಿಗೆ ‘ರಾಷ್ಟ್ರೀಯ ರಾಜಧಾನಿ ಪ್ರದೇಶ ದಿಲ್ಲಿ (ತಿದ್ದುಪಡಿ) ವಿಧೇಯಕ-23’ ದ ಮೇಲೆ ಮಾತನಾಡಿದ ಅಮಿತ್ ಶಾ, ”ರಾಷ್ಟ್ರ ರಾಜಧಾನಿ ಪ್ರದೇಶದ ಹಿತ ಕಾಯ್ದುಕೊಳ್ಳಲು ಸಂವಿಧಾನದಲ್ಲಿ ಇರುವ ಅವಕಾಶ ಬಳಸಿಕೊಂಡು ವಿಧೇಯಕ ತರಲಾಗಿದೆ,” ಎಂದು ಸರಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಸಿಎಂ ಪುತ್ರ ಯತೀಂದ್ರಗೆ ವರುಣದಲ್ಲಿ ಫುಲ್ ಡಿಮ್ಯಾಂಡ್
ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿನಿಧಿಸಿರುವ ವರುಣ (Varuna) ಕ್ಷೇತ್ರದಲ್ಲಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಫುಲ್ ಆಕ್ಟೀವ್ ಆಗಿದ್ದಾರೆ. ಸಿಎಂ ಪುತ್ರನಿಗೆ ಮನವಿ ಪತ್ರ ಕೊಡಲು ಜನ ಎಲ್ಲಾ ಕಡೆ ಮುಗಿಬೀಳುತ್ತಿದ್ದಾರೆ.
ಸಿದ್ದರಾಮಯ್ಯ ಸಿಎಂ ಆದ ಬಳಿಕ ತಮ್ಮ ಕ್ಷೇತ್ರದ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಈಗ ಮೈಸೂರಿನಲ್ಲಿ (Mysuru) ಭಾರೀ ಡಿಮ್ಯಾಂಡ್ ವ್ಯಕ್ತವಾಗಿದೆ.
ಯತೀಂದ್ರ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಸುಮಾರು 3 ಗಂಟೆಗೂ ಹೆಚ್ಚು ಕಾಲ ವರುಣ ಕ್ಷೇತ್ರದ ಜನರ ಬಳಿ ಮನವಿ ಪತ್ರ ಸ್ವೀಕರಿಸಿದ್ದಾರೆ.