sherlyn chopra: ಬಟ್ಟೆ ಧರಿಸಿದ್ರೂ ಎಲ್ಲಾ ಓಪನ್; ಕಣ್ಕಣ್ ಬಿಟ್ಟ ಫ್ಯಾನ್ಸ್! ವಿಡಿಯೋ ವೈರಲ್
sherlyn chopra: ಬಾಲಿವುಡ್ ಸೆನ್ಸೇಷನ್ ಶೆರ್ಲಿನ್ ಚೋಪ್ರಾ ಅವರು ಇತ್ತೀಚೆಗೆ ಧೈರ್ಯಶಾಲಿ ಮೇಳದಲ್ಲಿ ಕಾಣಿಸಿಕೊಂಡು ಸಾಮಾಜಿಕ ಬಿರುಗಾಳಿಯನ್ನು ಸೃಷ್ಟಿಸಿದರು.
ತನ್ನ ಧೈರ್ಯಶಾಲಿ ಫ್ಯಾಷನ್ ಆಯ್ಕೆಗಳು ಮತ್ತು ಅನಿರ್ಬಂಧಿತ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ನಟಿ, ಹಳದಿ ಬಣ್ಣದ ಕೋ-ಆರ್ಡ್ ಸೆಟ್ ಅನ್ನು ಧರಿಸಿದ್ದಳು, ಅದು ಹಾಲ್ಟರ್ ನೆಕ್ ಬ್ರಾ ಟಾಪ್ ಮತ್ತು ಸಣ್ಣ ಡ್ರಾಸ್ಟ್ರಿಂಗ್ ಸ್ಕರ್ಟ್ ಅನ್ನು ಒಳಗೊಂಡಿತ್ತು.
ನಟಿ ದೇಹದ ಭಾಗವನ್ನು ಮುಚ್ಚಿಕೊಂಡಂತೆ ತೋರುತ್ತಿದ್ದರೂ, ಎಲ್ಲಾ ಕಡೆಗಳಲ್ಲಿಯೂ ಓಪನ್ ಆಗಿದೆ. ಇದಕ್ಕೆ ಕೂಡ ಕಮೆಂಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ರೀತಿ ಅಸಹ್ಯ ಡ್ರೆಸ್ ಏಕೆ ಧರಿಸುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಮಹಿಳೆಯೊಬ್ಬರು ಶೆರ್ಲಿನ್ ಜೊತೆ ಫೋಟೋ ತೆಗೆಸಿಕೊಳ್ಳಲು ಬಂದಿದ್ದರು. ಆಗ ಆಕೆ ಅಪ್ಪಿಕೊಳ್ಳಲು ಬಂದಾಗ, ಹೀಗೇಕೆ ಅಪ್ಪಿಕೊಳ್ಳುತ್ತೀರಿ ಎಂದು ಪ್ರಶ್ನಿಸಿ, ಕೊನೆಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆದರೆ ಈಕೆಯ ಡ್ರೆಸ್ ಅವತಾರ ನೋಡಿ ಫ್ಯಾನ್ಸ್ ಕೂಡ ಕಣ್ ಕಣ್ ಬಿಡುತ್ತಿದ್ದಾರೆ.
ವೈದ್ಯರು ಪ್ಲಾಸ್ಟಿಕ್ ಸರ್ಜರಿ ಮಾಡುವಾಗ ಇದ್ದ ಬಿದ್ದ ಪ್ಲಾಸ್ಟಿಕ್ ಗಳನ್ನೆಲ್ಲಾ ಇದೇ ಭಾಗಕ್ಕೆ ಹಾಕಿದಂತೆ ಕಾಣಿಸುತ್ತಿದೆ ಎಂದು ಕಮೆಂಟಿಗರೊಬ್ಬರು ಬರೆದಿದ್ದಾರೆ. ಈಕೆ ನಾಚಿಕೆಯಿಲ್ಲದ ಹೆಣ್ಣು ಎಂದು ಹಲವರು ಬರೆದಿದ್ದರೆ, ನೀವೇಕೆ ಈಕೆಯ ವಿಡಿಯೋ ಜೊಲ್ಲು ಸುರಿಸಿಕೊಂಡು ನೋಡುತ್ತೀರಿ ಎಂದು ಕಮೆಂಟ್ ಮಾಡುತ್ತಿರುವವರಿಗೇ ನೆಟ್ಟಿಗನೊಬ್ಬ ಕಾಲೆಳೆದಿದ್ದಾರೆ.
ಒಟ್ಟಿನಲ್ಲಿ ಶೆರ್ಲಿನ್ ಈ ಹೊಸ ಅವತಾರ ಸಾಕಷ್ಟು ವೈರಲ್ ಆಗುತ್ತಿದೆ.
ಈ ಹಿಂದೆ ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಶೆರ್ಲಿನ್ ಸುದ್ದಿಯಾಗಿದ್ದರು ಕೂಡ, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದರು. ಶೆರ್ಲಿನ್ ಚೋಪ್ರಾ ಅವರ ಖಾಸಗಿ ವಿಡಿಯೋಗಳನ್ನು ನಟಿ ರಾಖಿ ಸಾವಂತ್ ಬಿಡುಗಡೆ ಮಾಡಿದ್ದರು. ಇದು ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು.
ಈ ಹಿಂದೆ ಸಂದರ್ಶನವೊಂದರಲ್ಲಿ ನಟಿ, ‘ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ’ ಎಂದು ಹೇಳಿದ್ದರು. ನಂತರ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದ ನಟಿ ನಾನು ಹೇಳಿದ್ದನ್ನು ಅಪಾರ್ಥಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟನೆಯನ್ನೂ ಕೊಟ್ಟಿದ್ದರು.