ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೊರ್ಸ್ ವದಂತಿಗಳಿಗೆ ಫೋಟೋ ಹಂಚಿಕೊಂಡು ಗಾಸಿಪ್ ಮಂದಿಯ ಬಾಯಿ ಮುಚ್ಚಿಸಿದ ನಟಿ..!
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಸುದೀರ್ಘ 17 ವರ್ಷಗಳ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಹಲವರಿಗೆ ಇದೆ. ಆದಷ್ಟು ಬೇಗ ಈ ದಂಪತಿ ವಿಚ್ಛೇದನ ಪಡೆಯುತ್ತಾರೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಇಂಥ ಸಂದರ್ಭದಲ್ಲಿ ಐಶ್ವರ್ಯಾ ರೈ ಅವರು ಹಂಚಿಕೊಂಡ ಹೊಸ ಫೋಟೋ ವೈರಲ್ ಆಗಿದೆ.
ಒಂದಷ್ಟು ದಿನಗಳಿಂದ ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರ ಸಂಸಾರದ ಬಗ್ಗೆ ಇಲ್ಲಸಲ್ಲದ ಗಾಸಿಪ್ ಕೇಳಿಬರುತ್ತಿತ್ತು. ಪತಿ ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯಾ ರೈ ಕಿರಿಕ್ ಮಾಡಿಕೊಂಡಿದ್ದಾರೆ ಎಂದು ಕೆಲವರು ಗಾಳಿಸುದ್ದಿ ಹಬ್ಬಿಸಿದ್ದಾರೆ. ಆ ಸುದ್ದಿಗೆ ಪೂರಕವಾಗುವ ರೀತಿಯಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ (Abhishek Bachchan) ನಡೆದುಕೊಂಡಿದ್ದು ಕೂಡ ಅಚ್ಚರಿಗೆ ಕಾರಣ ಆಗಿತ್ತು. ಹಾಗಾದರೆ ನಿಜವಾಗಿಯೂ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ? ಶೀಘ್ರದಲ್ಲೇ ಅವರು ಡಿವೋರ್ಸ್ (Aishwarya Rai Divorce) ಪಡೆಯುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳು ಮೂಡಿದ್ದವು. ಅವುಗಳಿಗೆಲ್ಲ ಉತ್ತರ ಎಂಬಂತೆ ಈಗ ಐಶ್ವರ್ಯಾ ರೈ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಗಾಸಿಪ್ ಮಂದಿಯ ಬಾಯಿ ಮುಚ್ಚಿಸಿದ್ದಾರೆ.
ಇಂದು (ಫೆಬ್ರವರಿ 5) ಅಭಿಷೇಕ್ ಬಚ್ಚನ್ ಬರ್ತ್ಡೇ. ಆ ಪ್ರಯುಕ್ತ ಅನೇಕರು ಅವರಿಗೆ ಶುಭಾಶಯ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಹತ್ತಿರದ ಸಂಬಂಧಿಕರೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಅಭಿಷೇಕ್ ಬಚ್ಚನ್ಗೆ ಹ್ಯಾಪಿ ಬರ್ತ್ಡೇ ಎಂದು ಶುಭ ಕೋರಿದ್ದರೂ ಕೂಡ ಐಶ್ವರ್ಯಾ ರೈ ಕಡೆಯಿಂದ ಯಾವುದೇ ವಿಶ್ ಬಂದಿರಲಲ್ಲ. ಹಾಗಾಗಿ ಎಲ್ಲರಿಗೂ ಅನುಮಾನ ಹೆಚ್ಚಾಗಿತ್ತು. ಆದರೆ ತಡವಾಗಿದ್ದರೂ, ಸಂಜೆ ವೇಳಗೆ ಒಂದು ಸುಂದರವಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಐಶ್ವರ್ಯಾ ರೈ ಅವರು ಗಂಡನಿಗೆ ಶುಭಾಶಯ ತಿಳಿಸಿದ್ದಾರೆ.
ಈ ಫೋಟೋದಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಜೊತೆ ಅವರ ಮಗಳು ಆರಾಧ್ಯಾ ಕೂಡ ಇದ್ದಾಳೆ. ಮೂವರೂ ಖುಷಿಯಿಂದ ಪೋಸ್ ನೀಡಿದ ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಡಿವೋರ್ಸ್ ಆಗುತ್ತದೆ ಅಂತ ಗಾಸಿಪ್ ಹಬ್ಬಿಸಿದವರಿಗೆ ಈ ಫೋಟೋ ಮೂಲಕ ಐಶ್ವರ್ಯಾ ರೈ ಬಚ್ಚನ್ ಸರಿಯಾದ ಉತ್ತರ ನೀಡಿದ್ದಾರೆ’ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
‘ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಖುಷಿ, ಪ್ರೀತಿ, ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯವನ್ನು ದೇವರ ನೀಡಲಿ. ಯಾವಾಗಲೂ ಮಿಂಚುತ್ತಿರಿ’ ಎಂದು ಪತಿಗೆ ಐಶ್ವರ್ಯಾ ರೈ ಶುಭ ಕೋರಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ಫೋಟೋಗೆ ಲಕ್ಷಾಂತರ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. 2007ರಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರೂ ಚಿತ್ರರಂಗದಲ್ಲಿ ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಮದುವೆ ಬಳಿಕ ಐಶ್ವರ್ಯಾ ರೈ ಅವರು ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರಿಸುತ್ತಿಲ್ಲ. ತೀರಾ ಅಪರೂಪಕ್ಕೆ ಒಂದೊಂದು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಅವರು ಸಿನಿಮಾಗಳ ಜೊತೆ ವೆಬ್ ಸಿರೀಸ್ಗಳ ಮೂಲಕವೂ ಮಿಂಚುತ್ತಿದ್ದಾರೆ.