ಭಾನುವಾರ, ಏಪ್ರಿಲ್ 28, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಾಮೇಶ್ವರಂ ಕೆಫೇಗೆ ಭೇಟಿ ನೀಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ..!

Twitter
Facebook
LinkedIn
WhatsApp
ರಾಮೇಶ್ವರಂ ಕೆಫೇಗೆ ಭೇಟಿ ನೀಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ..!

ಮೊನ್ನೆ ಬೆಂಗಳೂರಿನ ಬ್ರೂಕ್​ಫೀಲ್ಡ್​ನ ರಾಮೇಶ್ವರಂ ಕೆಫೆ ಹೋಟೆಲ್​ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ (Rameshwaram Cafe bomb blast) ಘಟನೆಯನ್ನು ಸಂಸದ ಅಸಾದುದ್ದೀನ್ ಒವೈಸಿ (Asaduddin Owaisi) ಅವರು ಹೇಡಿತನದ ಕೃತ್ಯ  ಎಂದು ಹೇಳಿ ಖಂಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೆಫೆ ಮೇಲಿನ ದಾಳಿಯು ಹೇಡಿತನದ ಕೃತ್ಯವಾಗಿದೆ. ಮತ್ತು ಭಾರತೀಯ ಮೌಲ್ಯದ ಮೇಲಿನ ಆಕ್ರಮಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್​ನಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ರಾಮೇಶ್ವರಂ ಕೆಫೆ ಹೋಟೆಲ್​ಗೆ ಭೇಟಿ ನೀಡಿ ಬಂದ ನಂತರ ಒವೈಸಿ ಈ ಟ್ವೀಟ್ ಮಾಡಿದ್ದಾರೆ.

‘ಹೈದರಾಬಾದ್​ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದೆ. ಆಹಾರ ಅಮೋಘವಾಗಿತ್ತು. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮಸ್ಥಳದ ಹೆಸರನ್ನು ಈ ಕೆಫೆಗೆ ಇಡಲಾಗಿದೆ. ಇದನ್ನು ಬಹಳ ಮುಖ್ಯವಾಗಿ ಗಮನಿಸಬೇಕು. ಈ ಬಾಂಬ್ ಬ್ಲಾಸ್ಟ್ ಭಾರತೀಯ ಮೌಲ್ಯಗಳ ಮೇಲೆ ಆದ ದಾಳಿ,’ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥರೂ ಆದ ಅವರು ಹೇಳಿದ್ದಾರೆ.

ಕೆಲ ವರ್ಷಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಆರಂಭವಾದ ರಾಮೇಶ್ವರಂ ಕೆಫೆ ಸಾಕಷ್ಟು ಕಡೆ ಶಾಖೆಗಳನ್ನು ವಿಸ್ತರಿಸಿದೆ. ಅಬ್ದುಲ್ ಕಲಾಂ ಅವರ ಅಭಿಮಾನಿಗಳಾದ ಸಂಸ್ಥಾಪಕರು, ಮಾಜಿ ರಾಷ್ಟ್ರಪತಿಗಳ ಹುಟ್ಟಿದೂರಾದ ರಾಮೇಶ್ವರಂ ಹೆಸರನ್ನು ತಮ್ಮ ಕೆಫೆಗೆ ಇಟ್ಟಿದ್ದಾರೆ.

ಕೆಫೆಯ ಬ್ರೂಕ್​ಫೀಲ್ಡ್ ಬ್ರ್ಯಾಂಚ್​ನಲ್ಲಿ ಶುಕ್ರವಾರ ಬಾಂಬ್ ಸ್ಫೋಟಿಸಿ, ಹತ್ತಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದೆ. ಇದು ಐಇಡಿ ಬಾಂಬ್ ಆಗಿದ್ದು, ಹೆಚ್ಚು ತೀವ್ರತೆ ಹೊಂದಿರಲಿಲ್ಲ. ಬಾಂಬ್ ಸ್ಫೋಟಿಸಿದ ವ್ಯಕ್ತಿಯ ಚಹರೆ ಮತ್ತು ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯಾಗ್ ಹಿಡಿದು ಬರುವ ಆತ ಹೋಟೆಲ್​ನಲ್ಲಿ ರವೆ ಇಡ್ಲಿ ತಿಂದು ಬಳಿಕ ಬ್ಯಾಗನ್ನು ಅಲ್ಲೇ ಬಿಟ್ಟು ತರಾತುರಿಯಲ್ಲಿ ಹೋಗಿದ್ದ. ಬಳಿಕ ಬಾಂಬ್ ಸ್ಫೋಟ ಸಂಭವಿಸಿದೆ.

ಸರ್ಕಾರ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದೆ. ಭಯೋತ್ಪಾದಕ ಕೃತ್ಯದ ಸಾಧ್ಯತೆ ಇರುವುದರಿಂದ ಎನ್​ಐಎ ಮತ್ತು ಎನ್​ಎಸ್​ಜಿ ತಂಡಗಳಿಂದಲೂ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ