ಭಾನುವಾರ, ಸೆಪ್ಟೆಂಬರ್ 15, 2024
20 ವರ್ಷಗಳ ಬಳಿಕ ಹುಕ್ಕೇರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ-ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜಾರ್ಖಂಡ್ ನಲ್ಲಿ ಬರೋಬ್ಬರಿ 4 ವರ್ಷಗಳ ಬಳಿಕ ಬಿಜೆಪಿ ಪ್ರತಿಪಕ್ಷ ನಾಯಕನ ಆಯ್ಕೆ!

Twitter
Facebook
LinkedIn
WhatsApp
ಜಾರ್ಖಂಡ್ ನಲ್ಲಿ ಬರೋಬ್ಬರಿ 4 ವರ್ಷಗಳ ಬಳಿಕ ಬಿಜೆಪಿ ಪ್ರತಿಪಕ್ಷ ನಾಯಕನ ಆಯ್ಕೆ!

ಹೊಸದಿಲ್ಲಿ: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಐದು ತಿಂಗಳಾದರೂ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಇದುವರೆಗೂ ಆಯ್ಕೆ ಮಾಡಿಲ್ಲ. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. ‘ಪ್ರತಿಪಕ್ಷ ನಾಯಕ ಕಾಣೆಯಾಗಿದ್ದಾರೆ’ ಎಂದು ಕಾಂಗ್ರೆಸ್ ಹಂಗಿಸುತ್ತಲೇ ಇದ್ದರೂ, ಬಿಜೆಪಿ ನಾಯಕತ್ವ ಅದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ವಿರೋಧ ಪಕ್ಷದ ನಾಯಕನಿಲ್ಲದೆಯೇ ಬಿಜೆಪಿ ಅಧಿವೇಶನದಲ್ಲಿ ಪಾಲ್ಗೊಂಡಿತ್ತು. ಆದರೆ ಜಾರ್ಖಂಡ್‌ನಲ್ಲಿಯೂ ಬಿಜೆಪಿ ಇದೇ ನೀತಿಯನ್ನು ಪಾಲಿಸಿಕೊಂಡು ಬಂದಿತ್ತು.

ಅಳೆದು ತೂಗಿ ನಾಲ್ಕು ವರ್ಷಗಳ ಬಳಿಕ ಜಾರ್ಖಂಡ್‌ ವಿಧಾನಸಭೆಗೆ ಬಿಜೆಪಿ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿದೆ. ಜಾರ್ಖಂಡ್‌ನ ಪ್ರತಿಪಕ್ಷ ಬಿಜೆಪಿಯು ಮಾಜಿ ಸಚಿವ ಅಮರ್‌ ಕುಮಾರ್‌ ಬೌರಿ ಅವರನ್ನು ಶಾಸಕಾಂಗ ಪಕ್ಷದ ಹೊಸ ನಾಯಕ ಎಂದು ಹೆಸರಿಸಿದೆ. ಹೀಗಾಗಿ ಜಾರ್ಖಂಡ್‌ ವಿಧಾನಸಭೆಯಲ್ಲಿ ನಾಲ್ಕು ವರ್ಷಗಳ ನಂತರ ನಡೆಯುವ ಅಧಿವೇಶನದಲ್ಲಿ ಮೊದಲ ಬಾರಿಗೆ ಪ್ರತಿಪಕ್ಷ ನಾಯಕ ಉಪಸ್ಥಿತರಿರಲಿದ್ದಾರೆ.

ಇದು ಸದ್ಯದ ಕರ್ನಾಟಕ ವಿಧಾನಸಭೆ ಸ್ಥಿತಿಯನ್ನೇ ಹೋಲುತ್ತಿದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ. ಕರ್ನಾಟಕದಲ್ಲಿ ಹೊಸ ಸರಕಾರ ರಚನೆಯಾಗಿ ಐದು ತಿಂಗಳಾಗಿದ್ದರೂ, ಇನ್ನೂ ಕೂಡ ಪ್ರತಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ರಾಜ್ಯದ ನಾಯಕರು ಬಿಜೆಪಿ ಹೈಕಮಾಂಡ್‌ನಿಂದ ಹಸಿರು ನಿಶಾನೆಗೆ ಕಾದುಕುಳಿತಿದ್ದಾರೆ.

ಬೌರಿ ಅವರು ಬೊಕಾರೊ ಜಿಲ್ಲೆಯ ಚಂದಂಕಿಯಾರಿ ವಿಧಾನಸಭೆ ಮೀಸಲು ಕ್ಷೇತ್ರದ ಶಾಸಕರಾಗಿದ್ದಾರೆ. ಇವರಿಗೆ ಜಾರ್ಖಂಡ್‌ನ ಮೊದಲ ಸಿಎಂ ಬಾಬುಲಾಲ್‌ ಮರಾಂಡಿ ಅವರು ಪ್ರತಿಸ್ಪರ್ಧಿಯಾಗಿದ್ದರು. ಆದರೆ 10ನೇ ಪರಿಚ್ಛೇದ ಅಡಿಯಲ್ಲಿ ಅವರ ವಿರುದ್ಧ ಅನರ್ಹತೆಯ ಅರ್ಜಿಯ ಸಲ್ಲಿಕೆಯಾಗಿದ್ದು, ಅದನ್ನು ಸ್ಪೀಕರ್‌ ಟ್ರಿಬ್ಯೂನಲ್‌ ಇನ್ನೂ ತೀರ್ಮಾನಿಸದ ಕಾರಣ ಮರಾಂಡಿ ಅವರಿಗೆ ಪ್ರತಿಪಕ್ಷ ನಾಯಕನ ಸ್ಥಾನಮಾನ ನೀಡಲಾಗಿಲ್ಲ. ಪರಿಶಿಷ್ಟ ಜಾತಿಯ ನಾಯಕ ಬೌರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವುದರೊಂದಿಗೆ, ಆದಿವಾಸಿ-ದಲಿತರು- ಒಬಿಸಿಗಳ ಸಮುದಾಯಗಳ ಓಲೈಕೆಗೆಗೆ ಮುಂದಾಗಿದೆ ಎಂದು ಆಡಳಿತಾರೂಢ ಜೆಎಂಎಂ ಆರೋಪಿಸಿದೆ.

2019ರ ಡಿಸೆಂಬರ್‌ನಿಂದ ಜಾರ್ಖಂಡ್‌ ವಿಧಾನಸಭೆಯ ಹನ್ನೊಂದು ಅಧಿವೇಶನಗಳು ಪ್ರತಿಪಕ್ಷ ನಾಯಕನಿಲ್ಲದೆ ನಡೆದಿವೆ. ಬಿಜೆಪಿಯ ಹೊಸ ನಿರ್ಧಾರದಿಂದಾಗಿ ಮುಂಬರುವ ಚಳಿಗಾಲದ ಅಧಿವೇಶನಕ್ಕೆ ಪ್ರತಿಪಕ್ಷದ ನಾಯಕರು ಭಾಗಿಯಾಗಲಿದ್ದಾರೆ. ಇದಲ್ಲದೇ, ಪಕ್ಷವು ಜೆ.ಪಿ.ಪಟೇಲ್‌ ಅವರನ್ನು ವಿಧಾನಸಭೆಯಲ್ಲಿ ಪಕ್ಷದ ‘ವ್ಹಿಪ್‌’ ಎಂದು ಹೆಸರಿಸಿದೆ.

ಶಾಸಕಾಂಗ ಪಕ್ಷದ ನಾಯಕನನ್ನು ನೇಮಿಸುವ ಕುರಿತು ಜುಲೈನಲ್ಲಿ ಶಾಸಕರನ್ನು ಭೇಟಿಯಾಗಿದ್ದ ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆಕಾಂಕ್ಷಿಗಳಾಗಿರುವವರ ಪಟ್ಟಿಯನ್ನು ಪಡೆದು , ಬಿಜೆಪಿ ಹೈಕಮಾಂಡ್‌ಗೆ ಸಲ್ಲಿಸಿದ್ದರು. ಕೇಂದ್ರದ ನಾಯಕತ್ವಕ್ಕೆ ಸಲ್ಲಿಸಿದ ವರದಿಯ ಪ್ರಕಾರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಮರಾಂಡಿ ಅವರನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಉನ್ನತೀಕರಿಸಲಾಗಿದೆ.

2019ರ ಡಿಸೆಂಬರ್‌ನಿಂದ ಐದನೇ ರಾಜ್ಯ ವಿಧಾನಸಭೆಯ 11 ಅಧಿವೇಶನಗಳು ಪ್ರತಿ ಪಕ್ಷ ನಾಯಕನಿಲ್ಲದೆ ನಡೆದಿವೆ. ಮುಂಬರುವ ಚಳಿಗಾಲದ ಅಧಿವೇಶನದ ವೇಳೆಗೆ ಕೊನೆಗೂ ಬಿಜೆಪಿ ನಾಯಕನೊಂದಿಗೆ ವಿಧಾನಸಭೆ ಪ್ರವೇಶಿಸಲಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ