ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಎದೆಯ ಮೇಲಿನ ಟ್ಯಾಟು ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ ಶ್ರದ್ಧಾ ಶ್ರೀನಾಥ್

Twitter
Facebook
LinkedIn
WhatsApp
ಎದೆಯ ಮೇಲಿನ ಟ್ಯಾಟು ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ ಶ್ರದ್ಧಾ ಶ್ರೀನಾಥ್

ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿಬಿಟ್ಟಿದ್ದಾರೆ.

ತೆಲುಗು ನಟ ವಿಕ್ಟರಿ ವೆಂಕಟೇಶ್‌ಗೆ ಜೋಡಿಯಾಗಿ ನಟಿಸಿರುವ ಸೈಂಧವ್ ಸಿನಿಮಾದಲ್ಲಿ ಶ್ರದ್ಧಾ ನಟಿಸಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಶ್ರದ್ಧಾ ಸಖತ್ ಬ್ಯುಸಿಯಾಗಿದ್ದಾರೆ.

ನಟಿ ಶ್ರದ್ಧಾ ಶ್ರೀನಾಥ್ ತಮ್ಮ ಎದೆಯ ಹಚ್ಚೆ ಬಗ್ಗೆ ಸತ್ಯವನ್ನು ಬಹಿರಂಗಪಡಿಸಿದ್ದಾರೆ

ಜನರು ಪದೇ ಪದೇ ಪ್ರಶ್ನೆ ಮಾಡುವ ಟ್ಯಾಟೂ ಬಗ್ಗೆ ಇತ್ತೀಚಿಗೆ ನಡೆದ ತೆಲುಗು ಸಂದರ್ಶನದಲ್ಲಿ ಶ್ರದ್ಧಾ ರಿವೀಲ್ ಮಾಡಿದ್ದಾರೆ. ಟ್ಯಾಟೂ ಹಿಂದೆ ಸ್ಟೋರಿ ಇದೆ. 

ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಮ್ಯೂಸಿಕ್ ಬ್ಯಾಂಡ್‌ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆಗಾಗ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರಂತೆ.

‘ಈ ಟ್ಯಾಟೂ ಹಾಕಿಸಿಕೊಂಡು ಹಲವು ವರ್ಷಗಳೇ ಆದವು. ನಾನು ಸಿನಿಮಾ ಜಗತ್ತಿಗೂ ಬರುವ ಮುನ್ನದಿನಗಳವು. ಆಗ ನಾನೊಂದು ‘ದಿ ಬೀಟಲ್ಸ್’ ಹೆಸರಿನ ಮ್ಯೂಸಿಕ್ ಬ್ಯಾಂಡ್‌ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದೆ’

‘ಸಂಗೀತ ನನ್ನ ಆಸಕ್ತಿಯ ಕ್ಷೇತ್ರ. ಹಾಗಾಗಿ ಬೀಟಲ್ಸ್ ಮ್ಯೂಸಿಕ್ ಬ್ಯಾಂಡ್ ಆಯೋಜಿಸುತ್ತಿದ್ದ ಸ್ಟೇಜ್ ಶೋಗಳಲ್ಲಿ ಆಗಾಗ ಹಾಡುವುದು ನನ್ನ ಅಭ್ಯಾಸ’

ನಟಿ ಶ್ರದ್ಧಾ ಶ್ರೀನಾಥ್ ತಮ್ಮ ಎದೆಯ ಹಚ್ಚೆ ಬಗ್ಗೆ ಸತ್ಯವನ್ನು ಬಹಿರಂಗಪಡಿಸಿದ್ದಾರೆ

‘ಹಾಗೆ ಹಾಡಿದ ಕಾರಣಕ್ಕೆ ಮೊಟ್ಟ ಮೊದಲ ಬಾರಿಗೆ ದಿ ಬೀಟಲ್ಸ್ ಮ್ಯೂಸಿಕ್ ಟೀಮ್ ವತಿಯಿಂದ ನನಗೆ ಎರಡು ಸಾವಿರ ರೂಪಾಯಿ ಚೆಕ್ ಕೊಟ್ಟರು. ನನಗೆ ಆಗ ಟ್ಯಾಟೂ ಹುಚ್ಚು’

‘ಮೊದಲ ಸಂಭಾವನೆ ಎನ್ನುವುದು ನನ್ನೊಳಗೆ ಸದಾ ಕಾಲ ಇರಬೇಕು ಅಂತಲೇ ಯೋಚಿಸುತ್ತಾ ಟ್ಯಾಟೋ ಹಾಕಿಸಿಕೊಳ್ಳಲು ಮುಂದಾದೆ. ಅದು ಸರಿ, ಅದು ಯಾವ ರೀತಿಯಲ್ಲಿರಬೇಕು ಎನ್ನುವುದು ನನಗೆ ಎದುರಾದ ಪ್ರಶ್ನೆ’

‘ಆಗ ನನಗೆ ಹೊಳೆದಿದ್ದು ಮ್ಯೂಜಿಕ್ ಮೇಲಿನ ಪ್ರೀತಿ ಮತ್ತು ಆಸಕ್ತಿ. ಆ ಟೀಮ್ ನೆನಪು ಸದಾ ಇರಬೇಕು, ಸಂಗೀತದ ಮೇಲಿನ ಪ್ರೀತಿಯೂ ಉಳಿಯಬೇಕು ಅಂತ ಯೋಚಿಸಿ,ಟ್ಯಾಟೂ ಹಾಕುವವನಿಗೆ ಹೇಳಿದಾಗ ಆತನ ಕುಂಚದಲ್ಲಿ ಅರಳಿದ್ದೇ ಈ ಚಿತ್ರ.’ ಎಂದು ಹಲವು ವರ್ಷಗಳ ಹಿಂದಿನ ಸಂದರ್ಶನದಲ್ಲೂ ಹೇಳಿದ್ದಾರೆ. 

ಬಿಟಲ್ ಮ್ಯೂಸಿಕ್ ಬ್ಯಾಂಡ್ ನನ್ನ ಕ್ರಶ್…ಆತನಿಗಾಗಿ ಈ ಟ್ಯಾಟೂ ಹಾಕಿಸಿಕೊಂಡಿರುವುದು. ಇಂಗ್ಲಿಷ್‌ನಲ್ಲಿ ಲವ್ ಅಂತ ಬರೆದಿದೆ…ಅದಕ್ಕೆ ಮ್ಯೂಚಿಕ್‌ ಲಿಂಕ್ ಕೊಡಲಾಗಿದೆ ಎಂದಿದ್ದಾರೆ ಶ್ರದ್ಧಾ. 

ನಟಿ ಶ್ರದ್ಧಾ ಶ್ರೀನಾಥ್ ತಮ್ಮ ಎದೆಯ ಹಚ್ಚೆ ಬಗ್ಗೆ ಸತ್ಯವನ್ನು ಬಹಿರಂಗಪಡಿಸಿದ್ದಾರೆ
ವಿದೇಶಗಳಲ್ಲಿ ದರ್ಶನ್ ಕಾಟೇರ ಬಿಡುಗಡೆ; ಟಿಕೆಟ್ ದರ ಎಷ್ಟು?

ದರ್ಶನ್‌ ನಟನೆಯ ‘ಕಾಟೇರ’ ಸಿನಿಮಾ ಅಭೂತಪೂರ್ವ ಗೆಲುವು ಕಂಡಿದೆ. ಈ ವಾರದಿಂದ ‘ಕಾಟೇರ’ ಸಿನಿಮಾ ದುಬೈ, ಯುಕೆ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ ಬಿಡುಗಡೆ ಆಗುತ್ತಿದೆ. ಜ.7ಕ್ಕೆ ದುಬೈನಲ್ಲಿ ಪ್ರೀಮಿಯರ್‌ ಶೋ ನಡೆಯುತ್ತಿದ್ದು, ಈ ಪ್ರೀಮಿಯರ್‌ ಶೋನಲ್ಲಿ ಚಿತ್ರತಂಡ ಪಾಲ್ಗೊಳ್ಳುವ ಸಾಧ್ಯತೆಗಳು ಇವೆ.

ಈಗಾಗಲೇ ಚಿತ್ರದ ಡಬ್ಬಿಂಗ್‌ ಹಕ್ಕುಗಳಿಗೆ ಬೇಡಿಕೆ ಬಂದಿದ್ದು, ತೆಲುಗು, ತಮಿಳು, ಹಿಂದಿ ಭಾಷೆಗೆ ಡಬ್‌ ಆಗಲಿದೆ. ಚಿತ್ರದ ಗೆಲುವಿನ ಸಂಭ್ರಮಾಚರಣೆ ಕಾರ್ಯಕ್ರದಲ್ಲಿ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ‘ನಮ್ಮ ನಿರೀಕ್ಷೆಯಂತೆ ಕಾಟೇರ ಸಿನಿಮಾ ಮೆಚ್ಚುಗೆ ಗಳಿಸುತ್ತಿದೆ. ನನ್ನ ನಿರ್ಮಾಣದಲ್ಲಿ ಒಂದು ಒಳ್ಳೆಯ ಸಿನಿಮಾ ಕೊಟ್ಟ ಇಡೀ ತಂಡಕ್ಕೆ ಧನ್ಯವಾದಗಳು’ ಎಂದರು.

ದರ್ಶನ್‌, ‘ನನಗೆ ಇಂಥಾ ಒಳ್ಳೆಯ ಕತೆ ಕೊಟ್ಟು ಸಿನಿಮಾ ಮಾಡಿದ ನಿರ್ದೇಶಕ ತರುಣ್‌ ಸುಧೀರ್‌, ಕತೆ ಬರೆದ ಜಡೇಶ್‌ ಕೆ ಹಂಪಿ, ಡೈಲಾಗ್‌ ಬರೆದ ಮಾಸ್ತಿ ಅವರಿಗೆ ಧನ್ಯವಾದಗಳು. ಚಿತ್ರದಲ್ಲಿ ಹಿರಣ್ಯ ಕಶಿಪುವಿನ ಡೈಲಾಗ್‌ ಹೇಳುವ ದೃಶ್ಯದಲ್ಲಿನ ನನ್ನ ನಟನೆಯನ್ನು ಡಾ ರಾಜ್‌ಕುಮಾರ್‌ ಅವರಿಗೆ ಹೋಲಿಸುವುದು ಬೇಡ. ಯಾಕೆಂದರೆ ರಾಜ್‌ಕುಮಾರ್‌ ಅವರ ಕಾಲ ಧೂಳಿಗೂ ನಾನು ಸಮ ಅಲ್ಲ. ಪ್ರಯತ್ನ ಮಾಡಬಹುದು. ಆದರೆ, ಅವರ ಲೆವಲ್ಲಿಗೆ ಹೋಗಲಾಗದು. ಚಿತ್ರದಲ್ಲಿ ನನ್ನ ನಟನೆ, ಡೈಲಾಗ್‌, ಕತೆ ಹೀಗೆ ಎಲ್ಲದರ ಬಗ್ಗೆಯೂ ಮಾತನಾಡುತ್ತಿದ್ದಾರೆ. ಖುಷಿ ಆಗುತ್ತಿದೆ’ ಎಂದರು.

ನಿರ್ದೇಶಕ ತರುಣ್‌ ಸುಧೀರ್‌, ‘ಸಿನಿಮಾ ಯಾರೂ ಕೂಡ ಲ್ಯಾಗ್‌ ಆಯಿತು ಅಂತ ಹೇಳುತ್ತಿಲ್ಲ. ಚಿತ್ರದಲ್ಲಿ ತುಂಬಾ ದೊಡ್ಡ ವಿಷಯಗಳಿವೆ. ಎಲ್ಲವನ್ನೂ ಹೇಳುವುದಕ್ಕೆ ನಮಗೆ ಟೈಮ್‌ ಬೇಕಾಯಿತು’ ಎಂದರು.

ಕತೆಗಾರ ಜಡೇಶ್‌ ಕೆ ಹಂಪಿ, ಸಂಭಾಷಣಾಕಾರ ಮಾಸ್ತಿ, ಅವಿನಾಶ್‌, ಶ್ರುತಿ, ಕುಮಾರ್‌ ಗೋವಿಂದ್, ರವಿಚೇತನ್‌, ಛಾಯಾಗ್ರಾಹಕ ಸುಧಾಕರ್‌ ಎಸ್‌ ರಾಜ್‌, ವಿ ಹರಿಕೃಷ್ಣ ಇದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist