ನಟಿ ರಮ್ಯಾ ಹೃದಯಾಘಾತದಿಂದ ನಿಧನ; ತಮಿಳು ಮಾಧ್ಯಮದಲ್ಲಿ ವೈರಲ್ ಆದ ಸುಳ್ಳು ಸುದ್ದಿ - ಆಪ್ತರಿಂದ ಸ್ಪಷ್ಟಣೆ
ಬೆಂಗಳೂರು: ಮೋಹಕ ತಾರೆ ರಮ್ಯಾ ಅಭಿಮಾನಿಗಳು ಬುಧವಾರ (ಸೆ.6 ರಂದು) ಶಾಕ್ ಗೆ ಒಳಗಾಗಿದ್ದಾರೆ. ನಟಿ ರಮ್ಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಮ್ಯಾ ಇದ್ದಕ್ಕಿದ್ದಂತೆ ಟ್ರೆಂಡ್ ಆಗಿದ್ದಾರೆ.
ಮೋಹಕ ತಾರೆ ರಮ್ಯಾ ಕಳೆದ ಕೆಲ ಸಮಯದಿಂದ ಚಿತ್ರರಂಗದಿಂದ ದೂರವಾಗಿದ್ದಾರೆ. ಇತ್ತೀಚೆಗೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರು. ಡಾಲಿ ಧನಂಜಯ ಅವರ ಸಿನಿಮಾದಲ್ಲಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ತಮ್ಮ ಬ್ಯಾನರ್ ನಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ನಡುವೆ ಬುಧವಾರ ಅವರು ಹಠಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಮಿಳು ಸೋಶಿಯಲ್ ಮೀಡಿಯಾದ ಕೆಲ ಪೇಜ್ ಗಳಲ್ಲಿ ಸುದ್ದಿ ಹರಿದಾಡಿದೆ.ಇದನ್ನು ಕೇಳಿ ಇತ್ತ ಕರ್ನಾಟಕದಲ್ಲಿ ರಮ್ಯಾ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.
ಇದೊಂದು ಸುಳ್ಳು ಸುದ್ದಿ ರಮ್ಯಾ ಅವರು ಆರಾಮವಾಗಿ ಯೂರೋಪ್ ನಲ್ಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.
ರಮ್ಯಾ ಆರೋಗ್ಯವಾಗಿದ್ದಾರೆ- ಸುಳ್ಳು ವದಂತಿಗೆ ನಟಿಯ ಆಪ್ತರಿಂದ ಸ್ಪಷ್ಟನೆ
ವಿದೇಶ ಪ್ರವಾಸದಲ್ಲಿರುವ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ (Sandalwood Queen Ramya) ಕ್ಷೇಮವಾಗಿದ್ದಾರೆ. ನಟಿಯ ಆರೋಗ್ಯದ (Ramya Health) ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸಬೇಡಿ ಎಂದು ಅವರ ಆಪ್ತರು ಮನವಿ ಮಾಡಿಕೊಂಡಿದ್ದಾರೆ.
ನಟಿ ರಮ್ಯಾ ಅವರು ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿ ವೈರಲ್ ಆಗಿತ್ತು. ಈ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದ್ದಂತೆ ರಮ್ಯಾ ಸ್ನೇಹಿತೆಯರು ಸ್ಪಷ್ಟನೆ ನೀಡಿದ್ದಾರೆ. ರಮ್ಯಾ ಆರೋಗ್ಯವಾಗಿದ್ದಾರೆ, ಕ್ಷೇಮವಾಗಿದ್ದಾರೆ. ನಾಳೆಯೇ ವಿದೇಶದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಕ್ಲ್ಯಾರಿಟಿ ನೀಡಿದ್ದಾರೆ.
Wonderful meeting the very talented and genteel lady @divyaspandana for dinner in Geneva. We talked about many things including our love for Bangalore. ? pic.twitter.com/1kN5ybEHcD
— Chitra Subramaniam (@chitraSD) September 6, 2023
ನಟಿ ರಮ್ಯಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ತಮಿಳು ಕಿರುತೆರೆ ನಟಿ ರಮ್ಯಾಗೆ ಹೃದಯಾಘಾತವಾಗಿದೆ. ಈ ಸುದ್ದಿಗೆ ಸ್ಯಾಂಡಲ್ವುಡ್ ನಟಿ ರಮ್ಯಾ ಫೋಟೋ ಹಾಕಿ ನ್ಯೂಸ್ ಮಾಡಲಾಗಿತ್ತು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯಿತು. ಕೂಡಲೇ ರಮ್ಯಾ ಆಪ್ತರು ನಟಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿಯೂ ರಮ್ಯಾ ಆರೋಗ್ಯವಾಗಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂಬ ಪೋಸ್ಟ್ ಅನ್ನು ವೈರಲ್ ಮಾಡಲಾಗುತ್ತಿದೆ. ಸದ್ಯ ರಮ್ಯಾ ಬಗೆಗಿನ ಸುಳ್ಳು ಸುದ್ದಿ ಕೇಳಿ ಶಾಕ್ ಆಗಿದ್ದ ಫ್ಯಾನ್ಸ್ ಈಗ ನಿರಾಳವಾಗಿದ್ದಾರೆ.