ನಟಿ ಪೂನಂ ಪಾಂಡೆ ಸಾವಿಗೆ ಹಲವು ಅನುಮಾನ ; ಅತಿಯಾಗಿ ಮಾದಕ ವಸ್ತು ಸೇವನೆಯೇ ಸಾವಿಗೆ ಕಾರಣವೇ?
ನಟಿ ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್ನಿಂದ ನಿಧನ ಹೊಂದಿದ್ದಾರೆ ಎಂದು ಅವರ ತಂಡ ಹೇಳಿಕೆ ನೀಡಿತ್ತು. ಆದರೆ ಪೂನಂ ಮಾದಕ ವಸ್ತುವಿನ ಅತಿಯಾದ ಸೇವನೆಯಿಂದ ನಿಧನ ಹೊಂದಿದ್ದಾರೆ ಎನ್ನಲಾಗುತ್ತಿದೆ.
ನಟಿ ಪೂನಂ ಪಾಂಡೆ(Poonam Pandey) ನಿನ್ನೆ ತಡರಾತ್ರಿ (ಫೆಬ್ರವರಿ 1) ನಿಧನ ಹೊಂದಿದ್ದಾರೆ. 32 ವರ್ಷದ ನಟಿ ಹಠಾತ್ತನೆ ನಿಧನ ಹೊಂದಿದ್ದು ಅವರ ಆಪ್ತರಿಗೆ ಅಭಿಮಾನಿಗಳಿಗೆ ಆಘಾತ ತಂದಿದೆ. ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್ನಿಂದ ನಿಧನ ಹೊಂದಿದ್ದಾರೆ ಎಂದು ಅವರ ಮ್ಯಾನೇಜರ್ ಹೇಳಿರುವುದಾಗಿ ವರದಿ ಆಗಿದೆ. ಆದರೆ ಮೂರು ದಿನಗಳ ಹಿಂದಷ್ಟೆ ಪೂನಂ ಪಾಂಡೆ ಪಾರ್ಟಿ ಮಾಡುತ್ತಿರುವ ಚಿತ್ರ ಹಂಚಿಕೊಂಡಿದ್ದರು. ಪೂನಂ ಪಾಂಡೆ ಈ ಹಿಂದೆ ಎಂದೂ ಸಹ ತಮಗೆ ಕ್ಯಾನ್ಸರ್ ಇರುವುದರ ಬಗ್ಗೆ ಹೇಳಿಕೊಂಡಿರಲಿಲ್ಲ. ಇದೀಗ ಒಮ್ಮೆಲೆ ಕ್ಯಾನ್ಸರ್ನಿಂದ ನಿಧನ ಹೊಂದಿದ್ದಾರೆಂಬುದು ಹಲವರಿಗೆ ನಂಬಲು ಸಾಧ್ಯವಾಗಿರಲಿಲ್ಲ. ಪೂನಂ ಪಾಂಡೆ ನಿಧನಕ್ಕೆ ಮಾದಕ ವಸ್ತು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪೂನಂ ಪಾಂಡೆಯ ನಿಧನ ಮಾದಕ ವಸ್ತುವಿನ ಅತಿಯಾದ ಸೇವನೆಯಿಂದ ಆಗಿದೆ ಎಂದು ಮೂಲವೊಂದು ತಿಳಿಸಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ. ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್ನಿಂದ ನಿಧನ ಹೊಂದಿದ್ದಾರೆ ಎಂದು ಅವರ ತಂಡದವರು ಈ ಮೊದಲು ತಿಳಿಸಿದ್ದರು. ಆದರೆ ಅದು ಸುಳ್ಳೆಂದು ಹೇಳಲಾಗುತ್ತಿದೆ. ಪೂನಂ ಪಾಂಡೆ ನಿಧನದ ಕುರಿತು ತನಿಖೆ ಜಾರಿಯಲ್ಲಿದ್ದು ಅನುಮಾನಗಳಿಗೆ ಶೀಘ್ರವೇ ಉತ್ತರ ಸಿಗಲಿದೆ.
ಪೂನಂ ಪಾಂಡೆ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಮೊದಲಿಗೆ ಇದನ್ನು ಫೇಕ್ ಎನ್ನಲಾಯ್ತು. ಬಳಿಕ ಪೂನಂ ಪಾಂಡೆ ಪ್ರಚಾರಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅಥವಾ ಯಾವುದೋ ಸಿನಿಮಾ ಅಥವಾ ವೆಬ್ ಸರಣಿಯ ಪ್ರಚಾರಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದರು. ಆದರೆ ಪೂನಂ ನಿಜಕ್ಕೂ ನಿಧನ ಹೊಂದಿರುವ ಸುದ್ದಿ ಹೊರಬಿದ್ದ ಬಳಿಕ, ನಿಧನದ ಬಗ್ಗೆ ಅನುಮಾನ ವ್ಯಕ್ತವಾಯ್ತು.
ಮೂರು ದಿನದ ಹಿಂದಷ್ಟೆ ವಿಡಿಯೋ ಒಂದನ್ನು ಪೂನಂ ಪಾಂಡೆ ಹಂಚಿಕೊಂಡಿದ್ದರು. ವಿಡಿಯೋನಲ್ಲಿ ಖುಷಿಯಾಗಿ ಪೂನಂ ಪಾಂಡೆ ಓಡಾಡಿಕೊಂಡಿದ್ದರು. ಅನಾರೋಗ್ಯ ಇದ್ದ ವ್ಯಕ್ತಿ ಹೀಗೆ ಇರಲು ಸಾಧ್ಯವೇ ಇಲ್ಲ. ಅದರಲ್ಲಿಯೂ ಕ್ಯಾನ್ಸರ್ ರೀತಿಯ ಮಾರಕ ಕಾಯಿಲೆ ಇರುವವರು ಹೀಗೆ ಆರೋಗ್ಯವಾಗಿ ಓಡಾಡಲು ಹೇಗೆ ಸಾಧ್ಯ, ಪೂನಂರ ಮ್ಯಾನೇಜರ್ ಏನನ್ನೋ ಮುಚ್ಚಿಡುತ್ತಿದ್ದಾರೆ ಎಂದು ಕೆಲ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದರು.