ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಟಿ ಹೇಮಾ ಚೌಧರಿ ಆಸ್ಪತ್ರೆಗೆ ದಾಖಲು; ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ..!

Twitter
Facebook
LinkedIn
WhatsApp
ನಟಿ ಹೇಮಾ ಚೌಧರಿ ಆಸ್ಪತ್ರೆಗೆ ದಾಖಲು; ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ..!

ಬೆಂಗಳೂರು: ದಕ್ಷಿಣ ಭಾರತ ಚಲನಚಿತ್ರರಂಗದ ಹೆಸರಾಂತ ನಟಿ ಹೇಮಾ ಚೌಧರಿ (Hema Chaudhary) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ದಿನಗಳಿಂದ ಬ್ರೈನ್ ಹೆಮರೇಜ್‌ನಿಂದ (brain hemorrhage) ಬಳಲುತ್ತಿದ್ದರು ಎನ್ನಲಾಗಿದೆ. ತೀವ್ರ ನಿಗಾ ಘಟಕದಲ್ಲಿ ನಟಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೇ ವಿದೇಶದಲ್ಲಿರುವ ಮಗನ ಆಗಮನಕ್ಕೆ ಕಾಯುತ್ತಿದ್ದಾರೆ. ಮೊನ್ನೆಯಷ್ಟೇ (ಡಿ.18)ನಟಿ ಲೀಲಾವತಿ ಅವರ ಪುಣ್ಯತಿಥಿಯಲ್ಲಿ ನಟಿ ಆಗಮಿಸಿ, ವಿನೋದ್ ರಾಜ್ ಅವರಿಗೆ ಸಾಂತ್ವನ ಹೇಳಿದರು.

ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್‌, ಕಮಲ್ ಹಾಸನ್, ಚಿರಂಜೀವಿ, ಮೋಹನ್ ಬಾಬು, ಮಲಯಾಳಂ ಸೂಪರ್ ಸ್ಟಾರ್ ಪ್ರೇಮ್ ನಜೀರ್, ಅನಂತ್ ನಾಗ್, ಶಂಕರ್ ನಾಗ್, ರವಿಚಂದ್ರನ್ ಹೀಗೆ ಅನೇಕ ನಟರ ಜತೆ ಹೇಮಾ ಚೌಧರಿ ತೆರೆ ಹಂಚಿಕೊಂಡಿದ್ದರು.

ಜಯಪ್ರಧಾ, ಜಯಸುಧಾ, ಶ್ರೀದೇವಿ, ಜಯಮಾಲ, ಆರತಿ, ಮಂಜುಳಾ, ಪದ್ಮಪ್ರಿಯ, ಲಕ್ಷ್ಮೀ ಮೊದಲಾದವರ ಜತೆ ತೆರೆಹಂಚಿಕೊಂಡಿದ್ದಾರೆ. ಶುಭಾಶಯ (ಚಲನಚಿತ್ರ) (1977), ಗಾಳಿಮಾತು(1981) ಮತ್ತು ವೀರಪ್ಪನಾಯ್ಕ(1997) ಚಿತ್ರಗಳಲ್ಲಿಯ ಅಮೋಘ ಅಭಿನಯದಿಂದ ಜನಮನ್ನಣೆ ಗಳಿಸಿದ್ದರು.

ಸುವರ್ಣ ವಾಹಿನಿಯ ʻಅಮೃತವರ್ಷಿಣಿʼ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿಯೂ ಜನಪ್ರಿಯರಾಗಿದ್ದಾರೆ. ಅತ್ತೆ ಶಕುಂತಲಾ ದೇವಿಯಾಗಿ ಪಾತ್ರ ನಿಭಾಯಿಸಿದ್ದರು. ಹೇಮಾ ಚೌಧರಿ ಚಲನಚಿತ್ರಕ್ಕೆ ಸಂಬಂಧಿಸಿದ ಅನೇಕ ಸಂಸ್ಥೆಗಳಲ್ಲಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆಯಾಗಿ, ಮೂರು ಬಾರಿ ಸೇವೆ ಸಲ್ಲಿಸಿರುವ ಹೇಮಾ ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿಯೂ ಮೂರು ಬಾರಿ ಕೆಲಸ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸುವರ್ಣ ರತ್ನ ಪಶಸ್ತಿ, ಸುವರ್ಣ ಪರಿವಾರದ ಜನ ಮೆಚ್ಚಿದ ತಾರೆ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳು ಹೇಮಾ ಚೌಧರಿ ಅವರಿಗೆ ಲಭಿಸಿವೆ.

ರಶ್ಮಿಕಾ ಮಂದಣ್ಣಗೆ ಠಕ್ಕರ್- ನ್ಯಾಷನಲ್ ಕ್ರಶ್ ಪಟ್ಟ ಬಾಚಿಕೊಂಡ ತೃಪ್ತಿ ದಿಮ್ರಿ

ಬಾಲಿವುಡ್ ಬ್ಯೂಟಿ ಕ್ವೀನ್ ತೃಪ್ತಿ ಡಿಮ್ರಿ (Triptii Dimri) ಈ ಹೆಸರು ಎಷ್ಟು ಜನಕ್ಕೆ ತಿಳಿದಿತ್ತು? ಆದರೆ ‘ಅನಿಮಲ್’ (Animal) ರಿಲೀಸ್ ಆದ್ಮೇಲೆ ತೃಪ್ತಿಯದ್ದೇ ಹವಾ ಜೋರಾಗಿದೆ. ರಶ್ಮಿಕಾ (Rashmika Mandanna) ಹೀರೋಯಿನ್ ಆಗಿದ್ದರೂ ಪುಟ್ಟ ಪಾತ್ರದಲ್ಲಿ ಬೋಲ್ಡ್ ಆಗಿ ನಟಿಸಿರೋ ತೃಪ್ತಿಯೇ ಹೈಲೈಟ್ ಆಗಿದ್ದಾರೆ. ಹೀಗಾಗಿ ನಯಾ ನ್ಯಾಶನಲ್ ಕ್ರಶ್ ಪಟ್ಟ ತೃಪ್ತಿಗೆ ಹೋಗಿದೆ. ರಶ್ಮಿಕಾಗೆ ಠಕ್ಕರ್‌ ಕೊಟ್ಟು ನ್ಯಾಷನಲ್‌ ಕ್ರಶ್‌ ಪಟ್ಟ ನಟಿ ತೃಪ್ತಿ ಬಾಚಿಕೊಂಡಿದ್ದಾರೆ.

ರಣಬೀರ್ ಕಪೂರ್‌ಗೆ (Ranbir Kapoor) ‘ಅನಿಮಲ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಆದರೆ ತೃಪ್ತಿ ದಿಮ್ರಿ ಅನ್ನೋ ನಯಾ ಹುಡುಗಿಯದ್ದು ಒಂದು ಪಾತ್ರ ಇದೆ ಅನ್ನೋದೇ ರಿಲೀಸ್‌ಗೂ ಮುನ್ನ ರಿವೀಲ್ ಕೂಡ ಆಗಿರಲಿಲ್ಲ. ಆದರೆ ಯಾವಾಗ ‘ಅನಿಮಲ್’ ಸಿನಿಮಾ ಅದ್ಯಾವಾಗ ಎಂಟ್ರಿ ಕೊಡ್ತೋ, ಬಳಿಕ ತೃಪ್ತಿ ದಿಮ್ರಿಯನ್ನ ಫಾಲೋ ಮಾಡೋವ್ರ ಸಂಖ್ಯೆ ಹೆಚ್ಚಾಯ್ತು. ಅಸಲಿಗೆ ತೃಪ್ತಿಯೇ ಅಸಲಿ ನ್ಯಾಶನಲ್ ಕ್ರಶ್ ಎಂಬ ಆಂದೋಲನ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

ರಶ್ಮಿಕಾ ಮಂದಣ್ಣಗೆ ಠಕ್ಕರ್- ನ್ಯಾಷನಲ್ ಕ್ರಶ್ ಪಟ್ಟ ಬಾಚಿಕೊಂಡ ತೃಪ್ತಿ ದಿಮ್ರಿ

ಹಾಡಿಲ್ಲ ಹೆಚ್ಚು ದೃಶ್ಯಗಳಿಲ್ಲ ಆದರೂ ರಣಬೀರ್ ಜೊತೆ ತೃಪ್ತಿ ಕೆಮಿಸ್ಟ್ರಿ ಫ್ಯಾನ್ಸ್‌ಗೆ ಹುಚ್ಚು ಹಿಡಿಸಿದೆ. ಪರಿಣಾಮ ತೃಪ್ತಿ ಹವಾ ಜೋರಾಗಿದೆ. ಹೋಗಿ ಬಂದು ಟ್ರೋಲ್ ಆಗುವ ರಶ್ಮಿಕಾಗೆ ಇದೀಗ ಫ್ಯಾನ್ಸ್ ತೃಪ್ತಿಯೇ ನ್ಯಾಷನಲ್ ಕ್ರಶ್ ನೀನಲ್ಲ ಎಂದು ಸಂದೇಶ ರವಾನಿಸಿ ಕಾಲೆಳೆದಿದ್ದಾರೆ. ನಾಯಕಿಯಾಗಿದ್ರೂ ಸೈಡ್‌ಲೈನ್ ಆಗಿರೋ ರಶ್ಮಿಕಾಗೆ ಇದು ಬಯಸದೆ ಬಂದ ಸಂಕಟ.

ಸೌತ್‌ನಲ್ಲಿ ಶ್ರೀಲೀಲಾ (Sreeleela) ಠಕ್ಕರ್ ಕೊಡ್ತಿದ್ರೆ, ಬಾಲಿವುಡ್‌ನಲ್ಲಿ ತಮ್ಮದೇ ಚಿತ್ರದ ನಾಯಕಿ ತೃಪ್ತಿ ದಿಮ್ರಿ ಸೆಡ್ಡು ಹೊಡೆಯುತ್ತಿದ್ದಾರೆ. ಒಟ್ನಲ್ಲಿ ‘ಅನಿಮಲ್’ ಸಕ್ಸಸ್ ಆಯ್ತಾಲ್ಲ ಅಂದುಕೊಂಡ್ರೆ ರಶ್ಮಿಕಾ ಮಂದಣ್ಣಗೆ ಹೊಸ ತಲೆನೋವು ಶುರುವಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist