ವೀರ್ ಸಾವರ್ಕರ್ ಸಿನಿಮಾಗಾಗಿ 30 ಕೆಜಿ ದೇಹತೂಕ ಕಡಿಮೆ ಮಾಡಿದ ನಟ ರಣದೀಪ್ ಹೂಡಾ.!
ವಿನಾಯಕ ದಾಮೋದರ ಸಾವರ್ಕರ್ ಅವರ ಬದುಕನ್ನಾಧರಿಸಿದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾ ಬರುತ್ತಿರುವುದು ಎಲ್ಲರಿಗೂ ತಿಳಿದಿದೆ. ಈ ಸಿನಿಮಾದಲ್ಲಿ ಸಾವರ್ಕರ್ ಪಾತ್ರವನ್ನು ಮಾಡುವುದರ ಜೊತೆಗೆ ನಿರ್ದೇಶನವನ್ನು ಮಾಡಿದ್ದಾರೆ ನಟ ರಣದೀಪ್ ಹೂಡಾ. ಸದ್ಯ ಈ ಸಿನಿಮಾದ ಒಂದು ಫೋಟೋವನ್ನು ಹಂಚಿಕೊಂಡು ಎಲ್ಲರಿಗೂ ಅಚ್ಚರಿ ನೀಡಿದ್ದಾರೆ ಅವರು.
B-TOWN: ಬಾಲಿವುಡ್‌ನಲ್ಲಿ ನಟ ರಣದೀಪ್ ಹೂಡಾ ಅವರು ತಮ್ಮದೇ ಆದ ಒಂದಷ್ಟು ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಪ್ರತಿ ಬಾರಿಯು ಸಿನಿಮಾಗಳಲ್ಲಿ ಹೊಸದೇನನ್ನಾದರೂ ಮಾಡುವ ಪ್ರಯತ್ನದಲ್ಲಿ ಅವರಿರುತ್ತಾರೆ. ಸದ್ಯ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾವನ್ನು ರಣದೀಪ್ ಹೂಡಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಹೇಳುವುದಕ್ಕೆ ರಣದೀಪ್ ಹೂಡಾ ಹೊರಟಿದ್ದಾರೆ.
ಸಾವರ್ಕರ್ ಪಾತ್ರದಲ್ಲಿ ರಣದೀಪ್ ಹೂಡಾ
‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರ ಪಾತ್ರವನ್ನು ನಟ ರಣದೀಪ್ ಹೂಡಾ ನಿಭಾಯಿಸಿದ್ದಾರೆ. ನಟನೆ ಜೊತೆಗೆ ಈ ಸಿನಿಮಾದ ನಿರ್ದೇಶನದ ಹೊಣೆ ಕೂಡ ರಣದೀಪ್ ಹೂಡಾ ಅವರದ್ದೇ. ಈ ಚಿತ್ರಕ್ಕಾಗಿ ಅವರು ತಮ್ಮ ದೇಹತೂಕ ಇಳಿಸಿಕೊಂಡಿದ್ದರು. ಅದರ ಫೋಟೋವನ್ನು ಈಗ ಹಂಚಿಕೊಂಡು, ಎಲ್ಲರನ್ನು ದಂಗುಬಡಿಸಿದ್ದಾರೆ ರಣದೀಪ್ ಹೂಡಾ.
ಪಾತ್ರಕ್ಕಾಗಿ 30 ಕೆಜಿ ತೂಕ ಇಳಿಸಿಕೊಂಡಿದ್ದ ರಣದೀಪ್ ಹೂಡಾ
ಬ್ರಿಟಿಷರು ವೀರ್ ಸಾವರ್ಕರ್ ಅವರಿಗೆ ಕಾಲಾಪಾನಿ ಶಿಕ್ಷೆ ನೀಡಿ, ಅಂಡಮಾನ್‌ನ ಜೈಲಿಗೆ ಹಾಕಿದ್ದರು. ಹಾಗಾಗಿ, ಈ ಸಿನಿಮಾದಲ್ಲಿ ಕಾಲಾಪಾನಿ ಶಿಕ್ಷೆಯ ಅವಧಿಯ ದೃಶ್ಯಗಳು ಕೂಡ ಇವೆ. ಅದರಲ್ಲಿ ನಟಿಸುವುದಕ್ಕಾಗಿ ರಣದೀಪ್ ಹೂಡಾ ತಮ್ಮ ದೇಹತೂಕವನ್ನು ಇಳಿಸಿಕೊಂಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋವನ್ನು ಹಂಚಿಕೊಂಡಿರುವ ರಣದೀಪ್ ಹೂಡಾ ಅವರು, ಅದಕ್ಕೆ ಕಾಲಾಪಾನಿ ಎಂದು ಹ್ಯಾಷ್ ಟ್ಯಾಗ್ ನೀಡಿದ್ದಾರೆ. ಮಾರ್ಚ್ 22ರಂದು ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾವು ತೆರೆಗೆ ಬರುತ್ತಿದೆ. ಈಗಾಗಲೇ ಇದರ ಟ್ರೇಲರ್ ಎಲ್ಲರ ಗಮನಸೆಳೆದಿದೆ.
ನಿರ್ದೇಶಕನಾಗಿದ್ದೇಕೆ ರಣದೀಪ್ ಹೂಡಾ?
‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾವನ್ನು ಮೊದಲು ಮಹೇಶ್ ಮಾಂಜ್ರೇಕರ್ ಅವರು ನಿರ್ದೇಶನ ಮಾಡಬೇಕಿತ್ತು. ರಣದೀಪ್ ಹೂಡಾ ಕೇವಲ ನಟರಾಗಿ ಮಾತ್ರ ಕೆಲಸ ಮಾಡಬೇಕಿತ್ತು. ಸಿನಿಮಾ ಘೋಷಣೆ ಆದಾಗ ಇದೇ ಮಾಹಿತಿ ಸಿಕ್ಕಿತ್ತು. ಆದರೆ ದಿನ ಕಳೆದಂತೆ ಒಂದಷ್ಟು ಬದಲಾವಣೆಗಳಾಗಿ, ಮಹೇಶ್ ಮಾಂಜ್ರೇಕರ್ ಅವರು ಸಿನಿಮಾದಿಂದಲೇ ಹೊರನಡೆಯಬೇಕಾಯಿತು. ಆಗ ನಿರ್ದೇಶನ ಮಾಡುವ ಹೊಣೆ ರಣದೀಪ್ ಹೂಡಾಗೆ ಸಿಕ್ಕಿತು.
ಈ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ?
ವೀರ್ ಸಾವರ್ಕರ್ ಪಾತ್ರದಲ್ಲಿ ನಟ ರಣದೀಪ್ ಹೂಡಾ ಕಾಣಿಸಿಕೊಂಡಿದ್ದರೆ, ಅವರ ಪತ್ನಿ ಯಮುನಾಬಾಯಿ ಪಾತ್ರದಲ್ಲಿ ನಟಿ ಅಂಕಿತಾ ಲೋಖಂಡೆ ಅಭಿನಯಿಸಿದ್ದಾರೆ. ಗಣೇಶ್ ದಾಮೋದರ್ ಸಾವರ್ಕರ್ ಪಾತ್ರದಲ್ಲಿ ಅಮಿತ್ ಸೈಲ್, ಮಹಾತ್ಮ ಗಾಂಧಿ ಪಾತ್ರದಲ್ಲಿ ರಾಕೇಶ್ ಚತುರ್ವೇದಿ, ಡಾ ಬಿ ಆರ್ ಅಂಬೇಡ್ಕರ್ ಪಾತ್ರದಲ್ಲಿ ಲೋಕೇಶ್ ಮಿಟ್ಟಲ್ ಬಣ್ಣ ಹಚ್ಚಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರ ಪಾತ್ರವನ್ನು ಸಚಿನ್ ಪಿಳ್ಗೊಂಗಾವಕರ್ ಮಾಡಿದ್ದಾರೆ.
ಈ ಸಿನಿಮಾವನ್ನು ರಣದೀಪ್ ಹೂಡಾ, ಸಂದೀಪ್ ಸಿಂಗ್, ಆನಂದ್ ಪಂಡಿತ್, ಸ್ಯಾಮ್ ಖಾನ್, ಯೋಗೇಶ್ ರಾಹರ್ ಮುಂತಾದವರು ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಹಾಡುಗಳಿಗೆ ಅನು ಮಲ್ಲಿಕ್ ವಿಪಿನ್ ಪಾಟ್ವಾ ಸಂಗೀತ ಸಂಯೋಜನೆ ಮಾಡಿದ್ದಾರೆ.
KAALA PAANI#SwatantryaVeerSavarkar #WhoKilledHisStory#VeerSavarkarOn22March#BTS #behindthescenes #VeerSavarkar #Savarkar pic.twitter.com/n3VfjWmrFF
— Randeep Hooda (@RandeepHooda) March 18, 2024