ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Lavanya: ನಟ ರಾಜ್ ತರುಣ್ ಗೆಳೆಯನಿಗೆ ಶೂನಿಂದ ಹೊಡೆದ ಲಾವಣ್ಯ; ಏನಾಯ್ತು?

Twitter
Facebook
LinkedIn
WhatsApp
Actor Raj Tarun's friend was hit with a shoe by Lavanya

ನಾಯಕ ರಾಜ್ ತರುಣ್ ಮಾಜಿ ಗೆಳತಿ ಲಾವಣ್ಯ (Lavanya)ನ್ಯೂಸ್ ಲೈವ್ ನಿಂದ ಜನಪ್ರಿಯ ಆರ್ ಜೆ ಶೇಖರ್ ಭಾಷಾಗೆ ಶೂನಿಂದ ಹೊಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಹೀರೋ ರಾಜ್ ತರುಣ್ ಹಾಗೂ ಮಾಜಿ ಪ್ರೇಯಸಿ ಲಾವಣ್ಯ ವಿವಾದ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ. ತೆಲುಗು ನಟ ರಾಜ್ ತರುಣ್ ಖಾಸಗಿ ಜೀವನ ವಿವಾದವಾಗಿದೆ. ರಾಜ್ ತರುಣ್ ಮಾಜಿ ಪ್ರೇಯಸಿ ಲಾವಣ್ಯ, ರಾಜ್ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ನಾಯಕ ರಾಜ್ ತರುಣ್ ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯಾಗಿಸಿದ್ದಾನೆ ಎಂದು ಲಾವಣ್ಯ ಆರೋಪ ಮಾಡಿದ್ದು ಗೊತ್ತೇ ಇದೆ. ನರಸಿಂಗಿ ಪೊಲೀಸರಿಗೂ ದೂರು ನೀಡಿದ್ದಾರೆ.

ಇದರ ಜೊತೆಗೆ ಮಾಧ್ಯಮಗಳಲ್ಲಿ ರಾಜ್ ತರುಣ್ ಬಗ್ಗೆ ಹಲವು ಆರೋಪಗಳನ್ನು ಸಹ ಮಾಡುತ್ತಿದ್ದು, ರಾಜ್ ತರುಣ್ ಮನೆಯ ಮುಂದೆ ಪ್ರತಿಭಟನೆಯನ್ನೂ ಮಾಡಿದ್ದಾರೆ. 

ರಾಜ್ ತರುಣ್ ವಿವಾದ ಕುರಿತು ತೆಲುಗು ನ್ಯೂಸ್ ಚಾನೆಲ್ ಒಂದು ಚರ್ಚೆ ಆಯೋಜಿಸಿತ್ತು. ಚರ್ಚೆಯಲ್ಲಿ ರಾಜ್ ತರುಣ್ ಪರವಾಗಿ ಅವರ ಗೆಳೆಯ ಆರ್​ಜೆ ಶೇಖರ್ ಭಾಷಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಆರ್​ಜೆ ಶೇಖರ್ ಲಾವಣ್ಯ ಬಗ್ಗೆ ಮಾತನಾಡುತ್ತಿದ್ದರು, ಎದುರು ಕೂತಿದ್ದ ಲಾವಣ್ಯ, ಕಾಲಿನಲ್ಲಿ ಧರಿಸಿದ್ದ ಚಪ್ಪಲಿ ತೆಗೆದು ಆರ್​ಕೆ ಶೇಖರ್ ಕಡೆಗೆ ಎಸೆದರು. ಚಪ್ಪಲಿ ತಮಗೆ ತಾಗುತ್ತಿದ್ದಂತೆ ಮೇಲೆದ್ದ ಶೇಖರ್, ಲಾವಣ್ಯ ಮೇಲೆ ಜಗಳಕ್ಕೆ ಹೋದರು, ಜೋರಾಗಿ ಕಿರುಚಾಡಿ ತುಸು ಎಳೆದಾಡಿದರೂ ಸಹ. ಆದರೆ ಕೈ ಮಾಡಲಿಲ್ಲ.

ಲಾವಣ್ಯ, ಆರ್​ಜೆ ಶೇಖರ್ ಮೇಲೆ ಚಪ್ಪಲಿ ಎಸೆದ ವಿಡಿಯೋ ಇದೀಗ ವೈರಲ್ ಆಗಿದೆ. ಚಪ್ಪಲಿ ಏಟು ತಿಂದ ಶೇಖರ್ ಸಹ ಅದೇ ಶೋನಲ್ಲಿ ಲಾವಣ್ಯ ವಿರುದ್ಧ ನಿಂದನೆ ಮಾಡಿದ್ದಾರೆ. ಅದಕ್ಕೆ ಲಾವಣ್ಯ, ‘ಶೇಖರ್ ಹೇಳಿದ ಮಾತು ಸರಿಯಿಲ್ಲ ಅದಕ್ಕೆ ಹೊಡೆದೆ’ ಎಂದಿದ್ದಾರೆ. ಅಲ್ಲದೆ, ‘ನನ್ನ ಮೇಲೆ ಬೇಕಾದರೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟುಕೋ ಹೋಗು’ ಎಂದು ಆವಾಜ್ ಹಾಕಿದ್ದಾರೆ.

ರಾಜ್ ತರುಣ್ ಹಾಗೂ ಲಾವಣ್ಯ ಹಲವು ವರ್ಷಗಳಿಂದ ಲಿವಿನ್ ರಿಲೇಷನ್​ನಲ್ಲಿದ್ದರು. ಮದುವೆ ಆಗುವುದಾಗಿ ರಾಜ್ ತರುಣ್, ಲಾವಣ್ಯಗೆ ಭರವಸೆ ನೀಡಿದ್ದರಂತೆ. ಆದರೆ ಇತ್ತೀಚೆಗೆ ರಾಜ್ ತರುಣ್ ಹಿಮಾಚಲ ಪ್ರದೇಶ ಮೂಲದ ನಾಯಕಿ ಮಾಳವಿ ಮಲ್ಹೋತ್ರಾ ಜೊತೆ ಸಂಬಂಧದಲ್ಲಿದ್ದಾರೆ ಎಂದು ಲಾವಣ್ಯ ಆರೋಪಿಸಿದ್ದಾರೆ. 

ಮಾಳವಿ ಮಲ್ಹೋತ್ರಾ ಸಹ ಲಾವಣ್ಯ ವಿರುದ್ಧ ದೂರು ನೀಡಿದ್ದು, ತನ್ನ ಸಹೋದರ ಹಾಗೂ ಪೋಷಕರಿಗೆ ಕೊಲೆ ಬೆದರಿಕೆಯನ್ನು ಲಾವಣ್ಯ ಹಾಕಿದ್ದಾರೆಂದು ಆರೋಪ ಮಾಡಿದ್ದಾರೆ.

ರಾಜ್ ತರುಣ್ ಕಳೆದ ಹತ್ತು ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿದ್ದಾರೆ. ಹಲವು ಜನಪ್ರಿಯ ಸಿನಿಮಾಗಳಲ್ಲಿ ರಾಜ್ ತರುಣ್ ನಟಿಸಿದ್ದಾರೆ. ‘ಉಯ್ಯಾಲ ಜಂಪಾಲ’, ‘ಕುಮಾರಿ 21 ಎಫ್’, ‘ಸಿನಿಮಾ ಚೂಪಿಸ್ತಾ ಮಾವ’, ‘ರಂಗುಲ ರತ್ನಮ್ಮ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಾಗಾರ್ಜುನ ಜೊತೆಗೆ ‘ನಾ ಸಾಮಿ ರಂಗ’ ನಲ್ಲಿ ನಟಿಸಿದ್ದರು. ಇದೀಗ ‘ತಿರಗಬಡರಾ ಸಾಮಿ’ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದಲ್ಲಿ ರಾಜ್​ ತರುಣ್​ರ ಹೊಸ ಗರ್ಲ್​ಫ್ರೆಂಡ್ ಮಾಳವಿ ಮಲ್ಹೋತ್ರಾ ನಾಯಕಿ.

ಡಿವೋರ್ಸ್ ವದಂತಿ ನಡುವೆ ಮಗಳ ಜೊತೆ ನ್ಯೂಯಾರ್ಕ್ ವೆಕೇಷನ್ ಮುಗಿಸಿ ಬಂದ ಐಶ್ವರ್ಯಾ ರೈ

ಬಾಲಿವುಡ್ ನಟಿ ಐಶ್ವರ್ಯಾ ರೈ(Aishwarya Rai) ಆಗಾಗ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಡಿವೋರ್ಸ್ (Divorce) ವದಂತಿ ನಡುವೆ ಮಗಳ ಜೊತೆ ನಟಿ ನ್ಯೂಯಾರ್ಕ್ ವೆಕೇಷನ್ ಮುಗಿಸಿ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪುತ್ರಿ ಆರಾಧ್ಯಾ ಜೊತೆ ನಟಿ ಎಂಟ್ರಿ ಕೊಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ನ್ಯೂಯಾರ್ಕ್ ವೆಕೇಷನ್‌ಗೆ ಮಗಳ ಜೊತೆ ಐಶ್ವರ್ಯಾ ರೈ ತೆರಳಿದ್ದರು. ಆ.1  ಪುತ್ರಿಯೊಂದಿಗೆ ಭಾರತಕ್ಕೆ ಮರಳಿದ್ದಾರೆ.

ನಟಿ ಬ್ಲ್ಯಾಕ್ ಕಲರ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಆರಾಧ್ಯಾ ನೇರಳೆ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಇಬ್ಬರೂ ನಗು ನಗುತ್ತಲೇ ಕ್ಯಾಮೆರಾಗೆ ಸ್ಮೈಲ್ ಮಾಡಿದ್ದಾರೆ. ಈ ವೇಳೆ, ಇವರ ಜೊತೆ ಅಭಿಷೇಕ್ ಬಚ್ಚನ್ (Abhishek Bachchan) ಇಲ್ಲದೇ ಇರೋದು ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ಇತ್ತೀಚೆಗೆ ಅಂಬಾನಿ ಮನೆ ಮಗನ ಮದುವೆಯಲ್ಲಿ ಅಭಿಷೇಕ್ ಬಚ್ಚನ್ ಕುಟುಂಬದ ಜೊತೆ ನಟಿ ಕಾಣಿಸಿಕೊಳ್ಳದೆ ಮಗಳ ಜೊತೆ ಬಂದು ಕ್ಯಾಮೆರಾ ಪೋಸ್ ನೀಡಿದ್ದರು. ಅಂದಿನಿಂದಲೇ ಇಬ್ಬರ ಡಿವೋರ್ಸ್ ಬಗ್ಗೆ ಗುಸು ಗುಸು ಶುರುವಾಗಿತ್ತು. ಇದುವರೆಗೂ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist