ಚಲನಚಿತ್ರ ಚಿತ್ರೀಕರಣದ ವೇಳೆ ಆಯಾ ತಪ್ಪಿ ಬೈಕ್ ನಿಂದ ಬಿದ್ದ ನಟ-ನಟಿ: ತಪ್ಪಿದ ಅನಾಹುತ
ಕಳೆದ ಒಂದು ವಾರದಿಂದ ಉಸಿರೆ ಸಿನಿಮಾದ ಚಿತ್ರೀಕರಣ ಮಡಿಕೇರಿ ಸುತ್ತಮುತ್ತ ನಡೆಯುತ್ತಿದೆ. ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡ ಇಂದು ಮಕ್ಕಂಧೂರು ಬಳಿ ನಾಯಕ ಸಂತೋಷ್ (Santosh) ಮತ್ತು ನಾಯಕಿ ಅಪೂರ್ವ (Apoorva) ಬೈಕ್ ಓಡಿಸುವ ದೃಶ್ಯ ಚಿತ್ರಿಸುವ ವೇಳೆ ಆಯಾ ತಪ್ಪಿ ಜಾರಿ ಬಿದ್ದಿದ್ದಾರೆ. ಪರಿಣಾಮ ನಾಯಕ ಮತ್ತು ನಾಯಕಿ ಇಬ್ಬರ ಕಾಲುಗಳಿಗೆ ಪೆಟ್ಟಾಗಿದೆ.
ಬೈಕ್ ಅಪಘಾತವಾಗಿ ಇಬ್ಬರೂ ನೆಲಕ್ಕೆ ಉರುಳಿದ್ದಾರೆ. ಕೂಡಲೇ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹತ್ತಿರದ ಮಾದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ ಮತ್ತು ಇಂದಿನ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಪನೆಮ್ ಪ್ರಭಾಕರ್ ತಿಳಿಸಿದ್ದಾರೆ.
ಆರ್.ಎಸ್.ಪಿ. ಪ್ರೊಡಕ್ಷನ್ಸ್ ಮೂಲಕ ಲಕ್ಷ್ಮಿ ಹರೀಶ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ನಟ ತಿಲಕ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಬೇಜವಾಬ್ದಾರಿ ಪೊಲೀಸ್ ಅಧಿಕಾರಿ, ತನ್ನ ಹೆಂಡತಿಗೆ ಅನಾಮಿಕ ವ್ಯಕ್ತಿಯಿಂದ ಪ್ರಾಣಕ್ಕೆ ಆಪತ್ತು ಬಂದಾಗ ಆತ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ, ತನ್ನ ತಾಯಿಯನ್ನು ಕೊಂದವರ ಮೇಲೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಉಸಿರು ಚಿತ್ರದ ಕಥೆಯಾಗಿದೆ.
ಧ್ರುವ ಸರ್ಜಾ ಮಕ್ಕಳ ನಾಮಕರಣದಲ್ಲಿ ಭಾಗಿಯಾದ ಸಂಜಯ್ ದತ್
ಕನ್ನಡದ ಹೆಸರಾಂತ ನಟ ಧ್ರುವ ಸರ್ಜಾ (Dhruva Sarja) ಇಂದು ತಮ್ಮ ಇಬ್ಬರು ಮಕ್ಕಳ ನಾಮಕರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮಕ್ಕಳ ನಾಮಕರಣ ಸಮಾರಂಭಕ್ಕೆ ಸಾಕ್ಷಿಯಾಗಲು ಬಾಲಿವುಡ್ ನಿಂದ ಸಂಜಯ್ ದತ್ (Sanjay Dutt) ಆಗಮಿಸಿದ್ದರು. ಸಂಜಯ್ ಮತ್ತು ಧ್ರುವ ಕೆಡಿ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.
ಅಯೋಧ್ಯೆಯಲ್ಲಿ ಬಾಲರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವ ಈ ಹೊತ್ತಿನಲ್ಲಿ ನಟ ಧ್ರುವ ಸರ್ಜಾ ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ. ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ನಾಮಕರಣ ಶಾಸ್ತ್ರ ನಡೆದಿದೆ.
ಅಯೋಧ್ಯೆ ಬಾ;ಲರಾಮ ಪ್ರಾಣ ಪ್ರತಿಷ್ಠಾಪನೆ ವೇಳೆಯೇ ನಾಮಕರಣ ಶಾಸ್ತ್ರ ನಡೆದಿದ್ದು, ಮಕ್ಕಳಿಗೆ ವಿಶೇಷ ಮತ್ತು ಅರ್ಥಪೂರ್ಣವಾದ ಹೆಸರನ್ನೇ ಇಟ್ಟಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ ಅಂಡ್ ಫ್ಯಾಮಿಲಿ ಆಂಜನೇಯನ ಭಕ್ತರು. ಆಂಜನೇಯ ಗುಡಿಯನ್ನೇ ಈ ಕುಟುಂಬ ನಿರ್ಮಾಣ ಮಾಡಿದೆ. ಧ್ರುವ ಸಿನಿಮಾದಲ್ಲಿ ಹನುಮನ ಕುರಿತಾಗಿ ಸನ್ನಿವೇಶವೋ, ಹಾಡೋ ಇದ್ದೇ ಇರುತ್ತದೆ. ಹನುಮನ ಉಸಿರಾಗಿರುವ ರಾಮನ ಮಂದಿರ ಉದ್ಘಾಟನೆ ದಿನದಂದು ತಮ್ಮ ಪುತ್ರಿ ಹಾಗೂ ಪುತ್ರನಿಗೆ ನಾಮಕರಣ ಮಾಡಿದ್ದು ವಿಶೇಷ.
ಇಂದು ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ ಮಾಡಿದ್ದರೆ, ಅನೇಕ ಮಹಿಳೆಯರು ಇಂದೇ ಹೆರಿಗೆ ಮಾಡಿಸುವಂತೆ ವೈದ್ಯರ ದುಂಬಾಲು ಬಿದ್ದಿರುವ ಘಟನೆಗಳು ನಡೆದಿವೆ. ರಾಮ ಮಂದಿರ ಉದ್ಘಾಟನೆ ದಿನವೇ ಹೆರಿಗೆ ಮಾಡಿಸಿಕೊಳ್ಳಲು ಹಲವರು ತಯಾರಿ ಕೂಡ ಮಾಡಿಕೊಂಡಿದ್ದರು. ಅಷ್ಟರ ಮಟ್ಟಿಗೆ ರಾಮ ಜನರ ಮನಸ್ಸಲ್ಲಿ ಬೇರೂರಿದ್ದಾನೆ.