ಯುವ ಕಾಂಗ್ರೆಸ್ ಉಪಾಧ್ಯಕ್ಷೆಯ ಮೊಬೈಲ್ ಗೆ ಅಶ್ಲೀಲ ವಿಡಿಯೋ ಕಳುಹಿಸಿ ವಿಡಿಯೋ ಕರೆ ಮಾಡುತ್ತಿದ್ದ ಆರೋಪಿ ಅರೆಸ್ಟ್..!
ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಅರಿತಾ ಬಾಬು ಅವರ ಮೊಬೈಲ್ ಅಶ್ಲೀಲ ವಿಡಿಯೋ ಕಳುಹಿಸಿದ ಆರೋಪಿಯನ್ನು ಅಬ್ದುಲ್ಲಾ ಅವರ ಪುತ್ರ ಶಮೀರ್ (35) ಎಂದು ಗುರುತಿಸಲಾಗಿದ್ದು, ಮಲಪ್ಪುರಂ ಜಿಲ್ಲೆಯ ಅಮರಂಬಲಂನ ದಕ್ಷಿಣ ಮಾಂಬೋಯಿಲ್‌ನ ಎಲಾಟ್ ಪರಂಪಿಲ್‌ನಲ್ಲಿರುವ ಆತನ ಮನೆಯಲ್ಲಿ ಕಾಯಂಕುಲಂ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯ ನಂತರ ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಕಂಪನಿ ಅಧಿಕಾರಿಗಳು ಕೆಲಸದಿಂದ ವಜಾಗೊಳಿಸಿದ್ದರು. ನಂತರ ಜಾಮೀನಿನ ಮೇಲೆ ಆತನನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಮೊದಲಿಗೆ ವಿದೇಶಿ ನಂಬರ್ ಗಳಿಂದ ವಾಟ್ಸ್ ಆಪ್ ನಲ್ಲಿ ನಿರಂತರ ವಿಡಿಯೋ ಕಾಲ್ ಮಾಡುತ್ತಿದ್ದ. ಬಳಿಕ ಫೋನ್‌ಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದರು.
ಕೃತ್ಯಕ್ಕೆ ಸಂಬಂಧಿಸಿದಂತೆ ಅರಿತಾ ಬಾಬು ಕಾಯಂಕುಲಂ ಡಿವೈಎಸ್ಪಿ ಕಚೇರಿಗೆ ಆಗಮಿಸಿ ದೂರು ದಾಖಲಿಸಿದ್ದಾರು. ಯಾವುದೇ ಹುಡುಗಿಯ ವಿರುದ್ಧ ಈ ರೀತಿ ವರ್ತಿಸಬಾರದು ಅದಕ್ಕಾಗಿಯೇ ದೂರು ದಾಖಲಿಸಿದ್ದೇನೆ ಎಂದು ದೂರು ದಾಖಲಿಸಿದ ನಂತರ ಅರಿತಾ ಬಾಬು ಅವರ ಪ್ರತಿಕ್ರಿಯೆ ನೀಡಿದ್ದರು. ಪೊಲೀಸ್ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ಶಮೀರ್. ತನ್ನ ಕೃತ್ಯಕ್ಕೆ ಕ್ಷಮೆಯಾಚಿಸಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದ.
ಘಟನೆಯ ಹಿನ್ನೆಲೆ
ಅರಿತಾ ಬಾಬು ಅವರ ಮೊಬೈಲ್‌ಗೆ ಕತಾರ್‌ನಲ್ಲಿರುವ ಫೋನ್ ಸಂಖ್ಯೆಯಿಂದ ನಿರಂತರವಾಗಿ ವೀಡಿಯೊ ಕರೆ ಬಂದಿತ್ತು. ಯಾರು ಕರೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, ಪ್ರತಿಕ್ರಿಯಿಸದೆ ವೀಡಿಯೊ ಕರೆ ಪುನರಾವರ್ತನೆಯಾಗುತ್ತಿತ್ತು. ಫೋನ್ ಕ್ಯಾಮೆರಾದಿಂದ ಕರೆ ಮಾಡುವವರ ಮುಖವನ್ನು ಮರೆಮಾಚಿ ಕರೆಗಳನ್ನು ಮಾಡಲಾಗುತ್ತಿತ್ತು. ನಂತರ ಅರಿತ ಬಾಬು ಅವರು ಕರೆ ಮಾಡಿದವರ ಫೋನ್ ಸಂಖ್ಯೆಯನ್ನು ತನ್ನ ಸ್ನೇಹಿತರಿಗೆ ನೀಡಿದ್ದರು. ನಂತರ ಅರಿತಾ ಬಾಬು ಅವರು ತಮ್ಮ ಫೇಸ್ ಬುಕ್ ನಲ್ಲಿ ಕೃತ್ಯಕ್ಕೆ ಸಂಬಂಧಿಸಿದಂತೆ ಚಿತ್ರಗಳ ಸಮೇತ ಪೋಸ್ಟ್ ಹಂಚಿಕೊಂಡಿದ್ದರು.
ಈ ಬಗ್ಗೆ ಬರೆದಿರು ಅವರು, ‘ಇದು ಯಾರನ್ನೂ ಕೊಲ್ಲಲು ಅಲ್ಲ, ಆದರೆ ತನ್ನ ಖಾಸಗಿತನಕ್ಕೆ ನುಸುಳುವ ಮತ್ತು ಅಶ್ಲೀಲ ವೀಡಿಯೊಗಳನ್ನು ಕಳುಹಿಸಿ ಸಂತೋಷಪಡುವವರನ್ನು ಬಹಿರಂಗಪಡಿಸಲು’ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದರು.