ಚಿನ್ನ ಕದ್ದ ಆರೋಪ ; ನಟಿ ಸೌಮ್ಯ ಶೆಟ್ಟಿ ಅರೆಸ್ಟ್.!
ವೈಜಾಗ್‌ನ ಸೌಮ್ಯಾ ಶೆಟ್ಟಿಗೆ ನಟನೆ ಮತ್ತು ಸಿನಿಮಾ ಹುಚ್ಚು. ಆ ಆಸಕ್ತಿಯಿಂದ ಅನೇಕ ಕಿರುಚಿತ್ರಗಳಲ್ಲಿ ನಟಿಸಿದಳು. ಚಿಕ್ಕ ಚಿತ್ರಗಳಲ್ಲೂ ಆಕೆಗೆ ಅವಕಾಶಗಳು ಬಂದವು. ಯುವರ್ಸ್ ಲವಿಂಗ್ಲಿ ಮತ್ತು ದಿ ಟ್ರಿಪ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ನಂತರ ಅವಕಾಶಗಳು ಬರದ ಕಾರಣ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ ಮಾಡುತ್ತಾ ಸಿನಿಮಾ ಅವಕಾಶಗಳಿಗಾಗಿ ಪ್ರಯತ್ನ ನಡೆಸುತ್ತಿದ್ದಳು. ಈ ನಡುವೆ ಆಡಿಷನ್‌ಗಳನ್ನು ನೀಡುವಾಗ ವೈಜಾಗ್‌ನ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಅವರ ಪುತ್ರಿ ಮೌನಿಕಾ ಎನ್ನುವವರು ನಟಿಗೆ ಪರಿಚಯವಾಗಿದ್ದಾರೆ.
2016ರಲ್ಲಿ ಏರ್ಪಟ್ಟ ಈ ಕಾಂಟ್ಯಾಕ್ಟ್ ಆಗಾಗ ಅವರ ಮನೆಗೆ ಹೋಗುವ ಹಂತಕ್ಕೆ ಬಂದಿತ್ತು. ಇದೇ ವೇಳೆ ಸೌಮ್ಯಾಗೆ ಮೌನಿಕಾ ಮನೆಯಲ್ಲಿ ಒಂದು ಕಿಲೋ ಚಿನ್ನ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೇಗಾದರೂ ಮಾಡಿ ಚಿನ್ನವನ್ನು ಹೊಡೆಯಬೇಕೆಂದುಕೊಂಡಿದ್ದ ಸೌಮ್ಯಾ.. ಮೌನಿಕಾ ಮನೆಗೆ ಹೋದಾಗಲೆಲ್ಲಾ ಸೀದಾ ಬೆಡ್ ರೂಮಿಗೆ ಹೋಗಿ ಬಾತ್ ರೂಂ ಬಳಸುತ್ತೇನೆ ಎಂದು ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದಳು. ಸೌಮ್ಯಾ ಎರಡ್ಮೂರು ಸಲ ಹೀಗೆ ಮಾಡಿದ್ದು, ಪ್ರತಿ ಸಲ ತನ್ನ ಕೈಚಳಕ ತೋರಿಸಿ ಚಿನ್ನವನ್ನು ಕದ್ದಿದ್ದಾರೆ.
ಪೆಬ್ರವರಿ 23ರಂದು ಯಲಮಂಚಿಯಲ್ಲಿ ನಡೆಯಲಿರುವ ಸಂಬಂಧಿಕರ ಮದುವೆಗೆ ತೆರಳಲು ಮೌನಿಕಾ ಕುಟುಂಬಸ್ಥರು ಸಜ್ಜಾಗಿದ್ದಾರೆ. ಈ ಹಿನ್ನಲೆ ಮನೆಯ ರೂಂ ನಲ್ಲಿ ಬೀರುವಿನ ಲಾಕರ್ ತೆಗೆದಿದ್ದಾರೆ. ಈ ವೇಳೆ ಲಾಕರ್ ನಲ್ಲಿ ಆಭರಣ ನಾಪತ್ತೆಯಾಗಿದು ತಿಳಿದು ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಸುಳಿವು ತಂಡದ ಸಹಾಯದಿಂದ ಬೀರುವಿನಲ್ಲಿದ್ದ ಬೆರಳಚ್ಚು ಕಲೆಹಾಕಿದ್ದಾರೆ. ಅಲ್ಲದೇ ಪ್ರಸಾದ್ ಬಾಬು ಹಾಗೂ ಮೌನಿಕಾ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಇತ್ತೀಚೆಗೆ ತಮ್ಮ ಬಳಿ ಬಂದ ಹಲವರ ಮೇಲೆ ಅನುಮಾನವಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ಎರಡು ತಂಡಗಳನ್ನು ರಚಿಸಿ 11 ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅವರಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬಳಿಕ ನಟಿಯನ್ನು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ನಟಿ ಅರೆಸ್ಟ್ ಮಾಡಿರುವ ಪೊಲೀಸರು ಆಕೆಯಿಂದ 74 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.